Breaking News

ಕಮಲ್ ‌ಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು : ಸಿ.ವಿ.ದೇವರಾಜ್

Kamal Haasan’s film should not be allowed to release: C.V. Devaraj

ಜಾಹೀರಾತು
IMG 20250525 125717 804x1024


ಕಮಲ್ ‌ಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು : ಸಿ.ವಿ.ದೇವರಾಜ್*

ಬೆಂಗಳೂರು: ತಮಿಳಿನಿಂದಲೆ ಕನ್ನಡ ಹುಟ್ಟಿದೆ ಎಂದು ಅಜ್ಞಾನ ಮತ್ತು ಅವೈಜ್ಞಾನಿಕ ಹೇಳಿಕೆ ನೀಡಿದ ಬಹಭಾಷಾ ನಟ ಕಮಲ್ ಹಾಸನ್ ಕ್ಷಮೆ ಕೇಳುವಂತೆ ಪದೇ ಪದೇ ದುಂಬಾಲು ಬೀಳುವುದು ಕನ್ನಡಿಗರ ಸ್ವಾಭಿಮಾನಕ್ಕೆ ಅಪಮಾನ ಮಾಡಿದಂತೆ ಎಂದು *ರಾಜ್ಯ ಒಕ್ಕಲಿಗರ ಒಕ್ಕೂಟ ಕರ್ನಾಟಕ* ರಾಜ್ಯಾಧ್ಯಕ್ಷ  *ಸಿ. ವಿ. ದೇವರಾಜ್* ಅಸಮಾಧಾನ ವ್ಯಕ್ತಪಡಿಸಿದ್ದಾರೆ.

20250603 194706 COLLAGE Scaled

ನಟ‌ ಕಮಲ್ ಹಾಸನ್ ಕನ್ನಡ ಭಾಷೆಯ ಇತಿಹಾಸ ತಿಳಿಯದೆ ನೀಡಿದ ಹೇಳಿಕೆ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವ ಅಸಮಧಾನ ವ್ಯಕ್ತಪಡಿಸಿದೆ. 

ಇತ್ತೀಚಿನ ವರ್ಷಗಳಲ್ಲಿ ಹಲವಾರು ಚಿತ್ರ ನಿರ್ಮಿಸಿ ಸೋತು ಸುಣ್ಣವಾಗಿರುವ ನಟ ಕಮಲ್ ಹಾಸನ್ ಬಿಡುಗಡೆಯಾಗಲಿರುವ ತನ್ನ ಹೊಸ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶದಿಂದ ಕನ್ನಡ ‌ಭಾಷೆಯ ಕುರಿತು ಅಜ್ಞಾನದ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಆ ಮೂಲಕ ತನ್ನ ಚಿತ್ರಕ್ಕೆ ಉಚಿತ ಪ್ರಚಾರ ಪಡೆಯುವ ಉದ್ದೇಶವನ್ನು ಯಶಸ್ವಿಯಾಗಿ ಇಡೇರಿಸಿಕೊಂಡಿದ್ದಾರೆ ಎಂದರು.

ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಕಮಲ್‌ ಹಾಸನ್ ಕ್ಷಮೆ ಕೇಳುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಬದಲು ಅವನ ಯಾವುದೇ ಚಿತ್ರ ಕನ್ನಡ ನೆಲದಲ್ಲಿ ಪ್ರದರ್ಶನ ಕಾಣದಂತೆ  ಏಕತೆ ಪ್ರದರ್ಶಿಸಬೇಕು ಎಂದು ಮನವಿ ಮಾಡಿದ್ದಾರೆ.

ತನ್ನ ಚಿತ್ರದ ವಾಣಿಜ್ಯ ಲಾಭಕ್ಕಾಗಿ ಕನ್ನಡ ಭಾಷೆ‌ ಹೆಸರಿನಲ್ಲಿ ವಿವಾದ ಸೃಷ್ಟಿಸಿರುವ ಕಮಲ್ ಹಾಸನ್ ಅತ್ಯಂತ ಕೆಟ್ಟ ಮತ್ತು ಕೊಳಕು ಮನಸ್ಥಿತಿಯ ವಿಕೃತ್ತ ವ್ಯಕ್ತಿ ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿದ್ದಾರೆ ಎಂದು ದೇವರಾಜ್ ಹೇಳಿದ್ದಾರೆ.

ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರ ವಿತರಕರು ಹಣದ ಆಸೆಗೆ ಬಲಿಯಾಗಿ ಯಾವುದೇ ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು. ವಿತರಕರು ಕಮಲ್ ಹಾಸನ್ ಚಿತ್ರ ಹಂಚಿಕೆಯ ಒಪ್ಪಂದ ರದ್ದು ಪಡಿಸಬೇಕು. ವಿತರಕರೆ ಇಲ್ಲದಿದ್ದರೆ ಚಿತ್ರ ಹೇಗೆ ಬಿಡುಗಡೆಯಾಗುತ್ತದೆ. ಒಂದು ವೇಳೆ ದುರಂಹಕಾರಿ ಕಮಲ್‌ಹಾಸನ್ ಕ್ಷಮೆ ಕೇಳಿದರು ಸಹ ಥಗ್ ಲೈಫ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸಿ.ವಿ.ದೇವರಾಜ್ ಒತ್ತಾಯಿಸಿದ್ದಾರೆ.

 ಒಂದು ವೇಳೆ ಈ ಬಾರಿ ಅದೇ ರೀತಿ ಒಳ ಒಪ್ಪಂದ ಮಾಡಿಕೊಂಡು ಕಮಲ್ ಹಾಸನ್ ಥಗ್ ಲೈಫ್ ಚಿತ್ರ ಬಿಡುಗಡೆ ಮಾಡಿದರೆ

 ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕ್ಕೆ ನೀಡಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.