Breaking News

ಪೂಜ್ಯಡಾ ಶಿವಕುಮಾರ ಸ್ವಾಮೀಜಿಗಳಿಗೆ ಶರಣರ ಸತ್ಯ ಶೋಧ” ಮತ್ತು ” ವಚನ ದರ್ಶನ, ಮಿಥ್ಯ vs ಸತ್ಯ”ಪುಸ್ತಕ ನೀಡಿ ಸನ್ಮಾನಿಸಲಾಯಿತು

Pujyada Shivakumara Swamiji was honored with the books “Sharanara Satya Shodha” and “Vachana Darshan, Myth vs Truth”.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೀದರ್: ಪೂಜ್ಯಡಾ ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ ಗುಂಪ ಬೀದರ ಇವರಿಗೆ ಬಹು ವಿಖ್ಯಾತ ಪುಸ್ತಕ ಡಾ ಸಿದ್ದರಾಮ ಶರಣರು ಬೆಲ್ದಾಳ ಬರೆದ ” ಸತ್ಯ ಶರಣರ ಸತ್ಯ ಶೋಧ” ಪುಸ್ತಕ ಮತ್ತು ” ವಚನ ದರ್ಶನ, ಮಿಥ್ಯ vs ಸತ್ಯ” ಅದರಲ್ಲಿ ಶ್ರೀ ಶ್ರೀಕಾಂತ ಸ್ವಾಮಿರವರ ಲೇಖನ ಒಳಗೊಂಡ ಖ್ಯಾತ ಸಾಹಿತಿಗಳು ಬರೆದ ಲೇಖನಗಳು ಇವೆ, ನೀಡಿ ಸನ್ಮಾನಿಸಲಾಯಿತು.

ದಿನಾಂಕ 02ನೇ ಜೂನ್ 2025 ರಂದು ಬೀದರ ನಗರದ ಪ್ರಖ್ಯಾತ ಸಿದ್ಧಾರೂಢ ಮಠ ಗುಂಪಾ ಭೇಟಿಯಾಗಿ ಪೂಜ್ಯ ಸ್ವಾಮೀಜಿಯವರಿಗೆ ನಾಡಿನಲ್ಲಿ ಬಹುಚರ್ಚಿತ ಗ್ರಂಥಗಳು ನೀಡಲಾಯಿತು. ಅವರ ಜೊತೆ ಸುಮಾರು ಒಂದು ಗಂಟೆವರೆಗೆ ಆಧ್ಯಾತ್ಮಿಕ ಚರ್ಚೆ ಮಾಡಲಾಯಿತು. ಅವರು ತಾವು ಬೆಳೆದು ಬಂದ ಸಂಪೂರ್ಣ ಅನುಭವ ಹಂಚಿಕೊಂಡಿದ್ದರು. ಕಾಶಿ ಜಂಗಮವಾಡಿಯಲ್ಲಿ ಪದವಿ ವಿಧ್ಯಾಭ್ಯಾಸ ಮಾಡಿದ್ದು ಅಂದಿನ ಪೂಜ್ಯ ಜಗದ್ಗುರು ಜೊತೆ ತಮ್ಮ ಸಂಬಂಧ ಹಂಚಿಕೊಂಡಿದ್ದರು, ತಾವು ಲಿಂಗಾಯತ ಆಗಿದ್ದು ಸಿದ್ಧಾರೂಢ ಮಠದ ಅನುಯಾಯಿ ಆಗಿದ್ದರಿಂದ ವೀರಶೈವ ಜಗದ್ಗುರು ಪೀಠದ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೆ ಎಂದು ಅನುಭವ ಹಂಚಿಕೊಂಡರು. ದೇಶದ ಆಧ್ಯಾತ್ಮಿಕ ಸಂಸ್ಕೃತ ಸಾಹಿತ್ಯ ಗ್ರಂಥಗಳು ಯಾವ ರೀತಿಯಾದರು ಬಳಸಿಕೊಳ್ಳಬಹುದು, ಗ್ರಂಥಗಳು ಬಹುಮುಖಿ ಆಗಿವೆ ಎಂದು ತಿಳಿಸಿದರು. ಶೂನ್ಯ ಸಂಪಾದನೆ ನಮ್ಮ ಗುಂಪದಲ್ಲಿ ಹತ್ತು ವರ್ಷಗಳ ವರೆಗೆ ಪ್ರವಚನ ಹಮ್ಮಿಕೊಂಡಿದ್ದೆವು ಎಂದು ತಮ್ಮ ಶರಣರ ಬಗ್ಗೆ ಇರುವ ಅನುಭವ ಹಂಚಿಕೊಂಡಿದ್ದರು. ಪೂಜ್ಯ ಬೆಲ್ದಾಳ ಶರಣರು ವೇದ ಆಗಮಗಳು, ಶೈವ ಆಗಮ ಮತ್ತು ವೀರಶೈವ ಆಗಮಗಳ ಬಗ್ಗೆ ಮತ್ತು ಶರಣರ ಯೋಗದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

About Mallikarjun

Check Also

ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವಲ್ಲಿ ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯ: ನ್ಯಾ. ಶಶಿಧರ್ ಶೆಟ್ಟಿ

The role of volunteers is very important in informing the public about the law: Justice …

Leave a Reply

Your email address will not be published. Required fields are marked *