Breaking News

ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮ್ಯಾಗಳಮನಿ ಒತ್ತಾಯ.

Magalamani demands action against Koppal District Social Welfare Officers.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ –2025-26 ನೇ ಸಾಲಿನ ಪ್ರತಿಷ್ಟಿತ ಶಾಲೆಗಳಿಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅರ್ಹತೆಗಾಗಿ ನಡೆದ ಪರೀಕ್ಷೆಯಲ್ಲಿ ಲೋಪ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಪರೀಕ್ಷೆಯಲ್ಲಿ ಹಾಜರಾಗಿ ಪರೀಕ್ಷೆ ಬರೆದ ನಂತರ ವಿದ್ಯಾರ್ಥಿಗಳಿಗೆ ನೀಡಿದ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿOದ ವಾಪಾಸ್ ಪಡೆದಿದ್ದು ಅಲ್ಲದೆ ಓ ಎಂ ಆರ್ ಶಿಟ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವದಿಲ್ಲ. ಇದು ಅವರು ಮಾಡಿದ ಲೋಪವಾಗಿದೆ ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆರೋಪಿಸಿದ್ದಾರೆ ಪರೀಕ್ಷೆಗಳ ಕುರಿತು ಹಾಗೂ ವಿವಿಧ ತಾಲೂಕುಗಳಿಗೆ ಹಂಚಿಕೆ ಯಾದ ಸೀಟುಗಳ ಕುರಿತು ಕಚೇರಿಗಳಿಗೆ ಸರಿಯಾದ ಮಾಹಿತಿ ನೀಡಿರುವದಿಲ್ಲ,ತಾಲೂಕು ಅಧಿಕಾರಿಗಳು ಪರೀಕ್ಷೆ ಬಗ್ಗೆ ನಮ್ಮ ಜವಾಬ್ದಾರಿ ಇಲ್ಲಾ, ಇದು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳನ್ನು ಕೇಳಿರಿ ನಮಗೆ ಗೊತ್ತಿರುವ ಮಾಹಿತಿ ಹೇಳುತ್ತೇವೆ ಎಂದು ಗಂಗಾವತಿ ತಾಲೂಕು ಸಿಬ್ಬಂದಿ ಹೇಳಿ ಜಾರಿಕೊಂಡ ನಂತರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದರೆ ಅವರು ಸ್ಪಂದನೆ ಮಾಡದೇ ಕರೆ ಸ್ಥಗಿತಗೊಳಿಸಿದ್ದಾರೆಂದು ಮ್ಯಾಗಳಮನಿ ದೂರಿದ್ದಾರೆ. ಪರೀಕ್ಷೆಯಲ್ಲಿ ಬರೆದ ಮಕ್ಕಳಿಗೆ ಅನ್ಯಾಯವಾಗಿದ್ದು ಪಾಲಕರು ಕಚೇರಿಗೆ ಅಲೆದಾಡುತ್ತಿದ್ದಾರೆ ಅಲ್ಲದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ.ಸರ್ಕಾರ ಹಾಗೂ ಸಮಾಜ ಇಲಾಖೆ ಸಚಿವರು ಪಾರದರ್ಶಕ ಪರೀಕ್ಷೆ ನಡೆಸಿದ ಪದ್ಧತಿಯನ್ನು ಪರಿಶೀಲನೆ ಮಾಡಿ ಕೂಡಲೇ ಅವರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವದು. ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು ಎಂದು ಮ್ಯಾಗಳಮನಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರಗೇಶ್, ಕೃಷ್ಣ ಮೆಟ್ರಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ, ಬಸವರಾಜ್ ನಾಯಕ, ಜಂಬಣ್ಣ, ಪಂಪಾಪತಿ ಕುರಿ, ಮುತ್ತು ಹೊಸಳ್ಳಿ, ಸೋಮು, ಹಾಲಪ್ಪ, ಹನುಮಂತ ಕನಕಪ್ಪ, ನರಸಪ್ಪ, ಹುಲ್ಲೇಶ್, ಚಿದಾನಂದ್,ಮತ್ತಿತರರು ಇದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *