
A petition has been filed to the district in-charge minister, claiming that all the roads in Gangavathi city are riddled with potholes and are causing accidents.
ಗಂಗಾವತಿ:ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದರು.
ನಗರದ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು ತಗ್ಗು ಗುಂಡಿಗಳಿಂದ ಕೂಡಿದ ಅಪಘಾತಗಳು ಸOಭವಿಸುತ್ತಿವೆ.ಜನತೆಶಾಪಹಾಕುತ್ತಿದ್ದಾರೆ.ಹುಲಿಗೆಮ್ಮ ದೇವಿ ಮತ್ತು ಆಂಜನೇಯ ದೇವಸ್ಥಾನ ಗಳಿಗೆ ವಿವಿಧ ಪ್ರದೇಶಗಳಿಂದ ನಗರದಒಳಗಡೆಯಿಂದ ವಾಹನಗಳು ಸಂಚರಿಸುತ್ತಿವೆ. ರಸ್ತೆಯಲ್ಲಿನ ಗುಂಡಿಗಳನ್ನು ಕೇವಲ ಮಣ್ಣು ಅಥವಾ ಕಳಪೆಮಟ್ಟದ ಸಿಮೆಂಟ್ ಕಲ್ಲುಗಳಿಂದ ತೇಪೆ ಹಚ್ಚಿ ತಾತ್ಕಾಲಿಕ ರಿಪೇರಿ ಮಾಡುವ ಬದಲಾಗಿ ಶಾಶ್ವತ ರಿಪೇರಿ ಮಾಡಬೇಕು.
ಅಂಗಡಿಯ ಮಾಲೀಕರು ನಗರದಲ್ಲಿ ಫುಟ್ ಬಾತ್ ಒತ್ತುವರಿ ಮಾಡಿದ್ದಾರೆ. ಇದರಿಂದ ಪಾದಚಾರಿಗಳಿಗೆ,ವಾಹನ ಸವಾರರಿಗೆ ತೊಂದರೆಯಾಗಿದ್ದಲ್ಲದೆ ದ್ವಿಚಕ್ರ ವಾಹನಗಳು , ಕಾರುಗಳ ಪಾರ್ಕಿಂಗ್ ಸಮಸ್ಯೆಯಾಗಿರುತ್ತದೆ.ಸಂಚಾರ ಸುಗಮವಾಗಲು ಫುಟ್ಬಾತ್ ತೆರವುಗೊಳಿಸುವ ಕ್ರಮಕೈಗೊಳ್ಳಬೇಕು.
ಡಾಕ್ಟರ್ ಚಂದ್ರಪ್ಪ ಆಸ್ಪತ್ರೆ ಹಾಗೂ ಬಸ್ ನಿಲ್ದಾಣದ ಸಮೀಪ ಇದ್ದ ಡಿವೈಡರ್ ಇರುವದನ್ನು ಕಿತ್ತು ಹಾಕಿ ಮತ್ತೇ ಹೊಸದಾಗಿ ಮಾಡುತ್ತಿರುವದು ಖಂಡನೀಯ. ಹತ್ತು ವರ್ಷಗಳಲ್ಲಿ ಮೂರ್ನಾಲ್ಕು ಬಾರಿ ಮಾಡಿ ಅದೇ ಸ್ಥಳಕ್ಕೆ ಮಾತ್ರ ಖರ್ಚು ಮಾಡಲಾಗುತ್ತಿದೆ. ಡಾಕ್ಟರ್ ಸೋಮರಾಜು ಆಸ್ಪತ್ರೆ ಯಿಂದ ಯಶೋಧ ಆಸ್ಪತ್ರೆಯವರೆಗೆ ಡಿವೈಡರ್ ಯಾಕಿಲ್ಲ?. ಅಲ್ಲಿ ಕಾಮಗಾರಿಗೆ ದುಡ್ಡಿಲ್ಲವೇ? ಅಥವಾ ಅಲ್ಲಿ ಮಾಡಲು ಏನಾದರೂ ಸಮಸ್ಯೆ ಇದೆಯಾ? ನಗರದಲ್ಲಿ ಎಲ್ಲಿ ಡಿವೈಡರ್ ಇಲ್ಲವೋ,ಅಲ್ಲಿ ಡಿವೈಡರ್ ನಿರ್ಮಾಣ ಮಾಡಬೇಕು.
ಕನಕದಾಸ್ ಸರ್ಕಲ್ ನಲ್ಲಿರುವ ವಿದ್ಯುತ್ ಕಂಬವು ಸರ್ಕಲ್ ಮಧ್ಯದಲ್ಲಿ ಇರುವುದಿಲ್ಲ. ಆದ್ದರಿಂದ ನಿಯಮ ಪಾಲನೆ ಮಾಡಲು ಸಾಧ್ಯವಾಗದೇ ಲಾರಿ,ಟ್ಯಾಕ್ಟರ್, ಬಸ್, ಕಾರು ಇತ್ಯಾದಿ ವಾಹನಗಳು ಒಂದೇ ಬದಿಯಲ್ಲಿ ಚಲಿಸುವದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ ಕಾರಣ ವಿದ್ಯುತ್ ಕಂಬ ರಸ್ತೆಯ. ಮಧ್ಯದಲ್ಲಿ ನಿರ್ಮಿಸಬೇಕು.ಹಾಗೂ ಸಂಚಾರಿ ಸಿಗ್ನಲ್ ಅಳವಡಿಸಬೇಕು.
ಗಂಗಾವತಿ ಬ್ರಹತ್ ನಗರವಾಗಿದ್ದು ಬೇರೆ ಊರುಗಳಿಂದ ಬರವುವ ಜನರಿಗೆ ಮಾರ್ಗ ತಿಳಿಯದೇ ತೊಂದರೆ ಪಡುತ್ತಾರೆ. ಮಾರ್ಗ ತಿಳಿಯುವಾದಕ್ಕಾಗಿ ವಡ್ಡರ ಹಟ್ಟಿ ಯಿಂದ ತಹಶೀಲ್ದಾರ್ ಕಚೇರಿಯವರೆಗೆ ಹಾಗೂ ರಾಣಾ ಪ್ರತಾಪ್ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿಯವರೆಗೆ ಹಾಗೂ ಎಲ್ಲಿ ಅವಶ್ಯಕತೆ ಇದೆಯೋ ನಗರದ ಒಳಗಡೆ ಇರುವ ರಸ್ತೆಗಳಲ್ಲಿ,ಸ್ಥಳಗಳ ಮಾಹಿತಿಗಾಗಿ ಮಾರ್ಗದ ನಾಮಫಲಕಗಳನ್ನು ಅಳವಡಿಸಬೇಕು.
ಬಹು ವರ್ಷಗಳ ಹಿಂದೆ ನಿರ್ಮಾಣಗೊಂಡು ಕೋಟ್ಯಂತರ ರೂಪಾಯಿ ಸರಕಾರಕ್ಕೆ ನಷ್ಟ ಮಾಡಿರುವ ಹಾಗೂ ಜನರ ನಿರಿಕ್ಷೆ ಮಾಡುತ್ತಿರುವ ಗಂಗಾವತಿಯ ಸಿಟಿ ಮಾರ್ಕೆಟ್ ಪ್ರಾರಂಭವಾಗಿರುವುದಿಲ್ಲ. ನಾವು ಮನವಿ ಸಲ್ಲಿಸಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. . ಬಾಡಿಗೆಗೆ ವಿಧಿಸಿರುವ ಷರತ್ತುಗಳನ್ನು ಸಡಿಲ ಮಾಡಿ ಬಡ ವ್ಯಾಪಾರಿಗಳಿಗೆ ಅನುಕೂಲ ರೀತಿಯಲ್ಲಿ ನಿಯಮ ಮಾಡಿ, ಯಾವುದೇ ನೆಪ ಹೇಳದೇ ಶೀಘ್ರದಲ್ಲಿ ಪ್ರಾರಂಭ ಮಾಡಲು ಕ್ರಮ ತೆಗೆದುಕೊಳ್ಳಬೇಕು.
ವಿವಿಧ ಊರುಗಳಿಂದ ಹುಲಿಗೆಮ್ಮ ದೇವಿಗೆ ಹೋಗುವ ಹಾಗೂ ಅಂಜನಾದ್ರಿ ಹೋಗುವ ಭಕ್ತರು ಕಾರು, ಬೈಕ್, ಟಾಟಾ ಎಸಿ ವಾಹನಗಳು ಹಾಗೂ ಈ ಭಾಗದಲ್ಲಿ ಅಕ್ರಮ ಮರಳಿನ ದಂದೆ ನಡೆಯುತ್ತಿದ್ದು ಆ ವಾಹನಗಳು ಮತ್ತು ಕಲ್ಲು ಕಲ್ಲು ಗಣಿಗಾರಿಕೆಯ ವಾಹನಗಳು, ಲಾರಿ ಟಿಪ್ಪರ್, ಟ್ಯಾಕ್ಟರ್ ಗಳು ಕೂಡಾ ಬಸ್ ನಿಲ್ದಾಣದ ಮೂಲಕ ಸಂಚರಿಸುವದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗುತ್ತಿದೆ. ಇದನ್ನು ತಪ್ಪಿಸಲು ಬೈಪಾಸ್ ರಸ್ತೆ .(ರಿಂಗ್ ರೋಡ್ ) ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದರು.
ಸರ್ವಾO ಗೀ ಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ,ವಿವಿಧ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗೆ ಇವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಚಾಂದಭಾಷಾ, ಬೋಗೇಶ್ ಆನೆಗುಂದಿ, ಹಾಲಪ್ಪ, ಮತ್ತಿತರರು ಇದ್ದರು