If we follow the path of Bhimavad, Bhimapat and Bhima, we will not face any difficulties – C. Chandrashekhar.

ಕೊಪ್ಪಳ : ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಪ್ರಯುಕ್ತ ನಗರದ ಅಶೋಕ್ ಸರ್ಕಲ್ ಹತ್ತಿರ ಇರುವ ಸಾಹಿತ್ಯ ಭವನದಲ್ಲಿ ಬಿ.ತಿರುಪತಿ ಶಿವನಗುತ್ತಿ ಅವರ ಎಂದೂ ಮುಳುಗದ ಸೂರ್ಯ ಎನ್ನುವ ಕವನ ಸಂಕಲನದ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಪೀಪಲ್ಸ್ ಎಜುಕೇಶನ್ ಸೊಸೈಟಿ (ರಿ)ಕೊಪ್ಪಳ. ಸಿಂಚನ ಜನ ಸೇವಾ ಟ್ರಸ್ಟ್ (ರಿ) ಕೊಪ್ಪಳ. ಚಿನ್ಮಯ್ ಪ್ರಕಾಶನ ಕೊಪ್ಪಳ ಇವರ ಸಯುತ್ತಾ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಅವರು ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗದೇ ಇಲ್ಲಿನ ಸಾಕಷ್ಟು ಜನರಿಗೆ ಸುಖಾಸುಮ್ಮನೆ ತೊಂದರೆ ಕಿರುಕುಳ ನಿಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಜಿಲ್ಲಾ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ ಎಂದು ತಿಳಿಸಿದರು. ನಾನು ನೋಡಿದಾಹಾಗೆ ಇಲ್ಲಿಯವರೆಗೂ ದೌರ್ಜನ್ಯ ವಿರೋಧಿ ಚಟುವಟಿಕೆಗಳು ಹೆಚ್ಚಾಗಿದ್ದು ವ್ಯವಸ್ಥಿತವಾಗಿ ಈ ಮುಗ್ಧ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬೇಕು. ಜಿಲ್ಲೆ, ತಾಲೂಕಿನಲ್ಲಿರುವ ವಕೀಲರುಗಳು ತುಳಿತಕ್ಕೆ ಒಳಗಾದ ಜನರಿಗೆ ಉಚಿತ ಕಾನೂನು ನೆರವು ಸಲಹೆಗಳನ್ನು ನೀಡಬೇಕು. ಆ ಜನರ ಮೇಲೆ ಕೇಸ್ ದಾಖಲಿಸಿದಿನಿಂದ ಮುಗಿಯೂವರೆಗೂ ಅವರಿಗೆ ಸಹಯಸ್ತ ಚಾಚಬೇಕು ಎಂದು ಸಲಹೆ ನೀಡಿದರು.ಬಿ,ತಿರುಪತಿ ಶಿವನಗುತ್ತಿ ರಚಿಸಿದ ಎಂದೂ ಮುಳುಗದ ಸೂರ್ಯ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಪ್ರೊ. ಎಚ್.ಟಿ.ಪೋತೆ ನಿರ್ದೇಶಕರು ಕನ್ನಡ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ, ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆಯನ್ನು ಕೃಷ್ಣ ಎಂ ಇಟ್ಟಂಗಿ ಸಮಾಜಸೇವಕರು ಮತ್ತು ಸಂಚಾಲಕರು ಚಲವಾದಿ ಜಾಗೃತಿ ವೇದಿಕೆ ಕೊಪ್ಪಳ, ಪುಸ್ತಕ ಪರಿಚಯವನ್ನು ಡಾ. ಜಾಜಿ ದೇವೇಂದ್ರಪ್ಪ ಸದಸ್ಯರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಇವರು ನೀಡಿದರು. ಶ್ರೀ ಅಭಿ ಒಕ್ಕಲಿಗ ಹೋರಾಟಗಾರರು ಸಾಹಿತಿಗಳು ಚಲನಚಿತ್ರ ನಿರ್ದೇಶಕರು ಮುಂದಾಳು ನಾವು ದ್ರಾವಿಡ ಕನ್ನಡಿಗರು ಚಳುವಳಿ ಮಂಡ್ಯ ಇವರು ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಎಂ ಬೆಲ್ಲಾದ್ ಅಧ್ಯಕ್ಷರು ಚಲವಾದಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳ, ಮುತ್ತುರಾಜ್ ಕುಷ್ಟಗಿ ನಗರಸಭಾ ಸದಸ್ಯರು ಕೊಪ್ಪಳ, ಮಂಜುನಾಥ್ ಡೊಳ್ಳಿನ ಜಂಟಿ ನಿರ್ದೇಶಕರು ವಾರ್ತಾ ಇಲಾಖೆ ಬೆಂಗಳೂರು, ಸೋಮಶೇಖರ್ ಬಣ್ಣದವಣಿ ಸಿಂಡಿಕೇಟ್ ಸದಸ್ಯರು ಕನ್ನಡ ವಿಶ್ವವಿದ್ಯಾಲಯ ಹಂಪಿ, ಚಾಮರಾಜ ಸವಡಿ ಹಿರಿಯ ಪತ್ರಕರ್ತರು, ಕೊಪ್ಪಳ, ಸುರೇಂದ್ರ ಆರ್ ಕಂಬಾಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ, ಡಿ.ಎಂ ಬಡಿಗೇರ ಸಂಘಟಕರು ಹಾಗೂ ಪ್ರಕಾಶಕರು ಬೆರಗು ಪ್ರಕಾಶನ ಕೊಪ್ಪಳ, ಟಿಎಸ್ ಶಂಕರಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ, ಮಂಜುನಾಥ್ ಮ್ಯಾಗಳಮನಿ ಜಿಲ್ಲಾಧ್ಯಕ್ಷರು ಎಸ್ ಸಿ ಎಸ್ ಟಿ ನೌಕರರ ಸಂಘ ಕೊಪ್ಪಳ, ವೇಣುಗೋಪಾಲ ಲೆಕ್ಕಾಧಿಕಾರಿಗಳು ಕರ್ನಾಟಕ ರಾಜ್ಯ ಸಹಕಾರ ಮಂಡ ಮಹಾಮಂಡಳಿ ಬೆಂಗಳೂರು, ಗುಡದಪ್ಪ ಹಡಪಾದ್ ಅಧ್ಯಕ್ಷರು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ, ಹಾಗೂ ಗಂಗಾವತಿಯ ಹಿರೇಜನಕಲ್ಲ ಚಲವಾದಿ ಸಮಾಜದ ಮುಖಂಡರುಗಳು ಹಾಗೂ ಜೈ ಭೀಮ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು, ಸದಸ್ಯರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Kalyanasiri Kannada News Live 24×7 | News Karnataka
