Breaking News

ವಿಶ್ವ ಮಾದಕ ವಸ್ತು ರಹಿತ ದಿನಾಚರಣೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ

World No Drug Day: Building a drug-free society is everyone’s responsibility

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಲಬುರ್ಗಾ: ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ,ಯುವ ಸಮುದಾಯ ಗುಟಕಾ, ಸಿಗರೆಟ್, ಧೂಮಪಾನ ಸೇವನೆಯಿಂದ ದುಶ್ಚಟದಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಡಾ. ವಿವೇಕ ವಾಗಲೆ ಅವರು ಯಲಬುರ್ಗಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜರುಗಿದ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ, ಆರೋಗ್ಯ ಇಲಾಖೆ ಇವುಗಳ ಸಹಕಾರದಲ್ಲಿ ವಿಶ್ವ ಮಾದಕ ವಸ್ತು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಐ ಟಿ ಐ ಸಂಸ್ಥೆಯ ಪ್ರಾಚಾರ್ಯ ವೀರಭದ್ರಪ್ಪ ಕಾಳಗಿ ಅವರು ದೀಪ ಬೆಳಗಿಸಿ ಮಾತನಾಡಿ ವಿವಿಧ ಚಟಗಳಿಗೆ ಅಂಟಿಕೊಳ್ಳದೆ ಉತ್ತಮರ ಸಂಘ ಮಾಡಿಕೊಂಡು ಸುಂದರ ಬದುಕು ನಿಮ್ಮದಾಗಿಸಿಕೊಳ್ಳಿ ಎಂದರು . ಮೋಜು ಮಸ್ತಿಗಾಗಿ ವಿದ್ಯಾರ್ಥಿಗಳು ಸಿಗರೇಟ್ , ಗುಟಕಾ ಅತಿಯಾಗಿ ಸೇವನೆ ಮಾಡುತ್ತಾರೆ ಇದರಲ್ಲಿ ಸಾಕಷ್ಟು ವಿಷವಿರುತ್ತದೆ ಇದರ ಅರಿವು ಇದ್ದರು ಸಹ ಸೇವನೆ ಮಾಡಿ ಇದರಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವನ ಪರ್ಯಂತಾರ ತೊಂದರೆ ಅನುಭವಿಸಿ ಸಾವನ್ನಪ್ಪುತ್ತಾರೆ ಆದ್ದರಿಂದ ವಿದ್ಯಾರ್ಥಿಗಳು ರೋಗ ರುಜಿನಗಳಿಂದ ತೊಂದರೆ ಅನುಭವಿಸಿ ಮರಣ ಹೊಂದುತ್ತಾರೆ , ಯುವ ಸಮುದಾಯ ದುಶ್ಚಟಗಳಿಂದ ದೂರ ಇರುವಂತೆ ಡಾ. ಮಾರುತಿ ದೊಡ್ಡಮನಿ ಮಾತನಾಡಿದರು. ಒಂದು ಸಿಗರೇಟ್ ಸೇವನೆ ಮಾಡಿದರೆ ಏಳು ನಿಮಿಷ ನಮ್ಮ ಆಯುಷ್ಯ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಹದಗೆಡುತ್ತದೆ ಆದ್ದರಿಂದ ನಮ್ಮ ಆರೋಗ್ಯ ಸಂಪತ್ತನ್ನು ಕಾಪಾಡಬೇಕು, ಕೋಟಿ ಸಂಪತ್ತು ಗಿಂತ ಆರೋಗ್ಯ ಸಂಪತ್ತು ಮುಖ್ಯವಾದದ್ದು ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಮೇಲ್ವಿಚಾರಕಿ ಕಾವ್ಯ, ಜ್ಞಾನ ವಿಕಾಸ ಸಮಿತಿಯ ಸಮನ್ವಯಾಧಿಕಾರಿ ರತ್ನ ಪಾಟೀಲ, ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ, ಒಕ್ಕೂಟದ ಅದ್ಯಕ್ಷೆ ರತ್ತಮ್ಮ ತಳಕಲ್ಲ, ಆರೋಗ್ಯ ಇಲಾಖೆಯ ಕಾಳಪ್ಪ ಬಡಿಗೇರ, ಚಂದ್ರಶೇಖರ ನಾಯಕ, ಶಂಕರ ಪುರಾಣಿಕ ಹಾಗೂ ಐಟಿಐ ಸಿಬ್ಬಂದಿಗಳಾದ ಮಂಜುನಾಥ ಮುರಡಿ, ಚನ್ನಬಸಮ್ಮ ಹಿರೇಮಠ ಸೇರಿದಂತೆ ಇತರರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *