Breaking News

ನಟರಾಜ್ ಕಪ್ ಸೀಸನ್-1 ಕ್ರಿಕೆಟ್: ಬೆಂಗಳೂರು ಬ್ಲೂ ಬಾಯ್ಸ್ ತಂಡ ಚಾಂಪಿಯನ್

Nataraj Cup Season-1 Cricket: Bangalore Blue Boys team crowned champions

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ:ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾ ರ ಮಳೆಯ ನಡುವೆ ನಡೆದ ನಟರಾಜ ಕಪ್ ಸೀಸನ್-1 ಕ್ರಿಕೆ ಟ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲೂ ಬಾಯ್ಸ್ ಡಾನ್ಸ ರ್ಸ್ ತಂಡ ದಾವಣಗೆರೆ ಡಾನ್ಸರ್ಸ್ ಇಲೆವೆನ್ ತಂಡ ವಿರುದ್ಧ ಜಯಗಳಿಸಿ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ಎರಡು ದಿನಗಳ ಕಾಲ (ಏ.24.25) ನಡೆದ ರಾಜ್ಯಮಟ್ಟದ ಡಾನ್ಸರ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಗಳಿಂದ ಆಗಮಿಸಿದ 10 ಡಾನ್ಸರ್ಸ್ ತಂಡಗಳು ಎ ಮತ್ತು ಬಿ ಗ್ರೂಪ್ ನಿಂದ ಭಾಗವಹಿಸಿ, ಪ್ರಶಸ್ತಿಗಾಗಿ ಸೆಣಸಾಟ ನಡೆ ಸಿದವು.

ಈ ಕ್ರಿಕೆಟ್ ಟೂರ್ನಮೆಂಟಿನ ಫೈನಲ್ ಪಂದ್ಯದಲ್ಲಿ ದಾವಣ ಗೆರೆ ಡಾನ್ಸರ್ಸ್ ಇಲೆವೆನ್ ತಂಡ ವಿರುದ್ದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲೂ ಬಾಯ್ಸ್ ಡಾನ್ಸರ್ಸ್ ತಂಡ ನಿಗದಿತ 6ಓವರ್ ಗಳಲ್ಲಿ 3ವಿಕೆಟ್ ನಷ್ಟಕ್ಕೆ

58 ರನ್ ಗಳಿಸಿತು. ಬ್ಯಾಟಿಂಗ್ ನಲ್ಲಿ ಪ್ರವೀಣ್ ಎಬಿಡಿ 20 ಎಸೆತಗಳಲ್ಲಿ 33ರನ್ ಗಳಿಸಿ, ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು.

59ರನ್ ಗಳು ಗುರಿ ಬೆನ್ನಟ್ಟಿದ ದಾವಣಗೆರೆ ಡಾನ್ಸರ್ಸ್ ಎಲೆ ವೆನ್ ತಂಡ ನಿಗದಿತ 6 ಓವರ್ ಗಳಲ್ಲಿ 5 ನಷ್ಟಕ್ಕೆ 44ರನ್  ಗ ಳಿಸಿ ಸೋಲು ಅನುಭವಿಸುವ ಮೂಲಕ ರನ್ನರ್ ಆಪ್ ಸ್ಥಾ ನಕ್ಕೆ ತೃಪ್ತಿಪಟ್ಟಿಕೊಂಡಿತು. ಬ್ಯಾಟಿಂಗ್ ಪರ ಸಂತೋಷ ಬಂ ಡಿ 11,ವಿಕ್ಕಿ 11, ವಿಶಾಲ್ 12ರನ್ ಗಳಿಸಿದರು. ಬೌಲಿಂಗ್‌ ನಲ್ಲಿ ಪ್ರಜುಗೌಡ 16ರನ್ ನೀಡಿ‌ 2ವಿಕೆಟ್ ಪಡೆದರು.

ಚಾಂಪಿಯನ್ ಮತ್ತು ರನ್ನರ್ ಆಪ್ ತಂಡಗಳಿಗೆ ಪ್ರಶಸ್ತಿ ಜೊತೆಗೆ ನಗದು ಬಹುಮಾನ ವಿತರಿಸಲಾಯಿತು. 3ನೇ ಸ್ಥಾ ನ ಪಡೆದ ಟಿಡಿಎ ಹೊಸಪೇಟೆ ತಂಡಕ್ಕೆ ಪ್ರಶಸ್ತಿ ಮಾತ್ರ ನೀ ಡಲಾಯಿತು. ಇದೆ ಮೊದಲ ಬಾರಿಗೆ ಗಂಗಾವತಿ ಡಾನ್ಸರ್ಸ್ ತಂಡ ಗಂಗಾ ವತಿ ನಗರದಲ್ಲಿ ರಾಜ್ಯಮಟ್ಟದ ಡಾನ್ಸರ್ಸ್ ಕ್ರಿಕೆ ಟ್ ಪಂದ್ಯಾ ವಳಿಗಳ ನಟರಾಜ ಕಪ್ ಸೀಸನ್ -1 ಆಯೋ ಜಿಸಿದೆ. 

ಈ ಟೂರ್ನಮೆಂಟನಲ್ಲಿ ಬೆಂಗಳೂರು ಬ್ಲೂ ಬಾಯ್ಸ್, ದಾ ವಣಗೆರೆ ಡಾನ್ಸರ್ಸ್ ಇಲೆ ವೆನ್, ಟಿಡಿಎ ಹೊಸಪೇಟೆ, ರಾಕಿ ಡಾ ನ್ಸ್ ಹುಬ್ಬಳ್ಳಿ, ಸಿರಗುಪ್ಪ ಡಾನ್ಸರ್ಸ್, ಗಂಗಾವತಿ ಜಿಜಿ ಗಾ ಯ್ಸ್, ಬಳ್ಳಾರಿ ಡಾನ್ಸರ್ಸ್, ಗಂಗಾವತಿ ಜೂನಿಯರ್ ಡಾನ್ಸ ರ್ಸ್ ತಂಡ,ಕೊಪ್ಪಳ ಡಾನ್ಸರ್ಸ್, ಧಾರವಾಡ ದ ವೈಬ್ ಡಾ ನ್ಸರ್ಸ್ ತಂಡಗಳು ಪಾಲ್ಗೊಂಡಿವೆ.

ಈ ಎಲ್ಲ ತಂಡಗಳನ್ನ ಎ ಮತ್ತು ಬಿ ಗುಂಪುಗಳಾಗಿ ವಿಂಗಡಿ ಸಿ, 6ಓವರ್ ಗಳ ಲೀಗ್ ಹಂತದ ಪಂದ್ಯ ಆಡಿಸಿ, 2 ಗುಂ ಪಿನಲ್ಲಿನ ಮೊದಲ 2 ತಂಡಗಳ ನಡುವೆ ಸೆಮಿಫೈನಲ್ ಆಡಿ ಸಿ, ಫೈನಲ್ ಪಂದ್ಯ ನಡೆಸಲಾಗಿದೆ. ಆಟಗಾರರಿಗೆ 2ದಿನ ಟಿ ಫೀನ್ ಜೊತೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಚಾಂಪಿಯನ್ಸ್ ತಂಡದ ಆಟಗಾರರಾದ ಶರತ್, ಚೆಲ್ವಾ ದಿ ಲೀಪ್,ಕೃಷ್ಣ, ಮಧುಸೂದನ್, ಮಹೇಶ, ಆದಿತ್ಯ, ಚೇತನ್ ಪವಾರ್, ಸಂತೋಷ, ಶಶಾಂಕ್, ಹೇಮಂತ, ಗಂಗಾವತಿ ನೃತ್ಯ ಕಲಾವಿದರಾದ ದೇವರಾಜ ಬಿ ಮೋಜಸ್ ಪಾಲ್, ಶಂ ಕರ ಕುರುಗೋಡು, ಹರ್ಷವರ್ಧನ, ಸಂತೋಷ, ಸುಂದರ್, ರವಿ, ಮಂಜುನಾಥ ಸೇರಿ ಕಲಾವಿದರು ಉಪಸ್ಥಿತರಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *