Breaking News

ಮೇಕೆ ಕದ್ದು ಬಕ್ರಿದ್ ಹಬ್ಬಕ್ಕೆ ಮಾರಿದ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

Thieves who stole a goat and sold it for the Bakrid festival have been caught.

ಜಾಹೀರಾತು
Screenshot 2025 06 07 19 44 24 43 6012fa4d4ddec268fc5c7112cbb265e7


ಬಂಗಾರಪ್ಪ ಸಿ .
ಕೊಳ್ಳೇಗಾಲ :ತಾಲೂಕಿನ ಸತ್ಯಗಾಲ ಗ್ರಾಮದ ಮಂದೇ ಕುರಿ ಮೇಯಿಸುವವರ ಮೇಕೆಯನ್ನು ಸತ್ಯಗಾಲದ ಕುರಿ ಮೇಯಿಸುವವರು ತಮ್ಮ ಕುರಿಗಳ ಜೊತೆ ಮೇಕೆಯನ್ನು ಹೊಡೆದುಕೊಂಡು ಬಂದು ಒಂದು ವಾರದ ನಂತರ ಬಕ್ರಿದ್ ಹಬ್ಬಕ್ಕೆ ಮಾರಿ ಸಿಕ್ಕಿಬಿದ್ದ ಮೇಕೆ ಕಳ್ಳರು.
ಸತ್ಯಗಾಲ ಗ್ರಾಮದ ಬಳಿ ಮಂದೇ ಕುರಿಗಳ ಮೇಕೆಯನ್ನು ಸತ್ಯಗಾಲ ಗ್ರಾಮನಿವಹಿಸಿ ನಾರಾಯಣಿ ಮುತ್ತಯ್ಯ ಮಗ ಶಿವ ಸ್ವಾಮಿ ಅಲಿಯಾಸ್ ಚಿಂಚ ಮತ್ತು ನಾಗಣ್ಣನವರ ಮಗ ಸಾಗರ್ ತಮ್ಮ ಕುರಿಗಳ ಜೊತೆ ಮೇಕೆಯನ್ನು ಕದ್ದು ತಂದಿದ್ದಾರೆ. ಇದನ್ನು ಒಂದು ವಾರದಿಂದ ತಮ್ಮ ಮನೆಯಲ್ಲಿ ಇರಿಸಿಕೊಂಡು ಶನಿವಾರ ಬೆಳಿಗ್ಗೆ ಬಕ್ರಿದ್ದ ಹಬ್ಬಕ್ಕೆ ಬಲಿ ಕೊಡಲು ಹಾರೋಹಳ್ಳಿ ಗ್ರಾಮದ ವ್ಯಕ್ತಿಗೆ 19500 ಗಳಿಗೆ ಮಾರಾಟ ಮಾಡಿದ್ದಾರೆ. ಈ ಮೇಕೆಯನ್ನು ಶನಿವಾರ ಬೆಳಗ್ಗೆ 8:00 ಯಲ್ಲಿ ಕಾರಿನಲ್ಲಿ ಹಾಕಿ ಹಾರೋಹಳ್ಳಿ ಗ್ರಾಮಕ್ಕೆ ಸಾಗಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಶಿಕ್ಷಕರಾದ ಶ್ರೀಧರ್ ಅವರು ಈ ಘಟನೆಯನ್ನು ಗಮನಿಸಿ ದ್ದಾರೆ. ಸ್ವಲ್ಪ ಸಮಯದ ನಂತರ ಮಂದೆ ಕುರಿ, ಮೇಕೆ ಮಾಲೀಕ ತನ್ನ ಮೇಕೆಯನ್ನು ಹುಡುಕಿಕೊಂಡು ಬಂದಿದ್ದಾನೆ. ಶಿಕ್ಷಕರ ಬಳಿ ಮೇಕೆ ನೋಡಿದ್ದೀರಾ ಎಂದಾಗ ಆತನನ್ನು ಕರೆದು ವಿಚಾರಿಸಿ ನಿನ್ನ ಮೇಕೆ ಮಾರಾಟವಾಗಿದೆ ಎಂದರು. ಇದನ್ನು ಕೇಳಿದ ಮೇಕೆ ಮಾಲಿಕ ಕಣ್ಣೀರಿಡುತ್ತಿದ್ದನು. ನಂತರ ಮೇಕೆ ಮಾರಾಟ ಮಾಡಿದ ಶಿವ ಸ್ವಾಮಿ ಮತ್ತು ಸಾಗರ್ ಇವರನ್ನು ಫೋನ್ ಮಾಡಿ ಕರೆಸಿ ವಿಚಾರಿಸಿದರು. ಇವರು ಸುಳ್ಳು ಹೇಳಲು ಮುಂದಾದರು ಆತನ ಮೊಬೈಲ್ನ ಫೋನ್ ಪೇ ನಲ್ಲಿ ದಳ್ಳಳ್ಳಿ ಕಮಿಷನ್ ಕಳುಹಿಸಿದರು. ಕಳುಹಿಸಿದ ವ್ಯಕ್ತಿಯ ನಂಬರ್ಯಗೆ ಫೋನ್ ಮಾಡಿ ಮೇಕ್ ಎ ವಾಪಸ್ ತರುವಂತೆ ಎಚ್ಚರಿಕೆ ನೀಡಿದರು . ತಕ್ಷಣವೇಮೇಕೆ ವಾಪಸ್ ಸತ್ಯಗಾಲಕ್ಕೆ ತಂದಿದ್ದಾರೆ ಮೇಕೆ ಮಾಲೀಕನಿಗೆ ಮೇಕೆ ಕೊಡಿಸಿ ದುಡ್ಡು ಪಡೆದವರಿಂದ ವಾಪಸ್ ದುಡ್ಡು ಕೊಡಿಸಿ ಕುರಿಗಾಗಿ ಕಣ್ಣೀರು ಒರೆಸಿ ಮಾನವೀಯತೆ ಮೆರೆದ ಶಿಕ್ಷಕ ಶ್ರೀಧರ್ ಸಾರ್ವಜನಿಕರ ಮೆತ್ತಿಗೆ ಪಡೆದಿದ್ದಾರೆ. ಆದರೆ ಕುರಿ ಮಾರಿದ ಕಳ್ಳರು ಶಿಕ್ಷಕ ಸ್ವೀಧ್ಯರಿಗೆ ಬೆದರಿಕೆಯಾಕಿ ಗಲಾಟೆ ಮಾಡಿದ ಹಿನ್ನೆಲೆ ಶಿಕ್ಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

About Mallikarjun

Check Also

whatsapp image 2025 11 14 at 5.38.16 pm

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ Stop the establishment of Baldota and return …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.