Breaking News

ಜನ ಔಷಧಿ ಕೇಂದ್ರವನ್ನು ಮುಚ್ಚಿರುವುದನ್ನು ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

Protest against the closure of Jana Aushadhi Kendra by wearing black bands

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಿಪಟೂರು:
ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಜನ ಔಷಧಿ ಕೇಂದ್ರವನ್ನು ಈಗಾಗಲೇ ಮುಚ್ಚಿದ್ದು ಅದನ್ನು ಪ್ರಾರಂಭಿಸುವುದು ಬಿಟ್ಟು ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಬಳಿ ಇರುವ ಎಲ್ಲಾ ಕೇಂದ್ರವನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಾಜಿ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಅವರ ನೇತೃತ್ವದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಸೇರಿ ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಮಾಜಿ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಮಾತನಾಡಿ.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡ ರೋಗಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಜನ ಔಷಧಿ ಕೇಂದ್ರವನ್ನು ಪ್ರಾರಂಭಿಸಿದರೆ ಜನ ವಿರೋಧಿ ಕಾಂಗ್ರೆಸ್ ಸರ್ಕಾರ ಅವುಗಳನ್ನು ಮುಂಚಿಸಲು ಹೊರಟಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ.ಹಳೆಪಾಳ್ಯ ಜಗದೀಶ್. ಸತೀಶ್ .ಕಂಚಘಟ್ಟ ಗಂಗರಾಜ್. ಪ್ರಸನ್ನ ಕುಮಾರ್.
ಬಿಸ್ಲೆಹಳ್ಳಿ ಜಗ್ಗೇಶ್. ಸಿಂಗ್ರಿ ದತ್ತ ಪ್ರಸಾದ್. ನಿಂಗರಾಜ್.
ಬಳ್ಳೆಕಟ್ಟೆ ಸುರೇಶ್. ಸಂಗಮೇಶ್ .ಮೋಹನ್ ರಾಜ್ .ಶ್ರೀಮತಿಪದ್ಮ ತಿಮ್ಮೇಗೌಡ ಶ್ರೀಮತಿ ಸಂಧ್ಯಾ ಕಿರಣ್ . ಶ್ರೀಮತಿಜಯಲಕ್ಷ್ಮಿ ರವರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಜಿಲ್ಲಾಡಳಿತದಿಂದ ಹೆಲ್ಪ್ಲೈನ್ ಆರಂಭ

Social, educational survey: District administration launches helpline ಕೊಪ್ಪಳ ಸೆಪ್ಟೆಂಬರ್ 23 (ಕರ್ನಾಟಕ ವಾರ್ತೆ): ಸೆಪ್ಟೆಂಬರ್ 22 ರಿಂದ …

Leave a Reply

Your email address will not be published. Required fields are marked *