Breaking News

ಒಳ್ಳೆಯದಾದರೆ ಸರ್ಕಾರದ ಸಾಧನೆ, ಅವಘಡವಾದರೆ ಅಧಿಕಾರಿಗಳವೈಫಲ್ಯವೇ,ಮ್ಯಾಗಳಮನಿಆರೋಪ

If something goes well, it’s the government’s achievement, if it goes badly, it’s the failure of the officials, blames the Magalmanis

ಜಾಹೀರಾತು
Screenshot 2025 06 08 13 06 32 23 6012fa4d4ddec268fc5c7112cbb265e7

ಗಂಗಾವತಿ -ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಯಶಸ್ವಿಯಾದರೆ ಸರಕಾರ ತಮ್ಮ ಸಾಧನೆ ಎಂದು ಸಮರ್ಥಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಆದರೆ ಅವಘಡ ಸಂಭವಿಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಬಿಂಬಿಸುವ ಪ್ರಯತ್ನ ಮಾಡುವ ಸರಕಾರ ಸರ್ವಾಧಿಕಾರ ಮನೋಭಾವನೆಯಿಂದ ಕೂಡಿದೆ ಎಂದು ಮ್ಯಾಗಳಮನಿ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. RCB ಇದು ಖಾಸಗಿ ಸಂಸ್ಥೆಯಾಗಿದ್ದು, ಬೆಟ್ಟಿಂಗ್ ನಂಥ ಕಾನೂನು ಭಾಹಿರ ಚಟುವಟಿಕೆ ನಡೆಸುತ್ತಿದ್ದು,ಕ್ರಿಕೆಟ್ ಆಟಗಾರರನ್ನು ಹಣಕ್ಕಾಗಿ ಖರೀದಿಸಿ ಪಂದ್ಯಾಟದಲ್ಲಿ ಭಾಗಿಯಾಗುತ್ತಾರೆ. ಇದರಿಂದ ಸಾಕಷ್ಟು ದುಡ್ಡು ಮಾಡುತ್ತಾರೆ. RCB ತಂಡದಲ್ಲಿ ಕೇವಲ ಕರ್ನಾಟಕದ ಆಟಗಾರರು ಮಾತ್ರ ಇರುವುದಿಲ್ಲ. ದೇಶ ವಿದೇಶಿ ಆಟಗಾರರು ಇರುತ್ತಾರೆ. ಅಲ್ಲದೇ ಇವರಿಂದ ಸರ್ಕಾರಕ್ಕೆ ಲಾಭ ಇರುವುದಿಲ್ಲವಾದರೂ ತಾರಾತುರಿಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿರುವದು ಯಾವ ಪುರುಷಾರ್ಥಕ್ಕಾಗಿ?. ಕರ್ನಾಟಕ ತಂಡ ರಣಜಿ ಟ್ರೊಫಿಯಲ್ಲಿ ಎಂಟು ಬಾರಿ ಗೆಲುವು ಕಂಡರೂ ಯಾವುದೇ ಕಾರ್ಯಕ್ರಮ ಮಾಡದೇ ಇರುವದು ದೌರ್ಬಾಗ್ಯ, ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಕ್ರೀಡಾ ಸಚಿವರು ಇಲ್ವಾ, ಬೆಂಗಳೂರಿನಲ್ಲಿ 11 ಜನರ ಸಾವಿನ ಪ್ರಕರಣದಲ್ಲಿ ಇವರ ಪಾತ್ರ ಇಲ್ಲವೇ? ತಾರಾತುರಿಯಲ್ಲಿ ಕಾರ್ಯಕ್ರಮ ಮಾಡಿರುವ ಸರಕಾರ ಪೊಲೀಸ್ ಅಧಿಕಾರಿಗಳ ಮೇಲೆ ತಪ್ಪು ಹೊರಿಸಿ ಅವರ ಮೇಲೆ ಕ್ರಮಕೈಗೊಂಡಿದ್ದು ಅಕ್ಷಮ್ಯ ಅಪರಾಧ ಹಾಗೂ ಪೊಲೀಸರ ಆತ್ಮಸ್ಥರ್ಯ ಕುಗ್ಗಿಸುವ ಪ್ರಯತ್ನ ಇದಾಗಿದೆ. ಅಮಾನತ್ತು ಆದೇಶ ವಾಪಸ್ ಪಡೆದುಕೊಂಡು ಮರು ಆದೇಶ ನೀಡಬೇಕು. ಸರಕಾರವೇ ಇದರ ಹೊಣೆಯನ್ನು ಹೊರಬೇಕು. ಮೃತರರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಬಾರದು. RCB, KSCA, DNA, ಸಂಸ್ಥೆಗಳಿಂದ ಮೃತರ ಕುಟುಂಬಗಳಿಗೆ ತಲಾ ಐವತ್ತು ಲಕ್ಷ ರೂಪಾಯಿ ನೀಡುವOತೆ.ಕ್ರಮ ಕೈಗೊಳ್ಳಬೇಕು ಹಾಗೂ RCB KSCA, DNA ಸಂಸ್ಥೆ ಗಳನ್ನು ಬ್ಯಾನ್ ಮಾಡಬೇಕು ಎಂದು ಮ್ಯಾಗಳಮನಿ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ, ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರ್ಗೇಶ್, ರಾಮಣ್ಣ ರುದ್ರಾಕ್ಷಿ, ಕೃಷ್ಣ ಮೆಟ್ರಿ,ಮಂಜುನಾಥ್,ಬಸವರಾಜ್ ನಾಯಕ, ಜಂಬಣ್ಣ, ಹಾಲಪ್ಪ, ಸೋಮು, ಮುತ್ತಣ್ಣ, ನರಸಪ್ಪ, ಚಿದಾನಂದ, ಹುಲ್ಲೇಶ್, ಕನಕಪ್ಪ, ರಮೇಶ್, ಹನುಮಂತ ಸಾಬೀರ್ ಹುಸೇನ್,. ಮತ್ತಿತರರು ಇದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.