
Municipal workers’ strike enters 4th day: Jamkhandi is stinking
ಸಾವಳಗಿ: ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರಸಭೆಯ ಪೌರಕಾರ್ಮಿಕರು, ನೌಕರರು, ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘಟನೆಗಳು ನಗರದ ಹಳೆ ತಹಶೀಲ್ದಾರ ಕಚೇರಿಯಿಂದ ಪ್ರಮುಖ ರಸ್ತೆಗಳ ಮೂಲಕ ದೇಸಾಯಿ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಪೌರಕಾರ್ಮಿಕರ ಅನಿರ್ಧಿಷ್ಟಾವದಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು ಪರಿಣಾಮವಾಗಿ ತ್ಯಾಜ್ಯ ವಿಲೇವಾರಿ ನಿಂತು ಹೋಗಿದೆ. ಇದರಿಂದಾಗಿ ನಗರ ಜನತೆ ಸಿಕ್ಕ ಸಿಕ್ಕಲ್ಲಿ ತಮ್ಮ ಮನೆ, ಅಂಗಡಿ, ಹೋಟೆಲೆಗಳ ತ್ಯಾಜ್ಯವನ್ನು ರಸ್ತೆಯ ಬದಿಗೆ ಸುರಿಯುತ್ತಿದ್ದಾರೆ. ನಗರದಲ್ಲಿ ಬಹುತೇಕ ರಸ್ತೆಗಳಲ್ಲಿ ಕಸದ ರಾಶಿ ವಾಸನೆ ಗಬ್ಬೆದ್ದು ನಾರುತ್ತಿದೆ.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ತಾಲೂಕ ಅಧ್ಯಕ್ಷ ರಾಘು ಕಡಕೋಳ, ರಾಜು ಮಸಳಿ, ಯಲ್ಲಪ್ಪ ಬಿದರಿ, ಚಂದ್ರಿಕಾ ಬಿಳ್ಳೂರ, ಕುಸುಮಾ, ವಿನಾಯಕ ನಿಡೋನಿ, ಸಚೀನ ಹಿರೇಮಠ, ಸೋಮು ದೇವರಮನಿ, ಅಮೀತ, ಮಂಜುನಾಥ, ರಾಜಕುಮಾರ, ಶ್ರೀಶೈಲ ಹವಾರಿ, ವಿಜಯಕುಮಾರ ಬಿಳಗಿ, ಐ.ಎಂ.ಬೋಜಗಾರ, ಇಸ್ಮಾಯಿಲ್, ಶ್ರೀಕಾಂತ್ ಘಾಟಗೆ, ಲೋಬು ಹಾದಿಮನಿ, ಸಂಜಯ್ ನಡುವಿನಮನಿ, ವಿನೋದ್ ಜೀರಗಾಳ, ಲಕ್ಷಣ ಘಾಟಗೆ ಇತರರು ಇದ್ದರು.