Rajiv Gandhi Multi Village Drinking Water Plant, Sri Ramanagara. Tamam EO Ramareddy Patil Verification

ಗಂಗಾವತಿ : ತಾಲೂಕಿನ ಶ್ರೀರಾಮನಗರ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಘಟಕ ಸ್ಥಳಕ್ಕೆ ತಾಪಂ ಇಓ ರಾಮರೆಡ್ಡಿ ಪಾಟೀಲ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಂತರ ಅವರು ಮಾತನಾಡಿ, ಕುಡಿವ ನೀರಿನ
ಘಟಕದ ಸುತ್ತಲೂ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ನೀರು ಫಿಲ್ಟರ್ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಗ್ರಾಮದ ವಿವಿಧ ವಾರ್ಡಗಳ ಜನರಿಗೆ ನೀರು ಪೂರೈಸಬೇಕು. ಜೊತೆಗೆ ಪ್ರತಿ ತಿಂಗಳು ನೀರಿನ ಪರೀಕ್ಷೆ ಕಡ್ಡಾಯವಾಗಿ ನಡೆಸಬೇಕು ಎಂದು ಆರ್ ಡಬ್ಲ್ಯೂಎಸ್ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ 5 ವಾರ್ಡ್ ನಲ್ಲಿ ನಿರ್ಮಿಸಿರುವ 2 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಎರಡು ವರ್ಷಗಳಾಗಿದ್ದು, ಈ ಟ್ಯಾಂಕ್ ಗೆ ಘಟಕದಿಂದ ನೀರು ಸರಬರಾಜು ಮಾಡಬೇಕು. ಈ ಘಟಕದ ಮೂಲಕ ಗ್ರಾಮದ ಜನರಿಗೆ ನೀರು ಪೂರೈಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಕೆರೆ ಕಾಮಗಾರಿ ವೀಕ್ಷಣೆ : ತಾಲೂಕಿನ ಹೊಸಕೇರಾ ಗ್ರಾ.ಪಂ. ವ್ಯಾಪ್ತಿಯ ಕೊಟಯ್ಯ ಕ್ಯಾಂಪ್ ನ ಕುಡಿವ ನೀರಿನ ಕೆರೆಗೆ ತಾಪಂ ಇಓ ರಾಮರೆಡ್ಡಿ ಪಾಟೀಲ್ ಅವರು ಭೇಟಿ ನೀಡಿ ಫೆನ್ಸಿಂಗ್ ಕಾಮಗಾರಿ ವೀಕ್ಷಣೆ ಮಾಡಿದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸುವಂತೆ ಆರ್ ಡಬ್ಲ್ಯೂ ಎಸ್ ಅಧಿಕಾರಿಗಳಿಗೆ ತಾಪಂ ಇಓ ಅವರು ಸೂಚನೆ ನೀಡಿದರು.
ಗ್ರಾಪಂ ಪಿಡಿಓ ನಾಗೇಶ ಕುರಡಿ, ಆರ್ ಡಬ್ಲ್ಯುಎಸ್ ಸಹಾಯಕ ಇಂಜಿನಯರ್ ನಾಗರಾಜ, ಕಿರಿಯ ಇಂಜಿನಿಯರ್ ಸತೀಶ ಕುಮಾರ್, ಹೊಸಕೇರಾ ಗ್ರಾಪಂ ಕಾರ್ಯದರ್ಶಿಗಳಾದ ವಿರೂಪಾಕ್ಷಸ್ವಾಮಿ ಸೇರಿ ಗ್ರಾಪಂ ಸಿಬ್ಬಂದಿಗಳು ಇದ್ದರು.
Kalyanasiri Kannada News Live 24×7 | News Karnataka
