BJP is obsessed with power: Gondaba is upset

ಕೊಪ್ಪಳ: ಬಿಜೆಪಿ ನಾಯಕರಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ಬದುಕೇ ನಡೆಯಲ್ಲ, ಕಲಬುರಗಿಯ ಜಿಲ್ಲಾಧಿಕಾರಿಗಳ ಬಗೆಗಿನ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ಅತ್ಯಂತ ಖಂಡನೀಯ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಪಾಕಿಸ್ತಾನ ಪ್ರೇಮಿ ಬಿಜೆಪಿಗರು ಇಷ್ಟು ದಿನ ರಾಜಕೀಯ ನಾಯಕರ ವಿರುದ್ಧ ಪಾಕಿಸ್ತಾನದ ಹೆಸರು ಪ್ರಯೋಗಿಸುತ್ತಿದ್ದರು, ಈಗ ಅವರ ನಾಲಿಗೆ ಇನ್ನೂ ಉದ್ದವಾಗಿ ಅಧಿಕಾರಿಗಳನ್ನೂ ಪಾಕಿಸ್ತಾನದಿಂದ ಬಂದವರು ಎನ್ನುವ ಮಟ್ಟಿಗೆ ಬಂದಿದೆ, ಇದು ನಿಜಕ್ಕೂ ಕೆಟ್ಟ ಪರಿಣಾಮ ಬೀರುವ ಕ್ರಿಯೆ ಹಾಗೇ ಬಿಜೆಪಿಗರು ಸೇನಾಧಿಕಾರಿಗೆ ಭಯೋತ್ಪಾದಕರ ಸಹೋದರಿ ಎಂದರು, ಸೈನಿಕರು ಮೋದಿಯ ಕಾಲಿಗೆ ಬೀಳುತ್ತಾರೆ ಎಂದರು, ಸೈನಿಕರ ಪತ್ನಿಯರ ಶೀಲದ ಬಗ್ಗೆ ಸಂಶಯದಿAದ ಮಾತನಾಡಿದರು ಈಗ ಇಲ್ಲಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದವರು ಎಂದರು. ಬಿಜೆಪಿಗರ ಜ್ಞಾನವು ಪಾಕಿಸ್ತಾನ, ಮುಸ್ಲಿಂ ವಿಚಾರಗಳನ್ನು ದಾಟಿ ಮುಂದೆ ಹೋಗುವುದೇ ಇಲ್ಲ, ಅದಕ್ಕೆ ಕಾರಣ ಅಧಿಕಾರದ ದಾಹ, ಮೋಹ, ಹಣದ ವ್ಯಾಮೋಹ ಎಂಬುದು ಸ್ಪಷ್ಟವಾಗಿದ್ದು, ದೇಶದ ಜನರು ಈಗಲಾದರು ಬಿಜೆಪಿಯ ಮನುವ್ಯಾದಿತನಕ್ಕೆ ಉತ್ತರ ಕೊಡಬೇಕಿದೆ.
ಅಧಿಕಾರಿಗಳ ನೈತಿಕ ಸ್ಥೆöÊರ್ಯ ಕಸಿಯುವ ಪ್ರಯತ್ನದಲ್ಲಿರುವ ರವಿಕುಮಾರ್ ಅವರಿಗೆ ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಐಎಎಸ್ ಪಾಸ್ ಮಾಡಿ ದೇಶ ಸೇವೆಗೆ, ಜನಸೇವೆಗೆ ಬಂದವರು, ರಾಷ್ಟçಪತಿ ದ್ರೌಪದಿ ಮುರ್ಮು ಅವರು ಅತ್ಯುತ್ತಮ ಚುನಾವಣಾ ಅಧಿಕಾರಿಯ ಪ್ರಶಸ್ತಿಯನ್ನು ಕೊಡಮಾಡಿದ್ದಾರೆ. ನಿಮ್ಮ ಹಾಗೆ ಯಾರಿಗೋ ಬಹುಪರಾಕ್ ಹೇಳಿಕೊಂಡು, ಬಿಜೆಪಿಗÀರ ಗುಲಾಮಗಿರಿ ಮಾಡಿಕೊಂಡು ಸ್ಥಾನ ಗಿಟ್ಟಿಸಿಕೊಂಡವರಲ್ಲ,
ಅಧಿಕಾರಿಯ ಧರ್ಮ ಯಾವುದಾದರೂ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಜನಸೇವೆಗೆ ಬಂದಿರುತ್ತಾರೆ, ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಯಾರಿಗೆ ಹೇಗೆ ಮಾತಾಡಬೇಕು ಎಂಬ ಮಿನಿಮಮ್ ಕಾಮನ್ ಸೆನ್ಸ್ ಇಲ್ಲದ ಇಂತವರು ಕರ್ನಾಟಕದ ರಾಜಕಾರಣಕ್ಕೆ ಕಳಂಕ ಎಂದು ಜರಿದಿದ್ದಾರೆ.
ದೇಶಕ್ಕಾಗಿ ದುಡಿಯುವ ಸೇನಾಧಿಕಾರಿ, ಅಧಿಕಾರಿಗಳು, ಸೈನಿಕರನ್ನು ಅವಮಾನಿಸುವುದನ್ನು ವ್ಯಸನ ಮಾಡಿಕೊಂಡಿರುವ ಬಿಜೆಪಿಗರ ದುರಹಂಕಾರಕ್ಕೆ ಜನತೆ ಪಾಠ ಕಲಿಸಬೇಕಿದೆ, ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಸಮಸ್ಯೆಯಲ್ಲಿದ್ದಾರೆ, ಅದಕ್ಕೆ ಜನರಿಗೆ ತಪ್ಪು ಸಂದೇಶಗಳ ಮೂಲಕ ತೊಂದರೆ ಕೊಡುತ್ತಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ತಿಳಿಸಿದ್ದಾರೆ.