ಕಲ್ಯಾಣಸಿರಿ ವರದಿ ಫಲಶೃತಿ
Indira Canteen inaugurated in Kotturu Report on the results




ಮಾಜಿ ಶಾಸಕರ ಭಾವಚಿತ್ರದ ಬ್ಯಾನರ್ ನಿಂದ ,ಇಂದಿರಾ ಕ್ಯಾಂಟಿನ್ ಉದ್ಘಾಟನೆಯಲ್ಲಿ,ರಾಜಕೀಯ ಎರಚಾಟವು *

“ಅಧಿಕಾರಿಗಳಿಗೆ ಶಿಷ್ಟಾಚಾರದ ನಿಯಮಗಳು ಗೊತ್ತಿಲ್ಲವೇ ಅಥವಾ ಗೊತ್ತಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದರೋ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ ನೇಮಿರಾಜ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು “

ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ನೇಮಿರಾಜನಾಯ್ಕ ಹಾಗೂ ಸಂಸದ ತುಕಾರಾಮ್ ಉದ್ಘಾಟನೆಯನ್ನು ಗುರುವಾರ ಮಾಡಿದರು. ಆಸ್ಪತ್ರೆಯ ಹೆಬ್ಬಾಗಿಲಿನ ಪಕ್ಕದಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿರುವುದು ಕ್ಷೇತ್ರದ ಶಾಸಕರಿಗೆ ಇರುಸುಮುರುಸು ಉಂಟಾಯಿತು. ಮಾಜಿ ಶಾಸಕರ ಭಾವಚಿತ್ರದ ಬ್ಯಾನರ್ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿ ಹಾಕಿರುವುದರಿಂದ ಅದನ್ನು ತೆರವುಗೊಳಿಸುವವರೆಗೆ ಶಾಸಕ ನೇಮಿರಾಜನಾಯ್ಕ ಒಳಗಡೆ ಬರಲಿಲ್ಲ ಕೂಡಲೇ ಅಧಿಕಾರಿಗಳು ತೆರವುಗೊಳಿಸಿದ ನಂತರ ಶಾಸಕರು ಆಗಮಿಸಿದರು. ಅಧಿಕಾರಿಗಳಿಗೆ ಶಿಷ್ಟಾಚಾರದ ನಿಯಮಗಳು ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದರೋ? ಸ್ಥಳೀಯ ರಾಜಕೀಯ ಎರಚಾಟವು ಸಾರ್ವಜನಿಕರ ಗಮನಕ್ಕೆ ಬಂದಿತು.
ಹಸಿವುಮುಕ್ತ ರಾಜ್ಯವನ್ನು ಮಾಡುತ್ತೇವೆಂಬ ಮಹತ್ವಾಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ವಿಳಂಬವಾಗಿ ಕಡುಬಡವರಿಗೆ ಕಷ್ಟವಾಗಿತ್ತು. ನಿರಂತರವಾಗಿ ಪತ್ರಿಕಾ ವರದಿಗಳನ್ನು ನೋಡಿ ಎಚ್ಚೆತ್ತ ಸರ್ಕಾರ, ಅಧಿಕಾರಿಗಳು ಅತೀ ಶೀಘ್ರದಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆಯಾಗಿರುವುದು ಈ ಭಾಗದ ಜನರ ಹಸಿವನ್ನು ನೀಗಿಸುತ್ತದೆಯೋ ಕಾದು ನೋಡಬೇಕಾಗಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮರೇಶ್, ಪ.ಪಂ. ಅಧ್ಯಕ್ಷೆ ಬಿ.ರೇಖಾ ರಮೇಶ್, ಉಪಾಧ್ಯಕ್ಷ ಸಿದ್ದಯ್ಯ, ಪ.ಪಂ. ಮುಖ್ಯಾಧಿಕಾರಿ ಎ.ನಸುರುಲ್ಲಾ, ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.