Breaking News

ಕಿಷ್ಕಿಂದ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಯ ಪ್ರಧಾನ ಅರ್ಚಕರಾಗಿ ವಿದ್ಯಾ ದಾಸ ಬಾಬಾಜಿ ಅಧಿಕಾರ ಸ್ವೀಕರಿಸುವ ಮೂಲಕ ಧಾರ್ಮಿಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ

Vidya Das Babaji takes charge as the chief priest of Kishkinda Anjanadri Sri Anjaneya Swamy, initiating the religious worship program

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಗಂಗಾವತಿ. ಇತಿಹಾಸ ಪ್ರಸಿದ್ಧ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕ ರಾಂಪುರ ಕಿಷ್ಕಿಂದ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಪೂಜ್ಯನೀಯ ವಿದ್ಯಾ ದಾಸ ಬಾಬಾಜಿ ಅವರು ಸೋಮವಾರದಂದು ಅಧಿಕಾರ ಸ್ವೀಕರಿಸುವುದರ ಮೂಲಕ ಧಾರ್ಮಿಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.. ಪ್ರಧಾನ ಅರ್ಚಕ ಸ್ಥಾನದಿಂದ ಹಾಗೂ ಸದರಿ ದೇವಸ್ಥಾನದ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ವಿದ್ಯಾ ದಾಸ ಬಾಬಾಜಿ ಅವರು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ಸದರಿ ಪ್ರಧಾನ ಅರ್ಚಕರೇ ದೇವಸ್ಥಾನದ ಪೂಜಾ ಕಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರ್ಸಿಕೊಂಡು

ಹೋಗಲು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಸೂಚಿಸಿದ ಹಿನ್ನೆಲೆಯಲ್ಲಿ ವಿದ್ಯಾ ದಾಸ ಬಾಬಾಜಿ ಮುಂದುವರಿಸಿಕೊಂಡು ಹೋಗಲು ಹಾಗೂ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಬಾಜಿ ಅವರು ಸತ್ಯಕ್ಕೆ ಜಯ ದೊರೆತಿ ದೆ. ಈ ಹಿನ್ನಲೆಯಲ್ಲಿ ಈ ಹಿಂದಿನಂತೆ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಸ್ಕೃತ ಪಾಠಶಾಲೆ ಆರಂಭ ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸಲು ಹೋಮ ಹವನ ದಿನಂಪ್ರತಿ ಹನುಮಾನ ಚಾಲೀಸ್ ಪಠಣ. ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ. ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗಿಯ ಅಧ್ಯಕ್ಷ ಹಂಪೇಶ್ ಹ ರಿಗೋಳ್ ಅವರು ಮುಂಬರುವ ಶನಿವಾರ ದಿನದಂದು ಕಿಷ್ಕಿಂದೆಯ ಶ್ರೀ ಆಂಜನೇಯನಿಗೆ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಗುವುದೆಂದು ತಿಳಿಸಿದರು..

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *