The state executive meeting of the Karnataka Media Journalists’ Association was held.

ಚಿಕ್ಕಮಗಳೂರು: ಬುಧವಾರ ಅಜ್ಜಂಪುರ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ನಡೆದ ಕರ್ನಾಟಕ ಮಾಧ್ಯಮ ಪರ್ತಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಜಿ,ಎಂ,ರಾಜಶೇಖರ್ ಮಾತನಾಡಿ ಪತ್ರಕರ್ತರು ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಸ್ಥಿತಿಗತಿಗಳು ಉತ್ತಮವಾಗಿಲ್ಲ ಹಲವರು ನಿತ್ಯ ಬದುಕನ್ನೆ ಸಂಕಷ್ಠದಲ್ಲಿ ಕಳೆಯುತ್ತಾ ಸಾರ್ವಜನಿಕ ಸೇವೆಯಲ್ಲಿ ತೊಡಗಿ ದ್ದಾರೆ ಪತ್ರಕರ್ತರ ಬೇಡಿಕೆಗಳು ಬಹಳ ವರ್ಷದಿಂದ ನೆನೆಗುದಿಗೆ ಬಿದಿದ್ದು ಇಂತಹ ಪರಿಸ್ಥಿತಿಯಲ್ಲಿ ಕರ್ನಾ ಟಕ ಮಾಧ್ಯಮ ಪರ್ತಕರ್ತರ ಸಂಘವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಒಂದಿಷ್ಠು ಸಮ ಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಪರ್ತಕರ್ತರ ಸರ್ವತೋಮುಖ

ಅಭಿವೃದ್ದಿಯ ಧ್ಯೆಯವನ್ನು ಹೊಂದಿದೆ ಎಂದು ಕರ್ನಾಟಕ ಮಾಧ್ಯಮ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿ,ಎಂ,ರಾಜಶೇಖರ್ ತಿಳಿಸಿದರು.
ಬುಧವಾರ ಅಜ್ಜಂಪುರ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ನಡೆದ ಕರ್ನಾಟಕ ಮಾಧ್ಯಮ ಪರ್ತಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು.
ಪ್ರಸ್ತುತ ಗ್ರಾಮೀಣ ಭಾಗದ ಪತ್ರಕರ್ತರು ಹಾಗೂ ಪತ್ರಿಕೆಗಳು ತೀರಾ ಸಂಕಷ್ಠದಲ್ಲಿದ್ದು ಇವುಗಳ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಸಂಭಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದಿಷ್ಠು ಪರಿಹಾರಕ್ಕೆ ರಾಜ್ಯ ಸಂಘವು ಶ್ರಮಿಸುತ್ತಿದೆ ಎಂದರು.
ಪ್ರಮುಖವಾಗಿ ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯ ವಿಮಾ ಯೋಜನೆಗಳ ಮೂಲಕ ಆರ್ಥಿಕ ಭದ್ರತೆ ಒದಗಿ ಸಲು ಮುಂದಾಗಿದ್ದು ಇದೇ ಮೊದಲ ಬಾರಿಗೆ ಸದಸ್ಯರ ಐಡಿ ಕಾರ್ಡಿನ ಜೊತೆ ೧೦ ಲಕ್ಷದ ಅಪಘಾತ ವಿಮೆ೫ ಲಕ್ಷರೂಗಳ ತುರ್ತು ಚಿಕಿತ್ಸೆ ಸೇರಿದಂತೆ ಹಿರಿಯ ಪತ್ರಕರ್ತರಿಗೂ ವಿಮಾ ಸೌಲಭ್ಯ ನೀಡುವ ಕಾರ್ಯಕ್ಕೆ ಸಂಘ ಮುಂದಾಗಿದೆ ಎಂದರು.
ಸಂಘದ ಉಪಾಧ್ಯಕ್ಷರಾದ ಟಿ,ಕೃಷ್ಣನ್ ಮಾತನಾಡಿ ಸಂಘವನ್ನು ಸಂಪೂರ್ಣವಾಗಿ ಡಿಜಟಲಿಕರಣ ಮಾಡಿದ್ದು ಸಂಘದ ಸದಸ್ಯರು ಪತ್ರಿಕೋದ್ಯಮಕ್ಕೆ ಪೂರಕವಾದ ಮಾಹಿತಿಗಳನ್ನು ಪಡೆಯುವುದು ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳಲು ಸಹಾಯವಾಗಲಿದೆ ಎಂದರು.
ನಿರ್ದೇಶಕರಾದ ಅಮೃತೇಶ್ ಮಾತನಾಡಿ ಪತ್ರಕರ್ತರ ಕ್ಷೇಮನಿಧಿ ಸ್ಥಾಪನೆ, ಪತ್ರಕರ್ತರನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಕ್ರೀಯಾಶೀಲಾ ಪತ್ರಕರ್ತರಿಗೆ ೧೦ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ, ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಪರ್ತಕರ್ತರ ನಿಯೋಗದೊಂದಿಗೆ ಅಂತರ್ ಜಿಲ್ಲಾ ಆದ್ಯಯನ ಪ್ರವಾಸ,ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಳ್ಳಲಿದೆ ಎಂದರು.
ನಿರ್ದೇಶಕರಾದ ರವೀಂದ್ರಶೆಟ್ಟಿ ಮಾತನಾನಾಡಿ ಇಂದು ಪತ್ರಿಕೋದ್ಯಮ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು ಪತ್ರಕರ್ತರ ಧ್ಯೆಯ ಉದ್ದೇಶಗಳು ಮರೆಯಾಗುತ್ತಿವೆ ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಸಮಸ್ಯೆಗಳನ್ನು ಎತ್ತಿಹಿಡಿಯುವ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆಯ ಅವಶ್ಯಕತೆಯಿದ್ದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಹಾಕುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಇದೇ ಸಂಧರ್ಭದಲ್ಲಿ ಮಾಜಿ ಸೈನಿಕರು ಹಿರಿಯ ಪತ್ರಕರ್ತರಾದ ಟಿ.ಕೃಷ್ಣನ್, ಉಚ್ಚನ್ಯಾಯಾಲಯದ ಹಿರಿಯ ವಕೀಲರಾದ ಅಮೃತೇಶ್,ಹಾಗೂ ಪತ್ರಕರ್ತರಾದ ರವಿಂದ್ರಶೆಟ್ಟಿಯವರನ್ನು ರಾಜ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ಕಾರ್ಯದರ್ಶಿ ಬಂಗಾರಪ್ಪ,ಖಜಾಂಚಿ,ಮಂಜು ಎಂ,ಹೊಸಹಳ್ಳಿ, ನಿರ್ದೇಶಕ ರಾದ ರೂಪೇಶ್ ಕುಮಾರ್,ಅನಂತ್,ವಸಂತ್ ಕುಮಾರ್, ಸಿದ್ದೇಗೌಡ ಚನ್ನಾಪುರ,ಪ್ರಕಾಶ್, ಕುಮಾರ್, ಸೇರಿದಂತೆ ಹಲವರು ಉಪಸ್ಥಿತಿರಿದ್ದರು ಎಂದು ತಿಳಿದು ಬಂದಿದೆ.