Magala Mani has urged the government to ban Kamal Haasan’s film.

ಗಂಗಾವತಿ:ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿ ಕನ್ನಡಕ್ಕೆ ಅವಮಾನ ಮಾಡಿದ ನಟ ಕಮಲ್ ಹಾಸನ ನಟಿಸಿರುವ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರಕಾರವನ್ನು ಒತ್ತಾಯಿಸಿದ್ದಾರೆ. ಕಮಲ್ ಹಾಸನ ಕನ್ನಡ ಅಧ್ಯಯನ ಸಂಶೋಧಕರೇ, ಅಥವಾ ಸಾಹಿತ್ಯದ ಅನುಭವ ಹೊಂದಿರುವವರೆ? ಕನ್ನಡದ ಬಗ್ಗೆ ಆಳವಾದ ಗಂಧ ಗೊತ್ತಿಲ್ಲದೇ ಅವಿವೇಕತನದ ಮಾತುಗಳನ್ನು ಮಾತನಾಡಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕನ್ನಡಿಗರನ್ನು ಕೆರಳಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಜಲ ವಿವಾದವಿದೆ. ಎರಡು ರಾಜ್ಯ್ಗಗಳ ನಡುವೆ ಮತ್ತಷ್ಟು ಬಿರುಕು ಉಂಟು ಮಾಡಿದಂತೆಯಾಗುತ್ತದೆ.ಹಾಗಾಗಿ ಅವರು ಕ್ಷಮೆ ಕೇಳಿದರೂ ಸಹ ಅವರು ನಟಿಸಿರುವ ಚಿತ್ರಗಳನ್ನು ಬ್ಯಾನ್ ಮಾಡಬೇಕು. ಹಾಗೂ ಕರ್ನಾಟಕಕ್ಕೆ ಅವರು ಬರುವದನ್ನು ನಿರ್ಬಂಧಿಸಬೇಕು ಆಗ ಮತ್ತೊಮ್ಮೆ ಯಾರೂ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಲು ಎಚ್ಚರಿಕೆಯ ಪಾಠವಾಗುತ್ತದೆ. ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮ್ಯಾಗಳಮನಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಕೃಷ್ಣ ಮೆಟ್ರಿ, ನರಸಪ್ಪ, ಮಂಜುನಾಥ, ದುರಗೇಶ್, ಮುತ್ತು, ಬಸವರಾಜ್ ನಾಯಕ,ಚಿದಾನಂದ್, ಜಂಬಣ್ಣ, ಸೋಮು, ಕನಕಪ್ಪ,ಹುಲ್ಲೇಶ್,ಮತ್ತಿತರರು ಇದ್ದರು.