Breaking News

ಕೆಂಪೇಗೌಡಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕಲಿಗ ಜನಾಂಗಕ್ಕೆ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ ಕರೆ .

Sri Someshwara Nath Swamiji calls on the Vokkaliga community to participate in large numbers in Kempegowda Jayanti.

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಮೈಸೂರು:ಕಳೆದ ವರ್ಷಕ್ಕಿಂತ ಈ ವರ್ಷವು ಅರ್ಥಪೂರ್ಣವಾಗಿ ಕೆಂಪೇಗೌಡ ಜಯಂತಿಯನ್ನು ಆಚರಿಸಲು ಎಲ್ಲರೂ ಒಮ್ಮತದಿಂದ ನಿರ್ಧರಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜೂ.೨೭ರಂದು ಭಾಗವಹಿಸಿ ಸಮುದಾಯಕ್ಕೆ ಶಕ್ತಿ ತುಂಬಬೇಕೆಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರನಾಥ ಸ್ವಾಮೀಜಿಯವರು ತಿಳಿಸಿದರು.
ಮೈಸೂರಿನ ಹೆಬ್ಬಾಳ್ ನ ಮಠದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪ್ರತಿ ಬಾರಿಯೂ ಕೆಂಪೇಗೌಡ ಜಯಂತಿ ಅದ್ಧೂರಿಯಾಗಿ ನಡೆಯುತ್ತದೆ. ಆದರೆ, ಕಾರ್ಯಕ್ರಮ ಯಶಸ್ವಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದಾಗ ಮಾತ್ರವೇ ಅದು ಅರ್ಥಪೂರ್ಣ ಆಗುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಮೊಹಲ್ಲಾ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದಿಂದಲೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ. ಈ ಬಾರಿ ಮೊದಲಿಗೆ ಲಲಿತ್ ಮಹಲ್ ನಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಾಂಕೇತಿಕವಾಗಿ ಕೋಟೆ ಆಂಜನೇಯಸ್ವಾಮಿ ದೇವಾಲಯದವರೆಗೆ ಮೆರವಣಿಗೆ ಬರಲಿದೆ. ಬಳಿಕ ಮೆರವಣಿಗೆ ವಿದ್ಯುಕ್ತ ಚಾಲನೆ ನೀಡಿ ಕಲಾಮಂದಿರದವರೆಗೆ ಮೆರವಣಿಗೆ ಬರಲಿದೆ.
ಕಾರ್ಯಕ್ರಮಕ್ಕೆ ಸ್ಚಯಂ ಪ್ರೇರಿತರಾಗಿ ಆಗಮಿಸಿ ಎಂದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಯಾವೆಲ್ಲಾ ಸಹಕಾರ ಬೇಕು ಅದನ್ನು ನೀಡಲು ನಾನು ಸಿದ್ದರಿದ್ದೇವೆ.‌ಸಮುದಾಯದ ವಿಚಾರ ಬಂದಾಗ ನಾನಾಗಲಿ ಮಾಜಿಶಾಸಕರಾದ ನಾಗೇಂದ್ರಣ್ಣ ಅವರಾಗಲಿ ಸಮುದಾಯದ ಪರವಾಗಿದ್ದೇವೆ. ಸಮುದಾಯದ ವಿಚಾರದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ. ಸಮುದಾಯ ಯಾವುದೇ ಇರಲಿ ಆ ಸಮುದಾಯ ಸಂಘಟನೆ ಪ್ರದರ್ಶನ ಮಾಡದಿದ್ದರೆ ಆ ಸಮುದಾಯ ಹಿಂದೆ ಉಳಿಯಲಿದೆ‌. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಲ್ಲದೆ ಎಲ್ಲರ ಸಹಕಾರ ಕೆಂಪೇಗೌಡ ಜಯಂತಿ ಆಚರಣೆಗೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಕ್ಕಲಿಗರ ಸಂಘ ವಿವಿಧ ಸಂಘಗಳನ್ನು ಜತೆಗೂಡಿಸಿಕೊಂಡು ಎಲ್ಲರನ್ನೂ ಆಹ್ವಾನಿಸುವ ಕೆಲಸ ಮಾಡಲಿ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಕೆಂಪೇಗೌಡ ಜಯಂತಿ ಯಶಸ್ವಿಗೊಳಿಸುವಂತೆ ಹೇಳಿದರು.
ಸಭೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಆಚರಣ ಸಮಿತಿ ಅಧ್ಯಕ್ಷರನ್ನಾಗಿ ಸಂಘದ ನಿರ್ದೇಶಕ ಪಿ.ಪ್ರಶಾಂತ್‌ಗೌಡ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಮೇಯರ್‌ ಪುಷ್ಪಲತಾ ಜಗನ್ನಾಥ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ.ಜಿ.ಗಂಗಾಧರ್‌ಗೌಡ, ಕೆ.ವಿ.ಶ್ರೀಧರ್‌, ಎಂ.ಬಿ.ಮಂಜೇಗೌಡ, ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಮರಿಸ್ವಾಮಿ,ಗೌರವಾಧ್ಯಕ್ಷರಾದ ಅಲತೂರು ಜಯರಾಮ್, ಪ್ರಧಾನ ಕಾರ್ಯದರ್ಶಿ ಚೇತನ್‌ ಎಂ ಈ , ಖಚಾಂಚಿ ಆರ್ ಲೋಕೇಶ್, ನಿರ್ದೇಶಕರಾದ ನಾಗಣ್ಣ,ಪ್ರಕಾಶ್ ಎನ್,ಉಮೇಶ್, ಬೋರೇಗೌಡ, ಎ ರವಿ, ಗುರುರಾಜ್‌, ಕುಮಾರಗೌಡ, ಸುಶೀಲಾ ನಂಜಪ್ಪ, ಗಿರೀಶ್‌ಗೌಡ, ಒಕ್ಕಲಿಗ ಸಂಘ ಪೂರ್ವ ವಲಯದ ಅಧ್ಯಕ್ಷರಾದ ಸುರೇಶ್ ಗೌಡ ,ಕೆಪಿಸಿಸಿ ಮಾದ್ಯಮ ವಕ್ತಾರ ಎಂ.ಲಕ್ಷ್ಮಣ್‌, ಬಿಜೆಪಿ ಮುಖಂಡರಾದ ಸುಶ್ರೂತ್‌ಗೌಡ, ಕವೀಶ್‌ಗೌಡ ವಾಸು, ಜೆಡಿಎಸ್‌ ಮುಖಂಡ ಎಚ್‌.ಕೆ.ರಾಮು, ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್ ,ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಮೋಹನ್‌ಕುಮಾರ್‌ ಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಎಸ್‌ ಬಿ ಎಂ ಮಂಜು, ಪ್ರೇಮಾಶಂಕರೇಗೌಡ, ಅಶ್ವಿನಿ ಅನಂತು, ಮೋದಮಣಿ,ಮಂಜುಳಾ ಮಾನಸ, ಜಿಪಂ ಮಾಜಿ ಸದಸ್ಯ ಮಾದೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಲಕ್ಷ್ಮಿದೇವಿ, ನಮ್ಮೂರು ನಮ್ಮೋರು ಟ್ರಸ್ಟ್‌ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ, ಮೈಸೂರು ಕೋ ಅಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಯೋಗೇಶ್, ರಾಜಕುಮಾರ್, ನೇಗಿಲಯೋಗಿ ರವಿಕುಮಾರ್, ಸಿದ್ಧರ್ಥಾನಗರ ಒಕ್ಕಲಿಗ ಶಂಕಿ ಗೌಡ ಹಾಗೂ ಮೈಸೂರಿನ ವಿವಿಧ ಒಕ್ಕಲಿಗ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಿವಿಧ ಮೈಸೂರಿನ ಮಹಿಳಾ ಒಕ್ಕಲಿಗ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಮುಖಂಡರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.