Breaking News

ಭಾರತೀಯ ಪ್ರಜಾಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿನರಸಿಂಹಲು ಚಿಂತಲಕುಂಟ ನೇಮಕಪಂಪಾಪತಿ ಸಿದ್ದಾಪುರ

As the new district president of Bharatiya Praja Sena Narasimhalu Chinthalakunta appointed Pampapati Siddapur

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಭಾರತೀಯ ಪ್ರಜಾ ಸೇನೆಯ ಸಂಸ್ಥಾಪಕರು ಮಂಜುನಾಥ್ ಆರ್., ರಾಜ್ಯ ಅಧ್ಯಕ್ಷರಾದ ಟಿ ವೇಣುಗೋಪಾಲ್ ಅವರ ಆದೇಶದ ಮೇರೆಗೆ ಜೂನ್-೦೪ ಬುಧವಾರ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಸಿದ್ದಾಪುರ, ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿಯವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ನರಸಿಂಹಲು ಚಿಂತಲಕುAಟ ಅವರನ್ನು ನೇಮಕ ಮಾಡಲಾಗಿದೆ.
ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದ ಪಂಪಾಪತಿ ಸಿದ್ದಾಪುರ ಅವರು, ಕೊಪ್ಪಳ ಜಿಲ್ಲಾ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಡವರ, ದೀನ ದಲಿತರ, ಅನ್ಯಾಯಕ್ಕೊಳಗಾದವರ, ನೊಂದವರ, ಶೋಷಿತರ ಪರ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ ಸಂಘಟನೆಯ ಶಕ್ತಿ ಮತ್ತು ಕೀರ್ತಿಯನ್ನು ಹೆಚ್ಚಿಸುವಂತೆ ಆದೇಶಿಸಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ವಿಭಾಗಿಯ ಸಹಕಾರ್ಯದರ್ಶಿ ಅಬೂಬಕರ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಅಕ್ಕಿರೊಟ್ಟಿ, ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾದ ಹನುಮಂತಪ್ಪ ಹೊಸಪೇಟೆ, ಜಿಲ್ಲಾ ಸಹಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ಅಯ್ಯಪ್ಪ, ಗಂಗಾವತಿ ತಾಲೂಕ ಅಧ್ಯಕ್ಷರು ಕೃಷ್ಣ ಹೊಸಳ್ಳಿ, ಗಂಗಾವತಿ ತಾಲೂಕು ಸಂಘಟನಾ ಕಾರ್ಯದರ್ಶಿ ಪರಶುರಾಮ್ ಅಕ್ಕಿರೊಟ್ಟಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *