Breaking News

ಮಂಗಳೂರು ಗಲಭೆಗೆ ರಾಜ್ಯ ಸರಕಾರ ನೇರ ಹೊಣೆ ಸಿಪಿಐ(ಎಂ)

CPI(M) holds state government directly responsible for Mangaluru riots

ಜಾಹೀರಾತು



ಕೆಂದ್ರ, ರಾಜ್ಯ ಸರಕಾರದ ನೀತಿ ವಿರುದ್ಧ ಏಳು ದಿನ ಸಿಪಿಐ(ಎಂ) ಜನಜಾಗೃತಿ ಸಭೆ: ಪ್ರಕಾಶ್


ಗಂಗಾವತಿ: ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಗಳು ಒಂದ ನಾಣ್ಯದ ಎರಡು ಮುಖದಂತೆ ಜನವಿರೋಧಿ ನೀತಿ ಅನುಸರಿಸುತ್ತಿದ್ದು ಸಿಪಿಐಎಂ ಪಕ್ಷದಿಂದ ಜೂನ್ ೨೦ ರಿಂದ ೨೭ ರವರೆಗೆ ಒಂದು ವಾರ ರಾಜ್ಯದಾದ್ಯಂತ ಬೀದಿ ಬದಿ ಹಾಗು ಬಹಿರಂಗ ಸಭೆಗಳ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದೇಶಿಸಿ ಮಾತನಾಡಿದರು. ರೈತ ವಿರೋಧಿ ಕೇಂದ್ರ ಸರಕಾರ ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿ ಎಂದು ಹೇಳುತ್ತಿದೆಯಾದರು ಜಪಾನ್ ದೇಶದ ಜನರ ತಲಾ ಆದಾಯಕ್ಕು ನಮಗು ಅಜಗಜಾಂತರ ವ್ಯತ್ಯಾಸವಿದ್ದು ಆದಾಯ ಕುಸಿಯುತ್ತಿದೆ, ಕೃಷಿ, ಕೈಗಾರಿಕೆ, ಕಾರ್ಮಿಕ ಸಮಸ್ಯೆ ಜಿಡಿಪಿ ಪ್ರಗತಿಯಿಲ್ಲ, ಉದ್ಯೋಗ ನಾಶ, ಸಣ್ಣ ಕೈಗಾರಿಕೆಗಳು ನಾಶವಾಗಿ ಬಂಡವಾಳಶಾಹಿಗಳಿಗೆ ಲಾಭವಾಗುತ್ತಿದೆ. ಪಾಕಿಸ್ತಾನದ ಜೊತೆಗಿನ ಯುದ್ಧದ ನಂತರದ ಬೆಳವಣಿಗೆಗಳ ಚರ್ಚೆಗೆ ಸಂಸತ್ ಅಧಿವೇಶನ ಕರೆಯದೆ ಸರ್ವಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ನೀಡುವ ಬದಲು ಅವೈಜ್ಞಾನಿಕ ಕ್ರಮ ಅನುಸರಿಸಲಾಗುತ್ತಿದೆ, ಬಿಜೆಪಿಗೂ ಕಾಂಗ್ರೆಸ್‌ಗು ವ್ಯತ್ಯಾಸವೇನಿಲ್ಲ, ಬಂಡವಾಳ ಶಾಹಿಗಳ ಪರ ಕೆಲಸ ಮಾಡಲಾಗುತ್ತಿದೆ. ಕಾರ್ಮಿಕರ ಕೆಲಸದ ಸಮಯ ಹೆಚ್ಚಿಸಲು ಉದ್ದೇಶಿಸಲಾಗುತ್ತಿದೆ. ಕೃಷಿ, ಎಪಿಎಂಸಿ, ವಿದ್ಯುತ್ ತಿದ್ದುಪಡಿ ಕಾಯ್ದೆಗಳು ಮಾರಕವಾಗಿವೆ, ಯಾಪಲ್ ಕಂಪನಿಯೊAದಕ್ಕೆ ಸುಮಾರು ೬ ಸಾವಿರ ಕೋಟಿ ಜನರ ತೆರಿಗೆ ಹಣ ವಿನಾಯಿತಿ ನೀಡಲಾಗಿದೆ ಒಟ್ಟಾರೆ ಬಿಜೆಪಿ ಆರ್ಥಿಕ ನೀತಿಗಳಿಗೆ ರಾಜ್ಯ ಸರಕಾರ ಪೂರಕವಾಗಿ ಕೆಲಸ ಮಾಡುತ್ತಿದೆ. ೪ ಲಕ್ಷ ಕೋಟಿ ಬಜೆಟ್ ಘೋಷಿಸಿದ ಸಿದ್ದರಾಮಯ್ಯ ಸರಕಾರ ೫೦ ಲಕ್ಷ ಕೋಟಿ ರು ಗ್ಯಾರಂಟಿ ಯೋಜನೆಗೆ ವೆಚ್ಚ ಮಾಡಿ ಉಳಿದ ೩.೫ ಲಕ್ಷ ಕೋಟಿ ರು ಎಲ್ಲಿ ವೆಚ್ಚ ಮಾಡಲಾಗುತ್ತಿದೆ ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ. ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಿಸಲು ಲಕ್ಷ ಕೋಟಿ ರು ವೆಚ್ಚ ಮಾಡಲಾಗುತ್ತಿದೆ ಅವೈಜ್ಞಾನಿಕ ಕ್ರಮ, ಭು ಸುಧಾರಣೆ ಕಾಯ್ದೆಗೆ ತಿಲಾಂಜಲಿ ಇಡಲಾಗಿದ್ದು, ಖಾಸಗಿ ಕರಣಗೊಳಿಸಿ ಕೇಂದ್ರಕ್ಕೆ ಸಹಕಾರ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಸಚಿವ ಸಂತೋಷ್ ಲಾಡ್ ಬಂಡವಾಳಶಾಹಿಗಳ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸುತ್ತಿದ್ದಾರೆ. ಉದ್ಯೋಗ ಭದ್ರತೆ ಒದಗಿಸಲಾಗದೆ ಕಾರ್ಮಿಕರ ಕಾರ್ಡ್ಗಳನ್ನು ಕಡಿತಗೊಳಿಸಲಾಗುತ್ತಿದೆ. ಮೋದಿಯವರ ನೀತಿ ಜಾರಿಗಳಿಸಲು ಯತ್ನಿಸುತ್ತಿದ್ದಾರೆ. ಕಿಟ್ ನೆಪದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಲಾಗುತ್ತಿದೆ, ಅನಗತ್ಯ ಅಂಬುಲೆನ್ಸ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿರುವ ಲಾಡ್ ಅವರು ಮೋದಿಯವರಿಗೆ ಕೌಂಟರ್ ಕೊಟ್ಟಂತೆ ತಮ್ಮ ಖಾತೆಯನ್ನು ಪ್ರಮಾಣಿಕವಾಗಿ ನಿರ್ವಹಿಸಲಿ, ಮಂಗಳೂರು ಜನಜೀವನದ ಅವಸ್ಥೆಗೆ ರಾಜ್ಯ ಸರಕಾರ ನೇರ ಹೋಣೆ, ಗೃಹ ಮಂತ್ರಿ ಬೇಜವಬ್ದಾರಿ ವರ್ತನೆ, ಕೋಮುವಾದಿಗಳ ಕೈಗೊಂಬೆಗಳAತೆ ಅಲ್ಲಿನ ಪೊಲೀಸರ ವರ್ತಿಸುತ್ತಿರುವುದು ದುರಂತ ಎಂದು ಕಿಡಿಕಾರಿದರು.
ಸಿಪಿಐ (ಎಂ) ರಾಜ್ಯ ಕಾರ್ಯಕಾರಿಣಿ ಸದಸ್ಯ ಚಂದ್ರಪ್ಪ ಹೊಸಕೇರಿ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಲಕ್ಷಿö್ಮÃದೇವಿ, ಗಂಗಾವತಿ ತಾಲೂಕು ಕಾರ್ಯದರ್ಶಿ ಹುಸೇನಪ್ಪ ಕನಕಗಿರಿ ಮತ್ತು ಕನಕಗಿರಿ ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್ ಇದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.