Breaking News

ಏಳು ವರ್ಷ ಸಿಎಂ ಆಗಿದ್ದ ನಿಜಲಿಂಗಪ್ಪ ಅವರಲ್ಲಿ ಸ್ವಂತ ಕಾರು ಇರಲಿಲ್ಲ

Nijalingappa, who was CM for seven years, did not have his own car.

ಜಾಹೀರಾತು
Screenshot 2025 05 27 20 49 05 87 6012fa4d4ddec268fc5c7112cbb265e7

ಏಳು ವರ್ಷ ಸಿಎಂ ಆಗಿದ್ದ ನಿಜಲಿಂಗಪ್ಪ ಅವರಲ್ಲಿ ಸ್ವಂತ ಕಾರು ಇರಲಿಲ್ಲ. ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಬೇಕೆನಿಸಿದಾಗ ಅಥವಾ ಇನ್ನೆಲ್ಲೋ ಓಡಾಟವಿದೆ ಎಂದಾಗ ಸ್ನೇಹಿತರ ಕಾರಿನಲ್ಲಿ ಅವರು ಹೋಗಿ ಬರುತ್ತಿದ್ದರು. ಬಿದ್ದು ಕಾಲು ಮುರಿದಾಗ ತಮ್ಮನ್ನು ಬೆಂಗಳೂರಿನಲ್ಲಿರುವ ಸರ್ಕಾರಿ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡುವಂತೆ ಸರ್ಕಾರವನ್ನು ಕೋರಿದ್ದರು. ಖಾಸಗಿ ಆಸ್ಪತ್ರೆಗೆ ಸೇರಿಸುವ ಅಂದಿನ ಮುಖ್ಯಮಂತ್ರಿಯ ಸಲಹೆಯನ್ನು ಅವರು

Screenshot 2025 05 27 20 49 45 04 6012fa4d4ddec268fc5c7112cbb265e7 820x1024

ನಿರಾಕರಿಸಿದ್ದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದರು.ಅಲ್ಲಿಂದ ತಮ್ಮ ರಾಜಕೀಯ ಗುರುವಿನ ಜೊತೆ ಮಾತಾಡಲು ಬಯಸಿ ಫೋನ್ ತಿರುಗಿಸಿದರೆ ಈ ನಂಬರ್ ಚಾಲನೆಯಲ್ಲಿ ಎಂಬ ಉತ್ತರ ಬಂತು. ಎಷ್ಟು ಬಾರಿ ಫೋನ್ ಮಾಡಿದರೂ ಇದೇ ಉತ್ತರ. ಹೆಗಡೆ ಅಲ್ಲಿಂದ ತಮ್ಮ ಆಪ್ತ ಸಹಾಯಕ ರಾಮಪ್ಪನವರಿಗೆ ಫೋನ್ ಮಾಡಿ ರಾಮಪ್ಪ ಚಿತ್ರದುರ್ಗ ಎಸ್ ಪಿ ಯನ್ನು

Screenshot 2025 05 27 20 49 31 54 6012fa4d4ddec268fc5c7112cbb265e7 1024x690

ಸಂಪರ್ಕಿಸಿ ಹಕಿಕತ್ ವಿವರಿಸಿದರು. ಶಂಕರ್ ಬಿದರಿ ಯವರು ಆಗ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಗೆ ಆಯ್ಕೆಯಾಗುವ ಪೂರ್ವದಲ್ಲಿ ದೂರವಾಣಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಏನು ಆಗಿರಬಹುದು ಎಂಬುದನ್ನು ಅವರು ಸರಿಯಾಗಿ ಊಹಿಸಿದರು ರೂ.೪೦ ಬಿಲ್ಲು ಹಣ ತುಂಬದ ಕಾರಣ ಮಾಜಿ ಮುಖ್ಯಮಂತ್ರಿ ಮನೆ ದೂರವಾಣಿ ಸಂಪರ್ಕವನ್ನು ಇಲಾಖೆ ಕತ್ತರಿಸಿ ಹಾಕಿತ್ತು.

ತುಂಬ ಬೇಕಿದ್ದ ಬಾಕಿ ಮೊತ್ತವಾದರೂ ಎಷ್ಟು ಅಂತೀರಿ. ೧೦,೨೦ ಸಾವಿರವೇ? ಅಲ್ವೇ ಅಲ್ಲ. ಬರೀ ರೂ.೪೦ ಅಷ್ಟೇ. ಹಲವು ತಿಂಗಳುಗಳಿಂದ ಬಾಕಿ ಇರಿಸಿಕೊಂಡಿದ್ದರಿಂದ ಇಲಾಖೆಯ ನಿಯಮನುಸಾರ ಟೆಲಿಫೋನ್ ಸಂಪರ್ಕ ಕಡಿದು ಹಾಕಲಾಗಿದೆ ಎಂಬ ಮಾಹಿತಿ ಸಂಗ್ರಹಿಸಿದ ಬಿದರಿ ಅವರು ರೂ.೪೦ ಜೊತೆಗೆ ಮರು ಸಂಪರ್ಕಕ್ಕೆ ೨೫ ರೂಪಾಯಿ ದಂಡ ಕಟ್ಟಿ ಒಟ್ಟು ೬೫ ರೂಪಾಯಿಗಳನ್ನು ಅವರಿಗೆ ಗೊತ್ತಾಗದೆ ಪಾವತಿಸಿದ್ದರು.

ಮನೆಯಲ್ಲಿ ಏನನ್ನೋ ಓದುತ್ತಾ ಕುಳಿತಿದ್ದ ಎಸ್ ಎನ್ ಅವರಿಗೆ ಫೋನ್ ರಿಂಗಣಿಸಿದಾಗ ಅಚ್ಚರಿ. ಆ ಕಡೆಯಿಂದ ಹಲೋ ಸರ್ ಎಂದವರು ಹೆಗಡೆ. ಆಗ ಏನನ್ನು ಹೇಳಲು sn ನಾನು ಬಿಲ್ಲು ತುಂಬಿರಲಿಲ್ಲ ಯಾರು ಈ ಕೆಲಸ ಮಾಡಿದ್ದು ವಿಚಾರಿಸಿ ಎಂದು ತಮ್ಮ ವಿಶ್ವಾಸಿಕರೊಬ್ಬರನ್ನು ಕೋರಿದರು. ಟೆಲಿಫೋನ್ ಎಕ್ಸ್ಚೇಂಜ್ ನಲ್ಲಿ ಅವರು ವಿಚಾರಿಸಿದಾಗ ಎಸ್ಪಿ ಎಂಬುದು ಗೊತ್ತಾಯ್ತು. ತಮ್ಮ ಆತ್ಮಕಥನ ಸತ್ಯಮೇವ ಜಯತೆಯಲ್ಲಿ ಶಂಕರ್ ಬಿದರಿಯವರು ಈ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಎಸ್ ಎನ್ ತಡಮಾಡಲಿಲ್ಲ ಬಿದರಿಯವರನ್ನು ಮನೆಗೆ ಕರೆಸಿಕೊಂಡು ಮಾತಾಡಿಸಿ ಕಾಫಿ ಕುಡಿಸಿ ಮುಂದಿನ ತಿಂಗಳು ಮೊದಲ ವಾರ ಬನ್ನಿ ಎಂದರು. ಅದರಂತೆ ಬಿದರಿಯವರು ಎಸ್ಎನ್ ಅವರ ಮನೆಗೆ ಹೋದಾಗ ಒಂದು ಕವರಿನಲ್ಲಿ ೬೫ ಇಟ್ಟು ಥ್ಯಾಂಕ್ಸ್ ಹೇಳಿದರು. ತಮ್ಮ ದೂರವಾಣಿ ಮರುಸ್ಥಾಪನೆಯಾದ ಕೂಡಲೇ ೬೫ ರೂಪಾಯಿಯನ್ನು ಹಿಂದಿರುಗಿಸುವ ಆರ್ಥಿಕ ಬಲ ಅವರಲ್ಲಿ ಇರ್ಲಿಲ್ಲ ಎಂಬುದು ಇಂದಿನ ರಾಜಕಾರಣಿಗಳಿಗೆ ಭರ್ಚಿ ಯಂತೆ ಚುಚ್ಚಿದರೂ ಆಶ್ಚರ್ಯ ಇಲ್ಲ. ಒಂದಲ್ಲ ಎರಡಲ್ಲ ಏಳು ವರ್ಷ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಾಗಿದ್ದರು. ಈಗ ಇಂಥ ಸನ್ನಿವೇಶ ಸಂದರ್ಭಗಳನ್ನು ಸ್ಮರಿಸಿಕೊಂಡಾಗ ರಾಷ್ಟ್ರ ನಾಯಕ ಎಸ್ ನಿಜಲಿಂಗಪ್ಪನವರು ಎಷ್ಟೊಂದು ಪ್ರಾಮಾಣಿಕರಾಗಿದ್ದರು ಎಂಬುದು ವೇದ್ಯವಾಗುತ್ತದೆ ಅಲ್ವಾ?

ಎಂ ಕೆ ಭಾಸ್ಕರ್ ರಾವ್ (ಸಾಮಾಜಿಕ ಜಾಲತಾಣ)

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.