Breaking News

ಬಾಲಾಜಿ ಗ್ಯಾಸ್ ಕಂಪನಿ ಗೋಡೌನ್ ಸ್ಥಳಾಂತರದಿಂದ ೧೨ ಜನ ಬಜಾರ ಹಮಾಲಿ ಕಾರ್ಮಿಕರಿಗೆ ವಂಚನೆ: ನಿರುಪಾದಿ ಬೆಣಕಲ್


12 market porter workers cheated by Balaji Gas Company’s godown relocation: Nirupadi Benakal

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ಬಾಲಾಜಿ ಗ್ಯಾಸ್ ಕಂಪನಿಯು ಏಕಾಏಕಿ ಗೋಡೌನ್‌ನ್ನು ಸ್ಥಳಾಂತರಿಸುವ ಮೂಲಕ ಸುಮಾರು ೧೫-೨೦ ವರ್ಷಗಳಿಂದ ಮಳೆ, ಬಿಸಿಲು, ಚಳಿ ಎನ್ನದೇ ಹಮಾಲಿ ಕೆಲಸ ಮಾಡಿಕೊಂಡು ಬಂದಿದ್ದ ೧೨ ಜನ ಬಜಾರ ಹಮಾಲಿ ಕಾರ್ಮಿಕರಿಗೆ ವಂಚನೆ ಮಾಡಿದೆ ಎಂದು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮೇ-೪ ಬುಧವಾರ, ಬಾಲಾಜಿ ಗ್ಯಾಸ್ ಕಂಪನಿಯಿಂದ ವಂಚನೆಗೊಳಗಾದ ೧೨ ಜನ ಬಜಾರ ಹಮಾಲರಿಗೆ ಪರಿಹಾರ ನೀಡಲು ಒತ್ತಾಯಿಸಿ ಗ್ಯಾಸ್ ಕಂಪನಿ ಮುಂದೆ ಪ್ರತಿಭಟನೆ ನಡೆಸಿ, ಗ್ಯಾಸ್ ಕಂಪನಿ ವ್ಯವಸ್ಥಾಪಕರಿಗೆ ಹಾಗೂ ಕಾರ್ಮಿಕ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈ ೧೨ ಹಮಾಲಿ ಕಾರ್ಮಿಕರಿಗೆ ಗ್ಯಾಸ್ ಕಂಪನಿಯವರು ಯಾವುದೇ ಪಿ.ಎಫ್ ಮತ್ತು ಇ.ಎಸ್.ಐ ಸೌಲಭ್ಯ ಕೊಡದೆ ಇಷ್ಟು ವರ್ಷಗಳ ಕಾಲ ದುಡಿಸಿಕೊಂಡು, ಏಕಾಏಕಿ ಕಾರ್ಮಿಕರಿಗೆ ಯಾವುದೇ ಪರಿಹಾರವನ್ನು ಕೊಡದೆ ಗ್ಯಾಸ್ ಏಜೆನ್ಸಿ ಗೋಡೌನ್‌ನನ್ನು ಗಂಗಾವತಿಯ ಗುಂಡಮ್ಮಕ್ಯಾAಪ್‌ನಿAದ ತೆಗೆದು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡುವ ಮೂಲಕ ಹಮಾಲಿ ಕಾರ್ಮಿಕರನ್ನು ಬೀದಿಗೆ ತಂದಿರುತ್ತಾರೆ. ಅವರ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಇದರಿಂದ ಗ್ಯಾಸ್ ಕಂಪನಿಯು ಕಾರ್ಮಿಕ ಕಾಯ್ದೆಯನ್ನು ಉಲ್ಲಂಘನೆ ಮಾಡಿದಂತಾಗಿದೆ. ಕೂಡಲೇ ಬಾಲಾಜಿ ಗ್ಯಾಸ್ ಕಂಪನಿ ಮಾಲೀಕರ ಮೇಲೆ ದೂರು ದಾಖಲು ಮಾಡಿಕೊಂಡು ಕಾರ್ಮಿಕರ ಕಾಯ್ದೆಗಳ ಪ್ರಕಾರ ೧೨ ಜನ ಬಜಾರ ಹಮಾಲಿ ಕಾರ್ಮಿಕರಿಗೆ ಪರಿಹಾರವನ್ನು ಒದಗಿಸಿಕೊಡಬೇಕೆಂದು ಕಾರ್ಮಿಕ ಇಲಾಖೆಗೆ ಒತ್ತಾಯಿಸಿದೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು ತಾಲೂಕಾ ಅಧ್ಯಕ್ಷರಾದ ಎ. ರಮೇಶ, ತಾಲೂಕ ಕಾರ್ಯದರ್ಶಿ ಮಂಜುನಾಥ ಡಗ್ಗಿ, ಹಮಾಲಿ ಫೆಡರೇಷನ್ ಬಜಾರ ಹಮಾಲರ ಸಂಘದ ತಾಲೂಕ ಅಧ್ಯಕ್ಷರಾದ ಕೃಷ್ಣಪ್ಪ, ಖಜಾಂಚಿಯಾದ ರವಿ ಅಕ್ಕಿರೊಟ್ಟಿ ಸೇರಿದಂತೆ ೧೨ ಜನ ಬಜಾರ ಹಮಾಲರು ಪಾಲ್ಗೊಂಡಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *