Breaking News

ರಾಯಚೂರ ಕೋಟೆ ಹತ್ತಿರ ರಾಜಕಾಲುವೆಯ ದುರಸ್ಥಿ ಕಾರ್ಯದ ಪರಿಶೀಲನೆ

Inspection of the repair work of the Rajkaluwa near Raichur Fort

ಜಾಹೀರಾತು
20250605 192839 COLLAGE 1 769x1024

ರಾಯಚೂರ ಕೋಟೆ ಹತ್ತಿರ ರಾಜಕಾಲುವೆಯ ದುರಸ್ಥಿ ಕಾರ್ಯದ ಪರಿಶೀಲನೆ

Inspection of the repair work of the Rajkaluwa near Raichur Fort

20250605 192839 COLLAGE 769x1024

ರಾಯಚೂರು ಜೂನ್ 5(ಕ.ವಾ.):ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಜೂನ್ 5ರಂದು ಸಂಜೆ ರಾಯಚೂರ ನಗರದ ಕೋಟೆ ಹತ್ತಿರದ ರಾಜಕಾಲುವೆ ಪ್ರದೇಶಕ್ಕೆ ಭೇಟಿ ನೀಡಿ ಕಾಲುವೆಯ ದುರಸ್ಥಿ ಕಾರ್ಯದ ವೀಕ್ಷಣೆ ನಡೆಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡ್ವೆ, ರಾಯಚೂರ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಾಪತ್ರ ಅವರೊಂದಿಗೆ ರಾಜಕಾಲುವೆಯ ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿಗಳಿಂದ ನಡೆದ ಕಾಲುವೆಯ ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಿದರು.

IMG 20250605 WA0074 1024x461


ಕಾಲುವೆಯ ಸ್ವಚ್ಛತಾ ಕಾರ್ಯವು ಈಗ ಆರಂಭವಾಗಿದ್ದರಿಂದಾಗಿ ರಾಯಚೂರ ನಿಗರದ ನಿವಾಸಿಗಳಿಗೆ ಸಂತಸ ತಂದಿದೆ. ಈ ಕಾಲುವೆಯ ಸ್ವಚ್ಛತಾ ಕಾರ್ಯವು ವೈಜ್ಞಾನಿಕ ರೀತಿಯಲ್ಲಿ ಆಗಬೇಕು. ಇಲ್ಲಿ ಮತ್ತೆ ಗಲೀಜು ಸೇರಿದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಮಾಜ ಸೇವಕರಾದ ಮೋಸಿನ್ ಖಾನ್ ಅವರು ಇದೆ ವೇಳೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈಗ ಜೆಸಿಬಿಗಳಿಂದ ಕಸ ಎತ್ತು ಹಾಕಿ ಸರಿಪಡಿಸುತ್ತಿರುವುದು ಸರಿ ಇದೆ. ಬಹುವರ್ಷಗಳ ನಂತರ ಈ ಕೆಲಸ ಆರಂಭವಾಗಿದ್ದು ಕಂಡು ನಮಗೆ ಬಹಳಷ್ಟು ಖುಷಿ ಆಗಿದೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ರಾಯಚೂರ ನಗರದ ಜನರು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿದೆ. ಈ ರೀತಿ ಕಸವನ್ನು ಎತ್ತುವ ಕಾರ್ಯ ಮತ್ತೆ ಮತ್ತೆ ಆಗದಂತೆ ಮತ್ತೆ ಮತ್ತೆ ಕಸ ತುಂಬದ ಹಾಗೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಈ ರಾಜಕಾಲುವೆಯ ದುರಸ್ತಿ ಮತ್ತು ಕಾಲುವೆಯನ್ನು ಸರಿಪಡಿಸುವ ಕಾರ್ಯ ನಡೆಯಬೇಕು. ಇಡೀ ರಾಜ್ಯಕ್ಕೆ ಮಾದರಿಯಾಗುವ ಹಾಗೆ ಈ ಕಾಲುವೆಯನ್ನು ವಿನೂತನ ರೀತಿಯಲ್ಲಿ ಸರಿಪಡಿಸುವ ಕಾರ್ಯ ಆಗಬೇಕು ಎಂದು ಸಾರ್ವಜನಿಕರು ಇದೆ ವೇಳೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ನಗರದ ಹೃದಯಭಾಗದ ಜನನಿಬಿಡ ಪ್ರದೇಶದಲ್ಲಿನ ಕೋಟೆ ಪಕ್ಕದಲ್ಲಿದ್ದ ಈ ರಾಜಕಾಲುವೆಯ ಸ್ಥಿತಿಯಿಂದ ರಾಯಚೂರ ನಗರದ ನಿವಾಸಿಗಳಿಗೆ ಸಾಕಷ್ಟು ಕಿರಿಕಿರಿಯಾಗಿತ್ತು. ರಾಯಚೂರ ನಗರವನ್ನು ಪ್ರವೇಶಿಸುವ ಜನತೆಯು ಸಹ ಕಾಲುವೆಯನ್ನು ಕಂಡು ಬೇಸರ ವ್ಯಕ್ತಪಡಿಸುವ ದುಸ್ಥಿತಿಯಿತ್ತು. ಈಗಾಗಲೇ ಕೆಲವು ದಿನಗಳಿಂದ ನಿರಂತರವಾಗಿ ಈ ಕಾಲುವೆಯ ದುರಸ್ಥಿ ಕಾರ್ಯ ನಡೆದಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ರಾಜಕಾಲುವೆಗೆ ಇನ್ಮೇಲೆ ಯಾರು ಸಹ ಕಸವನ್ನು ಎಸೆಯದಂತೆ ವೈಜ್ಞಾನಿಕ ರೀತಿಯಲ್ಲಿ ಕಾಲುವೆಯ ಶುಚಿತ್ವಕ್ಕೆ ಕ್ರಮ ವಹಿಸಲಾಗುವುದು ಎಂದು ಇದೆ ವೇಳೆ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.