Hirebenakal: Site inspection for construction of garbage disposal unit




ಸ್ವಚ್ಛ ವಾತಾವರಣ ಇದ್ದರೇ ಮಾತ್ರ ಉತ್ತಮ ಆರೋಗ್ಯ–ತಾಪಂ ಇಓ ರಾಮರೆಡ್ಡಿ ಪಾಟೀಲ್
ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮರೆಡ್ಡಿ ಪಾಟೀಲ್ ಅವರು ಗ್ರಾಪಂ ಅಧ್ಯಕ್ಷರು ಹಾಗೂ ಸ್ಥಳೀಯ ಸದಸ್ಯರೊಂದಿಗೆ ಮಂಗಳವಾರ ಭೇಟಿ ನೀಡಿ ಘನ ತಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಮಾತನಾಡಿ, ಹಳ್ಳಿಗಳಲ್ಲಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡಬೇಕು. ಸ್ವಚ್ಛ ವಾತಾವರಣ ಇದ್ದರೇ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರೇಬೆಣಕಲ್ ಗ್ರಾಮದಲ್ಲಿ ಘನ ತಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಜಾಗ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಡ್ಡರಹಟ್ಟಿ, ಬಸಾಪಟ್ಟಣ ಹಾಗೂ ಚಿಕ್ಕಬೆಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಒಣ ಕಸವನ್ನು ಹಿರೇಬೆಣಕಲ್ ಗ್ರಾಮದ ಕಸವಿಲೇವಾರಿ ಘಟಕದಲ್ಲಿ ಹಾಕಲಾಗುವುದು. ಗ್ರಾಮಗಳಲ್ಲಿ ಸ್ವಚ್ಛ ವಾತಾವರಣ ನಿರ್ಮಾಣಕ್ಕೆ ಕಸ ವಿಲೇವಾರಿ ಘಟಕಗಳು ಅತ್ಯವಶ್ಯಕವಾಗಿವೆ ಎಂದರು.
ಬಸಾಪಟ್ಟಣ ಹಾಗೂ ವಡ್ಡರಹಟ್ಟಿಯಲ್ಲಿ ಜಾಗದ ಸಮಸ್ಯೆ ಇದ್ದು, ತಾತ್ಕಾಲಿಕವಾಗಿ ಹೊಸಬೆಣಕಲ್ ನಲ್ಲಿ ಕಸವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುವುದು. ವಿಲೇವಾರಿಯಾದ ಕಸವನ್ನು ವೈಜ್ಞಾನಿಕ ವಾಗಿ ವಿಂಗಡಣೆ ಮಾಡಲಾಗುವುದು. ವಡ್ಡರಹಟ್ಟಿ ಮತ್ತು ಬಸಾಪಟ್ಟಣ ಗ್ರಾಮದಲ್ಲಿ ಜಾಗ ದೊರೆತ ಕೂಡಲೇ ಆ ಗ್ರಾಪಂ ಕಸವನ್ನು ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಚಿಕ್ಕಬೆಣಕಲ್ ಗ್ರಾಪಂ ಅಧ್ಯಕ್ಷರಾದ ಶಿವಮೂರ್ತಿ ಯಾದವ, ಬಸಾಪಟ್ಟಣ ಅಧ್ಯಕ್ಷರಾದ ಆಂಜನೇಯ ನಾಯಕ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಇಂದಿರಾ, ವಿದ್ಯಾವತಿ, ಸುರೇಶ ಚಲವಾದಿ, ಎಸ್ ಬಿಎಂ ವಿಷಯ ನಿರ್ವಾಹಕ ರಾದ ಭೀಮಣ್ಣ ನಾಯಕ, ಚಿಕ್ಕಬೆಣಕಲ್ ಗ್ರಾಪಂ ಸದಸ್ಯರಾದ ಗಾದೆಪ್ಪ, ಶಿವಕುಮಾರ್, ಎಸ್ ಡಿಎ ಶ್ರೀನಿವಾಸ, ಸೇರಿ ಇತರರು ಇದ್ದರು.