
ಬೀದರ: ಕಲ್ಯಾಣ ಕರ್ನಾಟಕ 371 ಜೆ ಹೋರಾಟ ಸಮಿತಿ ವತಿಯಿಂದ ತೆಲಂಗಾಣ ನಿ. ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಶಿವರತ್ನಂ ಅವರಿಗೆ ಭೇಟಿ ನೀಡಿ ತೆಲಂಗಾಣದ 371 ಡಿ ಯಾವ ರೀತಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ? ರಾಜ್ಕಯದ ಲ್ಯಾಣ ಕರ್ನಾಟಕದಲ್ಲಿ ಅದೇ ಮಾದರಿಯಲ್ಲಿ ಉದ್ಯೋಗ ಹಾಗೂ ಶಿಕ್ಷಣ ಸೌಲಭ್ಯದ ವಿಷಯದಲ್ಲಿ ಹೇಗೆ ಅನುಷ್ಠಾನಗೊಳಿಸಬೇಕು? ಎಂಬ ಇತ್ಯಾದಿ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಶೋಕಕುಮಾರ ಮಾನೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಬೀದರನಲ್ಲಿ ಸುದ್ದಿಗೋಷ್ಠಿ ಕರೆದು ತೆಲಂಗಾಣ ಮತ್ತು ಮರಾಠವಾಡಾಗೆ ನಿಯೋಗ ಕೊಂಡೊಯ್ಯುವ ಕುರಿತು ತಿಳಿಸಲಾಗಿತ್ತು. ಅದರ ಮೊದಲನೇ ಭಾಗವಾಗಿ ಹೈದರಾಬಾದನ ಕ್ರಾಂತಿನಗರದಲ್ಲಿರುವ ನ್ಯಾ. ಶಿವರತ್ನಂ ಅವರ ಕಾನೂನು ಕಚೇರಿಯಲ್ಲಿ ಭೇಟಿ ಮಾಡಿ ಈ ಕುರಿತು ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.
ಸಮಿತಿಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ 371 ಡಿ ತೆಲಂಗಾಣದಲ್ಲಿ ಸಮರ್ಪಕವಾಗಿ ಜಾರಿ ಮಾಡಿದ ಅಧಿಕೃತ ದಾಖಲೆಗಳು ತಮಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ತಮ್ಮ ಹೋರಾಟ ಸಮಿತಿಗೆ ಬೇಕಾಗುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ತೆಲಂಗಾಣ ನಂತರ ಮುಂದಿನ 15 ದಿವಸಗಳ ಒಳಗಾಗಿ ಮರಾಠವಾಡಾದ ಕಾನೂನು ತಜ್ಞರೊಂದಿಗೆ ಚರ್ಚಿಸಲು ಎರಡನೇ ನಿಯೋಗ ನಮ್ಮ ಸಮಿತಿ ವತಿಯಿಂದ ಕೊಂಡೊಯ್ಯಲಾಗುವುದು ಎಂದು ಪೂಜ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯೋಗದಲ್ಲಿ ವಕೀಲರಾದ ಸಮಿತಿಯ ಜಂಟಿ ಕಾರ್ಯದರ್ಶಿ ಶಿವರಾಜ ಜೊಕಾಲೆ ಹಾಗೂ ರಮೇಶ ನೇಳ್ಗೆ ಉಪಸ್ಥಿತರಿದ್ದರು.