Breaking News

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು,ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ.

ಬೆನ್ನೂರು ತಾಂಡಾ ಸಂಪರ್ಕ ರಸ್ತೆಗೆ ಬೇಕಿದೆ ಶಾಶ್ವತ ಪರಿಹಾರ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಪ್ರಯಾಣಕ್ಕೂ ಸುತ್ತಲಿನ ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ.

ಗಂಗಾವತಿ:ಸಚಿವರ ತವರು ಕಾರಟಗಿಗೆ ಅಂಟಿಕೊAಡೇ ಇರುವ ಬೆನ್ನೂರು ಗ್ರಾಮದಿಂದ 2 ಕಿ.ಮೀ ಅಂತರದಲ್ಲಿರುವ ಬೆನ್ನೂರು ತಾಂಡಾಕ್ಕೆ ಸರ್ಕಾರಿ ಸವಲತ್ತುಗಳೇ ಇಲ್ಲ. ಸರ್ಕಾರಿ ಬಸ್ಸುಗಳಿಲ್ಲ. ತಾಂಡಾ ನಿವಾಸಿಗಳು ತಮ್ಮ ವೈಯಕ್ತಿಕ ವಾಹನಗಳನ್ನು ಬಳಸಿಕೊಂಡೇ ತಮ್ಮ ದಿನನಿತ್ಯದ ವ್ಯವಹಾರ, ಶಿಕ್ಷಣ, ಮುಂತಾದ ವಿಷಯಗಳಿಗೆ ತಾಂಡಾದಿAದ ಇತರೆ ಗ್ರಾಮ, ಪಟ್ಟಣಗಳಿಗೆ ಪ್ರಯಾಣಿಸಬೇಕು. ಇತರೆ ಗ್ರಾಮ ಪಟ್ಟಣಗಳ ಸಂಪರ್ಕಕ್ಕೆ ಕನಿಷ್ಠ ರಸ್ತೆಯಾದರೂ ಸರಿ ಇದೆಯಾ ಎಂದರೆ ಅದೂ ಇಲ್ಲ. ಸಂಪೂರ್ಣ ಹದಗೆಟ್ಟ ರಸ್ತೆಯಿಂದ ವಾಹನ ಸಂಚಾರವಲ್ಲ ಕಾಲ್ನಡಿಗೆ ಪ್ರಯಾಣಕ್ಕೂ ರಸ್ತೆ ಯೋಗ್ಯವಾಗಿಲ್ಲ.
ದಿನನಿತ್ಯ ಓಡಾಡುವ, ವಿವಿಧ ಉದ್ದೇಶಗಳಿಗೆ ಬೇರೆ ಗ್ರಾಮ, ಪಟ್ಟಣಗಳಿಗೆ ತೆರಳಲು ತಾಂಡಾದಿAದ ಇರುವುದು ಕೇವಲ ಒಂದೇ ರಸ್ತೆ. ಅದೂ ಕೂಡ ಕಾಲ್ನಡಿಗೆಗೂ ಯೋಗ್ಯವಾಗಿಲ್ಲ.
ಇಂತಹ ಯಾವುದೇ ಕನಿಷ್ಠ ರಸ್ತೆ ಸೌಕರ್ಯವಿಲ್ಲದ ತಾಂಡಾಕ್ಕೆ ಸಚಿವರೂ ಕೂಡ ಭೇಟಿ ನೀಡುತ್ತಾರೆ ಆದರೆ ಚುನಾವಣಾ ಸಂದರ್ಭಗಳಲ್ಲಿ ಮಾತ್ರ. ಈ ಸಮಯದಲ್ಲಿ ತಾಂಡಾ ನಿವಾಸಿಗಳು ಅನೇಕ ಬಾರಿ ರಸ್ತೆ ರಿಪೇರಿಗಾಗಿ ಮನವಿ ಮಾಡಿದ್ದಾರೆ. ಆದರೆ ಸಚಿವರನ್ನು ಒಳಗೊಂಡು ಸಂಬAಧಿಸಿದ ಯಾವುದೇ ಅಧಿಕಾರಿಗಳು ತಾಂಡಾ ನಿವಾಸಿಗಳ ಮನವಿಗೆ ಸ್ಪಂದಿಸಿಲ್ಲ. ಪ್ರಸ್ತುತ ಮಳೆಗಾಲ ಆರಂಭದಲ್ಲಿಯೇ ವಾಹನ ಸವಾರರು, ಪ್ರಯಾಣಿಕರು ಹದಗೆಟ್ಟ ರಸ್ತೆ ಕಾರಣದಿಂದ ಸಮಸ್ಯೆಗಳೊಂದಿಗೆ ಅಪಘಾತಗಳಿಂದ ಗಾಯಗೊಂಡಿದ್ದಾರೆ.
ಪ್ರತಿ ಮಳೆಗಾಲದಲ್ಲಿಯೂ ತಾಂಡಾ ನಿವಾಸಿಗಳಿಗೆ ರಸ್ತೆಯೇ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಪ್ರತಿನಿತ್ಯದ ಸಂಚಾರಕ್ಕೆ ವಾಹನ ಸವಾರರು ಪ್ರಯಾಸದಿಂದಲೇ ಪ್ರಯಾಣಿಸಬೇಕು. ಸಚಿವರು ಹಾಗೂ ಸಂಬAಧಿಸಿದ ಅಧಿಕಾರಿಗಳು ದಯವಿಟ್ಟು ಬೆನ್ನೂರು ತಾಂಡಾದ ಬಗ್ಗೆ ಗಮನ ವಹಿಸಿ ರಸ್ತೆ ದುರಸ್ಥಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ತಾಂಡಾ ನಿವಾಸಿಗಳ ಪ್ರಮುಖ ಬೇಡಿಕೆಯಾಗಿದೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *