Breaking News

ದಲಿತ ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ತಿಪಟೂರು ನಗರದಲ್ಲಿ ಬೃಹತ್ ಪ್ರತಿಭಟನೆ

Massive protest in Tiptur city condemning attack on Dalit journalist

ಜಾಹೀರಾತು
IMG 20250526 WA0065 Scaled

ತಿಪಟೂರು:ತುಮಕೂರಿನಲ್ಲಿ ಕಾರ್ಯನಿರತ ದಲಿತ ಪತ್ರಕರ್ತನ ಮೇಲೆ ಕಿಡಿಗೇಡಿ ಮಂಜುನಾಥ್ ತಾಳಮಕ್ಕಿ ಹಲ್ಲೇ ನಡೆಸಿದ್ದು, ದಲಿತವಿರೋದಿ ಕೋಮುವಾದಿ ಪತ್ರಕರ್ತನ ಮೇಲೆ ಗುಂಡಾಕಾಯ್ದೆ ದಾಖಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು.
ತಹಸೀಲ್ದಾರ್ ಪವನ್ ಕುಮಾರ್ ಮನವಿ ಪತ್ರಸ್ವೀಕರಿಸಿದರು
ಪ್ರತಿಭಟನಾನಿರತರನ್ನ ಉದೇಶಿಸಿ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ಮಾತನಾಡಿ ತುಮಕೂರಿನಲ್ಲಿ ಜೀ ಟಿ.ವಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ಸಮಯ ಮಂಜುನಾಥ್ ಎಂಬುವವರ ಮೇಲೆ ಪಬ್ಲಿಕ್ ಟಿ.ವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ,ಜಾತಿನಿಂದನೆ ಮಾಡಿರುತ್ತಾನೆ,ಕೋಮುವಾದಿ ಮಂಜುನಾಥ್ ತಾಳಮಕ್ಕಿ ಕೊಳಕು ಜಾತಿಮನಸ್ಥಿತಿಯ ವ್ಯಕ್ತಿಯಾಗಿದ್ದು,ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವುದು. ಜಾತಿ ಧರ್ಮಗಳ ಮಧ್ಯೆ ಕೋಮು ವೈಷ್ಯಮ್ಯ ಬಿತ್ತಿತ್ತ, ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿದ್ದಾನೆ.ಕಾರವಾರ ತಾಳಮಕ್ಕಿ ಮೂಲದ ಈ ವ್ಯಕ್ತಿ ಈ ಹಿಂದೆ ಮಂಗಳೂರು,ಕಾರವಾರದಲ್ಲಿ ಕೋಮುವಾದಿ ಸಂಘಟನೆಗಳಲ್ಲಿ ಕೆಲಸ ಮಾಡುತ್ತಾ,ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಪಬ್ಲಿಕ್ ಟಿ.ವಿ ಮಾಧ್ಯಮವನ್ನ ಕೇವಲ ನೆಪಮಾತ್ರಕ್ಕೆ ಇಟ್ಟುಕೊಂಡು,ಕೆಲಸ ಮಾಡುತ್ತಿರುವ ಮಂಜುನಾಥ್ ತಾಳಮಕ್ಕಿ @ಮಂಜುನಾಥ್ ನಾಯ್ಕ ವರದಿಗಾರನಾಗಿ ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರೂ ದಲಿತವರದಿಗಾರರ ಮೇಲೆ ಜಾತಿನಿಂದನೆ ಮಾಡಿ ಮಾರಣಾಂತಿಕ ಹಲ್ಲೇ ನಡೆಸಿರುವ ಪ್ರಕರಣ ಸಹ .ಕೋಮುಮನಸ್ಥಿತಿಯ ವ್ಯಕ್ತಿಗಳ ವಿರುದ್ದ ಸರ್ಕಾರ ಗುಂಡಾಕಾಯ್ದೆ ದಾಖಲಿಸಿ ಇತನ ಪೂರ್ವಾಪರ ತನಿಖೆ ನಡೆಸಬೇಕು. ಮಾಧ್ಯಮಕ್ಷೇತ್ರಕ್ಕೆ ಮಾರಕ ಪಬ್ಲಿಕ್ ಟಿವಿ ಸಮಾಜದ ಮುಖವಾಣಿಯಂತೆ ಕೆಲಸ ಮಾಡುತ್ತಿದೆ.ಆದರೆ ಇಂತಹ ಪೂರ್ವಾಗ್ರಹ ಪೀಡಿತ ಜಾತಿವಾದಿ ಮನಸ್ಥಿತಿಯ ವ್ಯಕ್ತಿಗಳು ಕೆಲಸ ಮಾಡಿದರೆ, ನಮ್ಮ ಮಾಧ್ಯಮಸಂಸ್ಥೆಗೂ ಕೆಟ್ಟಹೆಸರು ಬರುತ್ತದೆ.ಕೂಡಲೇ ಪಬ್ಲಿಕ್ ಟಿ.ವಿ ರಂಗನಾಥ್ ರವರು,ನಮ್ಮ ಮಾಧ್ಯಮಸಂಸ್ಥೆಯಿಂದ ಕೂಡಲೇ ವಜಾಗೊಳಿಸಬೇಕು.ಪೊಲೀಸ್ ಹಾಗೂ ಸರ್ಕಾರ ಕೂಡಲೇ ಕಾನೂನು ಕ್ರಮಕೈಗೊಂಡು ಇಂತಹ ಸಮಾಜದ್ರೋಹಿಗಳನ್ನ ನಿಗ್ರಹಿಸದಿದ್ದರೆ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಡಿ.ಎಸ್ಎಸ್ ಜಿಲ್ಲಾಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಮಾಧ್ಯಮ ಕ್ಷೇತ್ರ ಸರ್ವ ಸಮಾಜಗಳಲ್ಲಿ ಸಮಾನವಾಗಿ ಕಾಣುವ,ಮನೋಭಾವನೆ ರೂಡಿಸಿಕೊಳ್ಳ ಬೇಕು, ಆದರೆ ಮಂಜುನಾಥ್ ತಾಳಮಕ್ಕಿ ಎನ್ನುವ ಅವಿವೇಕಿ ದಲಿತ ವಿರೋಧಿ ಮಾಧ್ಯಮಕ್ಷೇತ್ರಕ್ಕೆ ನಾಲಯಕ್ ವ್ಯಕ್ತಿಯಾಗಿದ್ದು ಕೋಮುವಾದಿ ಮನಸ್ಥಿತಿ ಹೊಂದಿದ್ದು, ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ಸಮಯ ಮಂಜುನಾಥ್ ಮೇಲೆ ಹಲ್ಲೇ ಮಾಡುವ ಮೂಲಕ ತನ್ನ ಜಾತಿಮನಸ್ಥಿತಿ ತೋರ್ಪಡಿಸಿದ್ದು.ಸರ್ಕಾರ ಕೂಡಲೇ ಗುಂಡಾಕಾಯ್ದೆಅಡಿಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಡಿ.ಎಸ್ಎಸ್ ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ ಮಾಧ್ಯಮಕ್ಷೇತ್ರ ಪವಿತ್ರವಾದ ಕ್ಷೇತ್ರ, ಸಮಾಜದ ಶೋಷಿತ ಸಮುದಾಯಗಳು,ಬಡವ.ದೀನದಲಿತರ ಬಗ್ಗೆ ಕಾಳಜಿಯಿಂದ ಕೆಲಸ ಮಾಡಬೇಕು,ಆದರೆ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕಾದ ವರದಿಗಾರ ಅವಿವೇಕದಿಂದ ವರ್ತನೆ ಮಾಡಿರುವುದು ಖಂಡನೀಯವಾಗಿದೆ.ಮಂಜುನಾಥ್ ತಾಳಮಕ್ಕಿ ಎನ್ನುವ ವ್ಯಕ್ತಿ ಕೋಮುವಾದಿ ಸಂಘಟನೆಗಳೊಂದಿಗೆ ತೊಡಗಿಕೊಂಡು ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು ಹಲವಾರು ಭಾರೀ ದಲಿತರು ಅಲ್ಪಸಂಖ್ಯಾರತ ಮೇಲೆ ಪ್ರಚೋದನೆಗಳನ್ನ ಮಾಡಿದ್ದು,ಇಂತಹ ವ್ಯಕ್ತಿಯಮೇಲೆ ಗೃಹ ಸಚಿವರು ಹೆಚ್ಚಿನ ತನಿಖೆಗೆ ಒಳಪಡಿಸಬೇಕು.ಗುಂಡಾಕಾಯ್ದೆ ದಾಖಲು ಮಾಡಬೇಕು ಇಂತಹ ಕೋಮುವಾದಿಗಳನ್ನ ಆರಂಭದಲ್ಲೇ ಮಟ್ಟಹಾಕದಿದ್ದರೆ ಸಮಾಜಘಾತುಕ ಶಕ್ತಿಗಳಾಗಿ ಸಮಾಜ ಹಾಗೂ ದೇಶಕ್ಕೆ ಮಾರಕವಾಗುತ್ತಾರೆ.ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಡಿ.ಎಸ್ ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಕೆ ಕುಮಾರ್ ಸಮಯ ಮಂಜುನಾಥ್ ಮೇಲಿನ ಹಲ್ಲೇ ಪ್ರಕರಣ ವಿಶೇಷ ತನಿಖೆಗೆ ಒಳಪಡಿಸಬೇಕು.ಪಬ್ಲಿಕ್ ಟಿ.ವಿ ಮುಖ್ಯಸ್ಥರು ಮಂಜುನಾಥ್ ತಾಳಮಕ್ಕಿಯನ್ನ ಕೂಡಲೇ ವಜಾಗೊಳಿಸಬೇಕು,ಈ ವ್ಯಕ್ತಿ ಈ ಹಿಂದೆಯೂ ದಲಿತ ಸಂಘಟನೆಗಳು ಹಾಗೂ ದಲಿತರ ಪ್ರತಿಭಟನೆಗಳನ್ನ ವರದಿ ಮಾಡದೇ ಜಾತಿವಾದಿ ಮನಸ್ಥಿತಿ ಪ್ರದರ್ಶನ ಮಾಡಿದ್ದಾನೆ.ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರುಗಳಾದ.
ಎಸ್ ಎಸ್ ಕೆ ಅಧ್ಯಕ್ಷ ಮತಿಘಟ್ಟಶಿವಕುಮಾರ್ ಡಿ.ಎಸ್ಎಸ್ ಸಂಚಾಲಕ ಜಕ್ಕನಹಳ್ಳಿ ಮೋಹನ್.ಮುಖಂಡರಾದ ಹರೀಶ್ ಯಗಚೀಕಟ್ಟೆ.ಸತೀಶ್ ಮಾರನಗೆರೆ.ತಾಲೂಕು ಅಧ್ಯಕ್ಷ.
ಹರಚನಹಳ್ಳಿ ಮಂಜುನಾಥ್ .
ಅಲ್ಪಸಂಖ್ಯಾತರ ಘಟಕದ ಪರ್ವೇಜ್.ಇರ್ಫಾನ್ .ಮಹಿಳಾ ಸಂಚಾಲಕಿ ಕವಿತಾ ಮಹೇಶ್. ಸೀಮಾ. ಆನಂದ್
ಆದಿನಾಯಕನಹಳ್ಳಿ.
ಹರಚನಹಳ್ಳಿ.
ಕಿರಣ್ ರಾಜ್ .ಡಿ.ಆರ್ ಬಸವರಾಜು.ಕಾರ್ಮಿಕ ಮುಖಂಡ ಹೊನ್ನಪ್ಪ ಗ್ಯಾರಘಟ್ಟ.ಗ್ರಾ.ಪಂ ಅಧ್ಯಕ್ಷ‌ಉದಯ್ ಕುಮಾರ್ ಕೊಪ್ಪ. ಕುಮಾರ್.ಬಸವರಾಜು ಗಾಂಧಿನಗರ .ರಮೇಶ್ ಮಾರನಗೆರೆ.ವೆಂಕಟೇಶ್ ಕರಡಾಳು. ಮೈಲಾರಪ್ಪ ಮುಂತ್ತಾದವರು ಉಪಸ್ಥಿತರಿದರು.


ವರದಿ ಮಂಜು ಗುರುಗದಹಳ್ಳಿ

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.