Breaking News

ಕಾಂಗ್ರೆಸ್ ಮುಖಂಡರ ಮೇಲೆ ಆರೋಪ ಸತ್ಯಕ್ಕೆ ದೂರವಾದದ್ದು,,!- ಈರಪ್ಪ ಹಿರೇಮನಿ,,

The allegations against Congress leaders are far from the truth! – Eerappa Hiremani

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಿರೂರು : ಗ್ರಾಪಂ ನಿವೇಶನ ಹಂಚಿಕೆ ನ್ಯಾಯ ಸಮ್ಮತವಾಗಿದೆ : ಈರಪ್ಪ ಹಿರೇಮನಿ,,

ವರದಿ : ಪಂಚಯ್ಯ ಹಿರೇಮಠ.


ಕಲ್ಯಾಣಸಿರಿ ವಾರ್ತೆ ಕೊಪ್ಪಳ.


ಕುಕನೂರು : ಶಿರೂರು ಗ್ರಾಮ ಪಂಚಾಯತಿ
ವ್ಯಾಪ್ತಿಯ ಚೆಂಡೂರ ಗ್ರಾಮದ ನಿವೇಶನ ಹಂಚಿಕೆಯಲ್ಲಿ ಕಾಂಗ್ರೆಸ್ ಮುಖಂಡ ಹನುಮಂತ ಗೌಡರ ಚೆಂಡೂರ್ ಹಾಗೂ ಪಿಡಿಒ ಮತ್ತು ಅಧ್ಯಕ್ಷರಮೇಲೆ ಕಲ್ಯಾಣ ಸಿರಿ ವೆಬ್ ನಿವ್ಸ್ ನಲ್ಲಿ ಮಾಡಿರುವ ಆರೋಪ ಸತ್ಯಕ್ಕೆ ದೂರ ವಾಗಿದೆ ಎಂದು ಈರಪ್ಪ ಹಿರೇಮನಿ ಹೇಳಿದರು.

ಅವರು ರವಿವಾರದಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶನಿವಾರದಂದು ಚೆಂಡೂರನ ಕೇಲವೊಂದಿಷ್ಟು ಜನ ಶಿರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಂಡೂರನಲ್ಲಿ ಆಶ್ರಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯಲ್ಲಿ ಪ್ರಭಾವಿಗಳ ಕುಮ್ಮಕ್ಕಿನಿಂದ ತಾರತಮ್ಯವೆಸಗಿದ್ದಾರೆ ಹಾಗೂ ಅಧ್ಯಕ್ಷೆ ಹಣ ಪಡೆದು ನಿವೇಶನ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ಸಾಕ್ಷಿ ಪುರಾವೆ ಒದಗಿಸಿ ಮಾತನಾಡಬೇಕು ಇದರಲ್ಲಿ ಯಾವುದೇ ಹುರುಳಿಲ್ಲಾ ಎಂದು ಈರಪ್ಪ ಹಿರೇಮನಿ ಸ್ಪಷ್ಟವಾಗಿ ಉತ್ತರಿಸಿದರು.

ನಂತರ ಚೆಂಡೂರ ಗ್ರಾಮದ ಹಿರಿಯ ಮುಖಂಡ ದೇವಪ್ಪ ಕುರಿ ಮಾತನಾಡಿ ನಿನ್ನೆ ಪಟ್ಟದಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಲವೊಂದಿಷ್ಟು ಜನ ಆರೋಪ ಮಾಡಿದ್ದು ಒಂದು ಕುಟುಂಬಕ್ಕೆ ಎರಡೆರಡು ನಿವೇಶನ ಕೇಳುತಿದ್ದು, ಹಾಗೇ ಕೊಡಲು ಬರುವುದಿಲ್ಲಾ ಎಂದು ಹೇಳಿದ್ದಕ್ಕೆ ತಮಗೆ ತಿಳಿದಂತೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಧ್ಯಕ್ಷರು, ಪಿಡಿಒ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಕೋಟಾ ಪ್ರಕಾರ ಪ್ರತಿಯೊಬ್ಬರಿಗೂ ನಿವೇಶನ ಹಂಚಿಕೆ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನರಿಗೆ, ಮಹಿಳೆಯರಿಗೆ, ನಿವೇಶನ ರಹಿತರಿಗೆ ಇತರರಿಗೆ ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ ಎಂದು ನಿವೇಶನ ಹಂಚಿಕೆ ಪ್ರತಿಯನ್ನು ನೀಡಿದರು.

ನಂತರ ಗ್ರಾಮ ಪಂಚಾಯತಿ ಸದಸ್ಯ ಶಂಕ್ರಪ್ಪ ಕುರಿ ಮಾತನಾಡಿ ಶಿರೂರು ಗ್ರಾಮ ಪಂಚಾಯತಿಯಲ್ಲಿ ಯಾವುದೇ ಗ್ರಾಮ ಸಭೆ ಇದ್ದರು ಪ್ರತಿ ಗ್ರಾಮ ಸಭೆಯನ್ನು ಎರಡು, ಮೂರು ವರ್ಷದಿಂದ ಅಲ್ಲಿಯೇ ಮಾಡುತ್ತಾ ಬಂದಿದ್ದೇವೆ, ಇಷ್ಟು ವರ್ಷ ಎಲ್ಲಾ ಗ್ರಾಮ ಸಭೆಗೆಗಳು ಅಲ್ಲಿಯೇ ನಡೆದರು ಸುಮ್ಮನಿದ್ದರು.

ಈಗ ತಾವು ಹೇಳಿದಂತೆ ಒಂದೇ ಕುಟುಂಬದವರಿಗೆ ಎರಡು ಮೂರು ನಿವೇಶನ ನೀಡದಿದ್ದಕ್ಕೆ ಕ್ಯಾತೆ ತೆಗೆದು ಮುಖಂಡರ ಹಾಗೂ ಪಿಡಿಒ, ಅಧ್ಯಕ್ಷರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ.

ಶಾಸಕರ ಅಣತಿಯಂತೆ ಹನುಮಂತಗೌಡರು ಯಾವಾಗಲೂ ಸಮಾಜ ಚಿಂತನೆ ಹೊಂದಿದವರು, ಅವರು ನಮ್ಮ ಗ್ರಾಮಕ್ಕೆ ಒಳಿತನ್ನೆ ಮಾಡುತ್ತಾ ಬಂದಿದ್ದು ಅವರ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ ಜ್ಯೋತಿ, ಗುಡದಪ್ಪ ನಿಂಗಾಪೂರ, ಮಲ್ಲಪ್ಪ ಜ್ಯೋತಿ, ಲಕ್ಷ್ಮಪ್ಪ ತಳವಾರ, ಯಲ್ಲಪ್ಪ ಬಂಡಿಹಾಳ, ಹನುಮಪ್ಪ ಜ್ಯೋತಿ, ಈರಪ್ಪ ನಿಂಗಾಪೂರ, ಮುತ್ತಪ್ಪ ಜ್ಯೋತಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *