Impact of indefinite strike: Garbage everywhere, curses from the public

ಅನಿರ್ದಿಷ್ಟಾವಧಿ ಮುಷ್ಕರ
ಹೋರಾಟಕ್ಕೆ ಪೌರ ನೌಕರರಿಂದ ಬಾಹ್ಯ ಬೆಂಬಲ*
“ಕೊಟ್ಟೂರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ”
ಕೊಟ್ಟೂರು : ರಾಜ್ಯ ಪೌರ ನೌಕರರ ಸಂಘದ ಆದೇಶದ ಮೇರೆಗೆ ನಗರದ ಪೌರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಿದ ಅನಿರ್ಧಿಷ್ಟಾವಧಿ ಮುಷ್ಕರ ಮತ್ತೇ ಗುರುವಾರ ಮುಂದುವರಿದಿದೆ. ಪೌರಕಾರ್ಮಿಕರ ಮುಷ್ಕರಕ್ಕೆ ಕೊಟ್ಟೂರು ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಮಾಡುವ ಸಾಲಗಟ್ಟಿಗಿಂತ ಸ್ಥಿತಿಯಲ್ಲಿರುವ ವಾಹನಗಳು ಸ್ಥಗಿತ, ಪಟ್ಟಣದಲ್ಲೆಲ್ಲಾ ಕಸದ ರಾಶಿಗಳು ಎದ್ದುಕಾಣುತ್ತಿವೆ. ಕೂಡಲೇ ಸರ್ಕಾರ, ಅಧಿಕಾರಿಗಳು

ಎಚ್ಚೆತ್ತುಕೊಳ್ಳದಿದ್ದರೆ, ಪಟ್ಟಣವೆಲ್ಲಾ ಕಲುಷಿತಗೊಂಡು, ಗಬ್ಬು ನಾರುವ ಪರಿಸ್ಥಿತಿಗೆ ತಲುಪುತ್ತದೆ. ಜನರು ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗುವ ಮುನ್ನ ಇತ್ತ ಕಡೆ ಗಮನ ಹರಿಸಬೇಕಾಗಿದೆ. ಸಂವಿಧಾನಶಿಲ್ಪಿ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೂರನೇ ದಿನದ ಹೋರಾಟವನ್ನು ಮುಂದುವರಿಸಿದರು. ಸರ್ಕಾರ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎನ್ನುವ ಭರವಸೆಯಿದೆ. ರಾಜ್ಯಾಧ್ಯಕ್ಷರು ಮುಷ್ಕರವನ್ನು ಹಿಂಪಡೆಯಲು ತಿಳಿಸುವವರೆಗೆ ಮುಷ್ಕರ ನಡೆಯುತ್ತದೆ ಎಂದು ಎಂ. ಕೊಟ್ರೇಶ್ ಪತ್ರಿಕೆಗೆ ತಿಳಿಸಿದರು.
“ಗುರುವಾರ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಬಂದಿದ್ದ ಕ್ಷೇತ್ರದ ಶಾಸಕ ನೇಮಿರಾಜನಾಯ್ಕ ಮಾತನಾಡಿ ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ವಿಧಾನಸಭೆಯಲ್ಲಿ ಗಟ್ಟಿಧ್ವನಿ ಎತ್ತಿ, ಪೌರ ಕಾರ್ಮಿಕರ ಸೌಲಭ್ಯಗಳನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಧ್ವನಿ ಎತ್ತುತ್ತೇನೆ. ಅಲ್ಲದೇ ಈ ಮುಷ್ಕರಕ್ಕೆ ನನ್ನ ಬೆಂಬಲವೂ ಇದೆ ಎಂದರು.”
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಚ್.ಶಂಕ್ರಪ್ಪ, ಕಾರ್ಯದರ್ಶಿ ಎ.ಮಂಜುನಾಥ, ಖಜಾಂಚಿ ಎಸ್.ಪರುಸಪ್ಪ, ಸಂಘಟನಾಕಾರ್ಯದರ್ಶಿ ಎನ್.ವಿಜಯಕುಮಾರ, ಬಿ.ರವಿ, ಬಿ.ರಮೇಶ ನಿರ್ದೇಶಕರಾದ ಸುಭದ್ರಮ್ಮ, ಸುಮಿತ್ರಮ್ಮ, ಎಲ್ಲಾ ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.