Why is there such apathy towards the Tungabhadra reservoir issue? – Hanumesh Gundur, lawyer

ತುಂಗಭದ್ರಾ ಜಲಾಶಯದ ಹೊಸದಾಗಿ ಗೇಟ್ ಗಳು ಕೂಡಿಸುವ ಟೆಂಡರ್ ವಿಳಂಬ ಧೋರಣೆ ಖಂಡನೀಯ.
ಗಂಗಾವತಿ:ತುಂಗಭದ್ರಾ ಜಲಾಶಯದ ಹಳೆಯ ಕ್ರೆಸ್ಟ್ ಗೇಟ್ ಗಳನ್ನು ತೆಗೆದು ಹೊಸ ಕ್ರಸ್ಟ್ ಗೆಟ್ ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ ಆದರೆ ಈ ಟೆಂಡರ್ ಬಿಡ್ ಮಾಡಲು ವಿಳಂಬ ಮಾಡಿದ್ದು
ಇದನ್ನ ಬೇಸಿಗೆ ಕಾಲದಲ್ಲಿ ಟೆಂಡರ್ ಕರೆದು ಹೊಸ ಕ್ರಸ್ಟ್ ಗೆಟ್ ಗಳನ್ನು ಅಳವಡಿಸಲು ಸಿಕ್ಕಾಪಟ್ಟೆ ಸಮಯ ಅವಕಾಶ ಇದ್ದಾಗಲೂ ನಮ್ಮ ಭಾಗದ ರಾಜಕಾರಣಿಗಳು ಅಸಡ್ಡೆ ನಿರ್ಲಕ್ಷ್ಯ ಸ್ವಹಿತಾಸಕ್ತಿ ಪಕ್ಷಪಾತ ಮನೋಭಾವದಿಂದ ಈ ಭಾಗದ ರೈತರಿಗೆ ಮೊಸ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ನಮ್ಮ ಭಾಗದ ರೈತರ ನಮ್ಮೆಲ್ಲರ ಜೀವನಾಡಿ ಅನ್ನದಾತ ನಮ್ಮ ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಭಾವನೆ ತೋರುವ ಇಲ್ಲಿನ ರಾಜಕಾರಣಿಗಳು ಹಾಗೂ ತುಂಗಭದ್ರಾ ಡ್ಯಾಂ ನ ಆಡಳಿತ ಮಂಡಳಿಯ ಮನಸ್ಥಿತಿಯು ನಮ್ಮ ಭಾಗದ ರೈತರಿಗೆ ಜನಸಾಮಾನ್ಯರಿಗೆ ದ್ರೋಹ ಬಗೆದಂತೆ ಆದಷ್ಟು ಬೇಗ ಹೊಸ ಗೇಟ್ ಗಳು ಅಳವಡಿಸಿ ಎರಡು ಬೆಳೆಗಳಿಗೆ ನೀರು ಬೀಡುವ ವ್ಯವಸ್ಥೆ ಮಾಡಬೇಕು ಎಂದು ವಕೀಲಾದ ಹನುಮೇಶ್ ಗುಂಡೂರು ಅವರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.