Breaking News

ಬಲ್ಡೋಟಾ ಕಾರ್ಖಾನೆ ಒದ್ದೋಡಿಸಲುಜನರನ್ನು ಸಜ್ಜುಗೊಳಿಸೋಣ

Let’s mobilize the people to protest the Baldota factory.

ಜಾಹೀರಾತು
Screenshot 2025 05 29 18 01 20 67 E307a3f9df9f380ebaf106e1dc980bb6



ಕೊಪ್ಪಳ: ನಗರದ ಪಕ್ಕದಲ್ಲಿಯೇ ಬಂದು ಬಲ್ಡೋಟಾ ಕಾರ್ಖಾನೆ ಹಾಕುತ್ತಿರುವದನ್ನು ವಿರೋಧಿಸಿ ಹಲವು ಹಂತದ ಹೋರಾಟ ಜರುಗಿದ್ದು, ಜನರಿಗೆ ಮಾರಕವಾಗಿರುವ ಎಲ್ಲಾ ಕಂಪನಿಗಳನ್ನು ಕೊಪ್ಪಳದಿಂದ ಒದ್ದೋಡಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಜಂಟಿ ಕ್ರಿಯಾ ವೇದಿಕೆ ಸಭೆಯಲ್ಲಿ ಬಲ್ಡೋಟಾದ ಎಂಎಸ್‌ಪಿಲ್‌ನ ಬಿಎಸ್‌ಪಿಎಲ್ ಕಾರ್ಖಾನೆ ವಿರುದ್ಧ ಹೋರಾಟದ ರೂಪರೇಷೆ ಸಿದ್ದಪಡಿಸುವ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂತಿಮ ನಿರ್ಣಯ ತೆಗೆದುಕೊಂಡಿದ್ದು ಹಲವು ಹೋರಾಟಕ್ಕೆ ಕೊಪ್ಪಳ ಮತ್ತು ಭಾದಿತ ಪ್ರದೇಶದ ಜನರನ್ನು ಸಜ್ಜುಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.
ಕೊಪ್ಪಳದ ೩೧ ಮತ್ತು ಭಾಗ್ಯನಗರದ ೧೯ ಹಾಗೂ ಸುಮಾರು ೩೦ ಗ್ರಾಮಗಳಲ್ಲಿ ಪರಿಸರ ಜಾಗೃತಿ ಸಭೆ ನಡೆಸುವದು. ನಗರದ ಅಶೋಕ ವೃತ್ತದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಯೊಂದು ಸಂಘಟನೆಗಳನ್ನು ಅದರಲ್ಲಿ ತೊಡಗಿಸಿಕೊಳ್ಳುವದು. ಕ್ಷೇತ್ರದ ಸುಮಾರು ೩೦ ಸಾವಿರ ಕುಟುಂಬಗಳಿAದ, ವಿದ್ಯಾರ್ಥಿಗಳಿಂದ ರಾಷ್ಟçಪತಿಗಳು, ಮುಖ್ಯಮಂತ್ರಿಗಳು, ಹಸಿರು ನ್ಯಾಯಾಧಿಕರಣಕ್ಕೆ ಮತ್ತು ಬಲ್ಡೋಟಾ ಮಾಲಿಕರಿಗೆ ಸುಮಾರು ಒಂದು ಲಕ್ಷ ಪತ್ರ ಬರೆಸುವ ಮೂಲಕ ಪತ್ರ ಚಳುವಳಿ ನಡೆಸುವದು.
ಕೊಪ್ಪಳ ಜಿಲ್ಲಾ ಆಫ್‌ಸೆಟ್ ಪ್ರಿಂರ‍್ಸ್ ಅಸೋಸಿಯೇಷನ್ ಅವರಿಂದ ಪೋಸ್ಟರ್ ಜಾಗೃತಿ ಅಭಿಯಾನ ನಡೆಸುವದು. ಕೊಪ್ಪಳದಿಂದ ಗಿಣಿಗೇರಾವರೆಗೆ ಸೈಕಲ್ ಜಾಥಾ ಹಾಗೂ ಕೊಪ್ಪಳ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಹಾನಿ ಕುರಿತು ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಏರ್ಪಡಿಸುವದು ಸೇರಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಪೇಂಟ್ ಅಭಿಯಾನ ಮುಗಿದ ತಕ್ಷಣ ಹಂತ ಹಂತವಾಗಿ ಜಾರಿಗೆ ತರಲು ಸಭೆ ಒಕ್ಕೋರಲ ನಿರ್ಣಯ ತೆಗೆದುಕೊಂಡಿದ್ದು, ವಿವಿಧ ಕಾರ್ಯಕ್ರಮಗಳಿಗೆ ಪ್ರತ್ಯೇಕ ಸಮಿತಿ ರಚಿಸಿ ಜವಾಬ್ದಾರಿ ನೀಡಲು ಸಭೆ ಒಪ್ಪಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಸೋಮರಡ್ಡಿ ಅಳವಂಡಿ, ಬಸವರಾಜ ಶೀಲವಂತರ, ರಮೇಶ ತುಪ್ಪದ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಡಾ. ಮಂಜುನಾಥ ಸಜ್ಜನ್, ಸಂತೋಷ ದೇಶಪಾಂಡೆ, ಮುದುಕಪ್ಪ ಹೊಸಮನಿ, ಶಿವಕುಮಾರ ಕುಕನೂರ, ಶರಣು ಪಾಟೀಲ, ಶರಣು ಡೊಳ್ಳಿನ, ಕೇಶವ ಕಟ್ಟಿಮನಿ, ಎಸ್. ಎ. ಗಫಾರ್, ಮಖಬುಲ್ ರಾಯಚೂರ ಇತರರು ಇದ್ದರು.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.