Breaking News

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ: ಭಾರಧ್ವಾಜ್

Koppal District Building and Other Construction Workers Union for existence: Bharadhwaj

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿ ನೋಂದಣಿಗೆ ಸಲ್ಲಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂಘವು ಕ್ರಾಂತಿಚಕ್ರ ಬಳಗದ ಅಡಿಯಲ್ಲಿ ನೋಂದಣಿಯಾಗಲಿದ್ದು, ಸಂಘಕ್ಕೆ ನಿವೃತ್ತ ಹಿರಿಯ ಕಾರ್ಮಿಕ ನಿರೀಕ್ಷಕರಾದ ಶೇಖರಗೌಡ ಮಾಲಿಪಾಟೀಲ್‌ರವರು ಗೌರವ ಸಲಹೆಗಾರರಾಗಿ ಸಲಹೆ ನೀಡಲಿದ್ದು, ಅಧ್ಯಕ್ಷರಾಗಿ ಇಬ್ರಾಹಿಂ ಮೇಸ್ತಿç, ಉಪಾಧ್ಯಕ್ಷರಾಗಿ ಹನುಮಂತ ಚೌಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮೆಹಬೂಬಸಾಬ ಲಾಠಿ, ಜಂಟಿ ಕಾರ್ಯದರ್ಶಿಯಾಗಿ ಚಾಂದಪಾಷಾ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಮರಿಸ್ವಾಮಿ, ಎಸ್. ಸಿಖಂದರ್, ಖಜಾಂಚಿಯಾಗಿ ಸೈಯ್ಯದ್ ಇಸೂಬ್ ರವರನ್ನು ನೇಮಿಸಲಾಗಿದ್ದು, ಸಂಘವು ಕಾರ್ಮಿಕ ಇಲಾಖೆಯ ಕಾಯ್ದೆಗಳನ್ವಯ ಕಾರ್ಯನಿರ್ವಹಿಸಲಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಲಿದೆ ಎಂದು ತಿಳಿಸಿದರು.

About Mallikarjun

Check Also

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಜಿಲ್ಲಾಡಳಿತದಿಂದ ಹೆಲ್ಪ್ಲೈನ್ ಆರಂಭ

Social, educational survey: District administration launches helpline ಕೊಪ್ಪಳ ಸೆಪ್ಟೆಂಬರ್ 23 (ಕರ್ನಾಟಕ ವಾರ್ತೆ): ಸೆಪ್ಟೆಂಬರ್ 22 ರಿಂದ …

Leave a Reply

Your email address will not be published. Required fields are marked *