Breaking News

ವಸತಿ ನಿಲಯಕ್ಕೆ ದಾರಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವಿದ್ಯಾರ್ಥಿಗಳು: ಶರಣಬಸಪ್ಪ ದಾನಕೈ ಎಸ್.ಡಿ.ಎಂ.ಸಿ ರಾಜ್ಯ ನಿರ್ದೇಶಕ ಒತ್ತಾಯ

Students facing hardship without access to hostel: Sharanabasappa Danakai, SDMC State Director urges

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಲಬುರ್ಗಾ: ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಸಾಯಿಬಾಬಾ ದೇವಸ್ಥಾನದ ಮುಂದೆ ಇರುವ, ರೈಲ್ವೆ ಬ್ರೀಜ್ ಮುಂದೆ ಕಾಣುವ ಯಲಬುರ್ಗಾದಿಂದ ಸಂಗನಾಳ ಮಾರ್ಗದಲ್ಲಿ , ಎರಡು ಕಿಲೋಮೀಟರ್ ಅಂತರದಲ್ಲಿರುವ ವಸತಿ ನಿಲಯಕ್ಕೆ ಈ ಮೊದಲು ವಿದ್ಯಾರ್ಥಿಗಳು ಹೋಗುತ್ತಿದ್ದರು ಈಗ ರೈಲ್ವೆ ಬ್ರಿಜ್ ಆದ ನಂತರ ಸಮಸ್ಯೆ ಉದ್ಭವವಾಗಿದೆ,

ಭೂ ಮಾಲೀಕರಾದ ಪಟ್ಟಣ ಪಂಚಾಯತ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಇವರು ರೈಲ್ವೆ ಇಲಾಖೆಯಿಂದ ನನಗೆ ಯಾವುದೇ ಪರಿಹಾರ ಬಂದಿರುವುದಿಲ್ಲವೆಂದು ವಸತಿ ನಿಲಯಕ್ಕೆ ಹೋಗುವ ದಾರಿಗೆ ಒಡ್ಡು ಹಾಕಿ ತಡೆ ಒಡ್ಡಿದ್ದಾರೆ, ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ವಸತಿ ನಿಲಯಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳುವುದಕ್ಕೆ ತೊಂದರೆಯಾಗುತ್ತದೆ ಈ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಬೇಕು ಎಂದು ಎಸ್‌ಡಿಎಂಸಿ ರಾಜ್ಯ ನಿರ್ದೇಶಕ ಶರಣಬಸಪ್ಪ ದಾನಕೈ ಅವರು ಒತ್ತಾಯಿಸಿದ್ದಾರೆ . ದಾರಿ ಸರಿಪಡಿಸುವ ವಿಚಾರವಾಗಿ ಮೌಖಿಕವಾಗಿ ಪಟ್ಟಣದ ಮುಖ್ಯಾಧಿಕಾರಿ ಅವರ ಗಮನಕ್ಕೆ ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿ ಅವರು ಮೌಖಿಕವಾಗಿ ಹಾಗು ಲಿಖಿತವಾಗಿ ತಿಳಿಸಿದ್ದಾರೆ ಮತ್ತು ಯಲಬುರ್ಗಾದ ಪಿ.ಎಸ್.ಐ ಹಾಗು ಸಿ.ಪಿ.ಐ ಅವರಿಗೂ ಮನವಿಯನ್ನು ವಿದ್ಯಾರ್ಥಿಗಳ ಮೂಲಕ ಕೊಟ್ಟಿದ್ದಾರೆ ,ಮನವಿಗೆ ಸ್ಪಂದಿಸಿ ಯಲಬುರ್ಗಾದ ಪೋಲಿಸ್ ಅಧಿಕಾರಿಗಳು ದಾರಿ ಸರಿಪಡಿಸಿದ್ದಾರೆ ಆದರೆ ಹೊಲದ ಮಾಲಿಕ ಮತ್ತೆ ದಾರಿಯನ್ನು ಮುಚ್ಚಿದ್ದಾನೆ, ಇದರಿಂದ ವಸತಿ ನಿಲಯಕ್ಕೆ ಹೊಗುವ ಪ್ರತಿಯೋಬ್ಬರಿಗೂ ತೊಂದರೆಯಾಗುತ್ತದೆ, ಆದರೆ ಹೊಲದ ಮಾಲೀಕ ನನಗೆ ಪರಿಹಾರ ಬಂದ ಮೇಲೆ ಒಡ್ಡು ತಗೆಯುವದಾಗಿ ತಿಳಿಸಿದ್ದಾನೆ, ಒಟ್ಟಿನಲ್ಲಿ ಗಂಡ ಹೆಂಡರ ಜಗಳದಲ್ಲಿ ಕೂಸು ಗಾಸಿಯಾಗಿತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ವಿಷಯದ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಜಿಲ್ಲಾಧಿಕಾರಿಯವರು ವಿದ್ಯಾರ್ಥಿಯವರಿಗೆ ಅನುಕೂಲ ವಾಗುವುದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಎಸ್. ಡಿ.ಎಂ ಸಿ ರಾಜ್ಯ ನಿರ್ದೇಶಕ ಶರಣಬಸಪ್ಪ ದಾನಕೈ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *