Renowned writer H.S. Venkatesh Murthy is no more.

ತಿಪಟೂರು: ತಿಪಟೂರು ಹಾಸನ ಸರ್ಕಲ್ ನಂದಿನಿ ಡೈರಿ ಮುಂಬಾಗ ನಿಧಾನರಾದ ಖ್ಯಾತ ಸಾಹಿತಿ ಎಚ್ಎಸ್ ವೆಂಕಟೇಶ್ ರವರಿಗೆ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ ವತಿಯಿಂದ .ಒಂದು ನಿಮಿಷ ಮೌನವಾಚರಿಸಿ ಅಗಲಿದ ಹಿರಿಯ ಸಾಹಿತಿ ವೆಂಕಟೇಶ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾಧ್ಯಕ್ಷರಾದ ಭಾಸ್ಕಚಾರ್ ಮಾತನಾಡಿ
ಗೀತ ರಚನೆಕಾರ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ವಿಧಿವಶರಗಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಇಂದು ಬೆಳಿಗ್ಗೆ 7ಗಂಟೆಗೆ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಸಾಹಿತ್ಯ ರಚನೆಯಲ್ಲಿ ಅದ್ಭುತ ಕೃಷಿ ಮಾಡಿದ್ದವರು. ಅವರು ಬರೆದಿರುವ ಒಂದೊಂದು ಗೀತೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರ ಜೊತೆಗೆ ಜನಮಾನಸದಲ್ಲಿ ಅಚ್ಚಳಿಯುಂತೆ ಇರುವಂತದ್ದು.
1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಹಳ್ಳಿಯಲ್ಲಿ ಜನಿಸಿದವರು. ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧ ಮಂಡಿಸಿ ಪಿಹೆಚ್ ಡ್ ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೆಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು. 2000ದಲ್ಲಿ ನಿವೃತ್ತಿಯಾದರು.ಬಳಿಕವೂ ಬೆಂಗಳೂರಿನಲ್ಲಿ ನೆಲೆಸಿದ್ದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಸಾಹಿತ್ಯ ರಚನೆ, ಗೀತರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಪರಿವೃತ್ತ, ಬಾಗಿಲು ಬಡಿವ ಜನಗಳು, ಮೂವತ್ತು ಮಳೆಗಾಲ ಸೇರಿದಂತೆ 15ಕ್ಕೂ ಹೆಚ್ಚು ಕವನ ಸಂಕಲನಗಳು, ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ, ಕಥಾಸಂಕಲನ, ತಾಪಿ ಅಮಾನುಷರು, ಕದಿರಿನ ಕೋಟೆ, ಅಗ್ನಿಮುಖಿ ಮೊದಲಾದ ಕಾದಂಬರಿಗಳನ್ನು ರಚಿಸಿ
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಚಿನ್ನಾರಿ ಮುತ್ತ ಸಿನಿಮಾಗೆ ಕಥೆ ಹಾಗೂ ಸಂಭಾಷಣೆ ಹಾಗೂ ಎಲ್ಲಾ ಹಾಡುಗಳನ್ನು ಹೆಚ್.ಎಸ್.ವಿ ಬರೆದಿದ್ದರು. ಅಮೆರಿಕಾ ಅಮೆರಿಕಾ ಚಿತ್ರದ ಬಾನಲ್ಲಿ ಓಡೋ ಮೋಘಾ… ಪುನೀತ್ ನಟನೆಯ ಮೈತ್ರಿ ಚಿತ್ರಕ್ಕೆ ಹಾಡು, ಕಿರಿಕ್ ಪಾರ್ಟಿ ಚಿತ್ರದ ತೂಗು ಮಂಚದಲ್ಲಿ ಕೂತು… ಹಾಡು ಸೇರಿದಂತೆ ಹಲವಾರು ಚಿತ್ರಗಳಿಗೆ ಗೀತರಚನೆ, ಮುಕ್ತ, ಮಹಾಪರ್ವ ಸೇರಿದಂತೆ ಧಾರವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದವರು.ಹೆಚ್ ಎಸ್ ವಿ ಅವರ ಇರುವಂತೆ ಇರಬೇಕು ತೊರೆದು ಸಾವಿರ ಚಿಂತೆ… ಭಾವಗೀತೆ ಇಂದಿಗೂ ಜನಪ್ರಿಯ. ಕನ್ನಡ ಸಾಹಿತ್ಯಕ್ಕೆ ಹೆಚ್.ಎಸ್.ವಿ ನೀಡಿರುವ ಕೊಡುಗೆ ಅಪಾರ. ಹಿರಿಯ ಸಾಹಿತಿಯ ಅಗಲಿಕೆಗೆ ಕನ್ನಡ ಸಾರಸ್ವತ ಲೋಕ, ಹಿರಿಯ ಗಣ್ಯರು ಕಂಬನಿ ಮಿಡಿದಿದ್ದಾರೆ .
ವರದಿ ಮಂಜು
ಗುರುಗದಹಳ್ಳಿ.