Breaking News

ಪರೀಕ್ಷಾಕಾರ್ಯ-ಮೌಲ್ಯಮಾಪನ ಬಹಿಷ್ಕಾರಕ್ಕೆನಿರ್ಧಾರಪ್ರಾಂಶುಪಾಲರ ಮೂಲಕ ಕುಲಪತಿಗಳಿಗೆ ಮನವಿ

Decision to boycott examination work-evaluation Appeal to the Vice Chancellor through the Principal

ಜಾಹೀರಾತು
Screenshot 2025 05 26 19 38 00 57 E307a3f9df9f380ebaf106e1dc980bb6


ಕೊಪ್ಪಳ: ಕೊಪ್ಪಳ ವಿಶ್ವ ವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಪರೀಕ್ಷೆಗೆ ಸಂಬಂಧಿಸಿದಂತೆ ಾಂತರಿಕ, ಬಾಹ್ಯ ಮೇಲ್ವಿಚಾರಕರಾಗಿ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆ ಮತ್ತು ಸ್ಕ್ವಾಡ್ ಟೀಮ್‍ನಲ್ಲಿ ಅತಿಥಿ ಉಪನ್ಯಾಸಕರನ್ನು ಪರಿಗಣಿಸುವಂತೆ ಕಳೆದ ಶೈಕ್ಷಣಿಕ ಸಾಲಿನಲ್ಲೇ ಮನವಿ ನೀಡಿದರೂ ಕೊಪ್ಪಳ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ಕುರಿತು ಅಸಡ್ಡೆ ಧೋರಣೆ ತಾಳುತ್ತಿದೆ ಎಂದು ಆರೋಪಿಸಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈಚೆಗೆ ಕಾಲೇಜಿನಲ್ಲಿ ನಡೆದ ಅತಿಥಿ ಉಪನ್ಯಾಸಕರ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಡಿಎ.ಚ್.ನಾಯಕರಿಗೆ ಈ ವಿಷಯ ತಿಳಿಸಿದಾಗ ನಿಮ್ಮ ಬೇಡಿಕೆಗಳನ್ನು ಸಲ್ಲಿಸಿದರೆ ವಿವಿಗೆ ಕಳಿಸುವುದಾಗಿ ಭರವಸೆ ನೀಡಿದರು. ಜೂನ್ 2 ರಿಂದ ಆರಂಭಗೊಳ್ಳಲಿರುವ ಕೊಪ್ಪಳ ವಿವಿಯ ಪರೀಕ್ಷೆಗಳ ಕೊಠಡಿ ಮೇಲ್ವಿಚಾರಕರಾಗಿಯೂ ಕಾರ್ಯ ನಿರ್ವಹಿಸದೇ ಪರೀಕ್ಷೆಯ ಈ ಕಾರ್ಯದಿಂದ ದೂರ ಉಳಿದು ಮೌಲ್ಯಮಾಪನ ಕಾರ್ಯವನ್ನೂ ಬಹಿಷದ್ಕರಿಸುವುದಾಗಿ ಸೋಮವಾರ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರಾಂಶುಪಾಲರ ಮೂಲಕ ಕೊಪ್ಪಳ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಿಂದಲೂ ವಿವಿಧ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ವಿಶ್ವವಿದ್ಯಾಲಯಗಳ ಬಿಒಇ, ಸ್ಕ್ವಾಡ್ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸಿದ್ದೇವೆ. ಈಗಲೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಈ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಕಳೆದ 2023-24ನೇ ಸಾಲಿನಲ್ಲಿ ಈ ಕುರಿತು ಮನವಿ ಸಲ್ಲಿಸಿದಾಗ್ಯೂ ಕೊಪ್ಪಳ ವಿಶ್ವವಿದ್ಯಾಲಯ ಜಿಲ್ಲೆಯ ಅತಿಥಿ ಉಪನ್ಯಾಸಕರ ಮೇಲೆ ವಿಶ್ವಾಸವಿಲ್ಲ ಎನ್ನುವ ಧೋರಣೆ ತಾಳಿರುವುದು ನಮಗೆ ಅತ್ಯಂತ ನೋವು ತಂದಿದೆ. ಲೋಪಗಳಾದರೆ ಯಾರು ಜವಾಬ್ದಾರಿ? ಎಂದು ಪ್ರಶ್ನಿಸುವ ವಿಶ್ವವಿದ್ಯಾಲಯಕ್ಕೆ ಪಾಠ-ಪ್ರವಚನಗಳಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದವರು ಯಾರು ಎಂಬುದನ್ನು ಅರಿತುಕೊಳ್ಳುವ ಸಮಯವೂ ಇಲ್ಲದಿರುವುದು ವಿಪರ್ಯಾಸ. ಆದ್ದರಿಂದ ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು 2024-25ನೇ ಸಾಲಿನ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಅತಿಥಿ ಉಪನ್ಯಾಸಕರನ್ನು ಬಿಒಇ, ಸ್ಕ್ವಾಡ್ ಸೇರಿದಂತೆ ಪರೀಕ್ಷೆಯ ಎಲ್ಲ ಹಂತಗಳ ವಿವಿಧ ಕಾರ್ಯಗಳಲ್ಲಿ ಪರಿಗಣಿಸುವಂತೆ ಅವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಜ್ಞಾನೇಶ್ವರ ಪತ್ತಾರ, ಗೋಣಿಬಸಪ್ಪ.ಎಚ್., ಬಸವರಾಜ ಕರುಗಲ್, ಡಾ.ಪ್ರಕಾಶ ಬಳ್ಳಾರಿ, ಎಂ.ಶಿವಣ್ಣ. ಡಾ.ತುಕಾರಾಂ ನಾಯಕ್, ಮಾರುತಿ, ಡಾ.ಶಿವಬಸಪ್ಪ ಮಸ್ಕಿ, ವಾಸುದೇವ ಬುರ್ಲಿ ಸೇರಿದಂತೆ ಅನೇಕರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.