The lives of those who sew clothes have been torn apart.




ಉತ್ತರ ಕರ್ನಾಟಕದಲ್ಲಿ ಕೌದಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಇಲ್ಲಿನ ಬಹುತೇಕ ಕುಟುಂಬಗಳಲ್ಲಿ ಇಂದಿಗೂ ಮಲಗುವಾಗ ಹೊದ್ದುಕೊಳ್ಳಲು ಕೌದಿ ಬಳಸುತ್ತಾರೆ. ಕೌದಿ ಇರದ ಮನೆಯೇ ಇಲ್ಲ ಎನ್ನಬಹದು ಅಷ್ಟರಮಟ್ಟಿಗೆ ಕೌದಿ ಇಲ್ಲಿನ ಜನ ಜೀವನವನ್ನು ಆವರಿಸಿದೆ.
ಕೌದಿ ಹೊಲೆಯಲು ಇಂಥದ್ದೇ ಬಣ್ಣದ, ಇಷ್ಟೇ ಗಾತ್ರದ ಬಟ್ಟೆಗಳೇ ಬೇಕೆಂದೇನಿಲ್ಲ. ಮನೆಯಲ್ಲಿನ ಹಳೆಯ ಸೀರೆ, ನೈಟಿ, ಚೂಡಿದಾರ್ ಸೇರಿದಂತೆ ನಿಷ್ಪ್ರಯೋಜಕ ಯಾವ ಬಟ್ಟೆಗಳನ್ನಾದರೂ ಬಳಸಿ ಕೌದಿ ಹೊಲೆಯಲಾಗುತ್ತದೆ. ಸಾಂಪ್ರದಾಯಿಕ ಕೌದಿಗಳಲ್ಲಿ ಒಂದು ಕೌದಿಯಂತೆ ಮತ್ತೊಂದನ್ನು ತಯಾರಿಸಲು ಆಗುವುದಿಲ್ಲ. ಏಕೆಂದರೆ ಆ ಕೌದಿಗಳಲ್ಲಿ ಬಳಸುವ ಬಟ್ಟೆಗಳು ಬೇರೆಬೇರೆಯೇ ಆಗಿರುತ್ತವೆ. ಆ ಎಲ್ಲ ಬಟ್ಟೆಗಳನ್ನು ನಿರ್ದಿಷ್ಟ ಆಕಾರಕ್ಕೆ ಕತ್ತರಿಸಿ, ಜೋಡಿಸಿಕೊಂಡು, ಸೂಜಿ ದಾರದಿಂದ ಹೊಲೆದು ತಯಾರಾಗುವ ಬಣ್ಣ ಬಣ್ಣದ ಕೌದಿ ಜಾನಪದ ಸೊಗಡಿನ ಸಂಕೇತದಂತೆ ಕಾಣುತ್ತದೆ.
ದುಡಿಯಲು ಬೇರೆ ಬೇರೆ ಊರುಗಳಿಗೆ ತೆರಳಿದ ಜನರಿಗೆ ಮನೆಯಲ್ಲಿದ್ದಾಗ ದೊರೆಯುತ್ತಿದ್ದ ಅಮ್ಮನ, ಅಜ್ಜಿಯ ಮಡಿಲು ಸಿಕ್ಕದೇ ಹೋಗುತ್ತದೆ. ಅವರಿಗೆಲ್ಲ ಪ್ರೀತಿಪಾತ್ರರ ನೆನಪು ಕಾಡುತ್ತಲೇ ಇರುತ್ತದೆ. ಆಗೆಲ್ಲ ಕೌದಿ ಸಹಾಯಕ್ಕೆ ಬರುತ್ತದೆ. ಅಮ್ಮ, ಅಜ್ಜಿಯಂದಿರ ಸೀರೆಗಳಿಂದಲೇ ತಯಾರು ಮಾಡಲಾದ ಕೌದಿಗಳು ಅವರು ದೂರದಲ್ಲಿದ್ದರೂ ಸಹ ಅವರ ಮಡಿಲಲ್ಲಿ ಮಲಗಿರುವಂತೆ ಭಾಸವಾಗುತ್ತದೆ. ಕೌದಿಯಲ್ಲಿನ ಪರಿಮಳ