Breaking News

ಪೂಜ್ಯಪಂಚಾಚಾರ್ಯರುವೀರಶೈವಜಂಗಮರೊ,ಬೇಡಜಂಗಮರೊ? ಬೇಡ ಜಂಗಮ” ಕ್ಕಾಗಿ 2002 ರಲ್ಲಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಪತ್ರ

Pujya Panchacharya Veerashaiva Jangam or Beda Jangam? Demand letter to the Central Government in 2002 for “Beda Jangam”

ಜಾಹೀರಾತು
IMG 20250217 WA0231


ಮಹನೀಯರೇ, ಪೂಜ್ಯ ಪಂಚಾಚಾರ್ಯರು ” ಬೇಡ ಜಂಗಮ” ಕ್ಕಾಗಿ 2002 ರಲ್ಲಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಪತ್ರ ಬರೆದಿದ್ದು ವಿಷಾದನೀಯ ಹಾಗೂ ನಿಂದನೀಯ. ಬೇಡ ಜಂಗಮ ಅಂದರೆ, ಬೇಟ್ಟೆ ಆಡುವ ಜಂಗಮ, ಅಂದರೆ ಬೇಡರು, ಅವರು ಬೇಡರ ಕಣ್ಣಪ್ಪ ವಂಶಜರು, ಭಿಕ್ಷೆ ಬೇಡುವ ಜಂಗಮ ಅಲ್ಲ. ಪರಿಶಿಷ್ಠ ಜಾತಿ ಎಂದರೆ ಸಮಾಜದಿಂದ ಬಹಿಸ್ಕೃತರು, ಅಸ್ಪೃಶ್ಯರು. ಆದರೆ ಜಂಗಮರು ಸಮಾಜದಲ್ಲಿ ಅತಿ ಗೌರವಿಸುವ ವ್ಯಕ್ತಿಗಳು,ಪೂಜ್ಯರು ಹೌದು, ಇವರು ಅಸ್ಪೃಶ್ಯರು ಅಲ್ಲ, ಭಕ್ತರು ಇವರ ಪಾದ ಪೂಜೆ ಮಾಡುತ್ತಾರೆ,ಇವರು ಸಮಾಜಕ್ಕೆ ಒಳ್ಳೆಯದು ಬೋಧಿಸುವವರು,ಭಕ್ತರಿಗೆ ಆಶೀರ್ವದಿಸುವವರು . ಜಗದ್ಗುರುಗಳು ಯಾಕೆ ಈ ತಮ್ಮ ಜನಾಂಗಕ್ಕೆ ಅವಮಾನ ಮಾಡುವ ತರಹ ನಡೆದುಕೊಂಡಿದ್ದಾರೆ ಅರ್ಥವಾಗುತ್ತಿಲ್ಲ? ಜಗದ್ಗುರುಗಳು ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವವರು, ಇವರಿಗೆ ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳ ಗೌರವಕಿಂತ ಹೆಚ್ಚು ಸಮಾಜ ಗೌರವಿಸುತ್ತದೆ. ಆ ಗೌರವ ಅವರು ಕಾಯ್ದಿಟ್ಟುಕೊಳ್ಳಬೇಕು. ಈ ತರಹ ತಮ್ಮ ಸಮಾಜದ ಓಲೈಕೆಗೆ ಇಂತಹ ಕೆಟ್ಟ ನಿರ್ಣಯ ತೆಗೆದುಕೊಂಡು ಪರಿಶಿಷ್ಠ ಜಾತಿಯಲ್ಲಿರುವ ದಲಿತರಿಗೆ ಅನ್ಯಾಯ ಮಾಡುವದು ದುರಂತ. ಸಮಾಜ ನಿಮಗೆ ನಿಂದಿಸುವಕಿಂತ ಮೊದಲು ಸುಧಾರಿಸಿಕೊಳ್ಳುವದು ಒಳೆಯದು.

ಶತ ಶತಮಾನಗಳಿಂದ ಜಂಗಮರು ಸಮಾಜದ ಸೇವೆ ಯಾವುದೇ ಆಶೆ ಆಕಾಂಕ್ಷೆ ಇಲ್ಲದೆ ಮಾಡುತ್ತ ಬಂದಿದೆ. ಸಮಾಜದಲ್ಲಿರುವ ಕಡು ಬಡವರಿಂದ ಆಗರ್ಭ ಶ್ರೀಮಂತರ ಹಾಗೂ ಹುಲ್ಲಿನ ಮನೆಯಲ್ಲಿ ನೇಲಿಸುವ ಲಿಂಗಾಯತರಿಂದ ಮಹಲನಲ್ಲಿ ನೇಲಿಸುವ ಲಿಂಗಾಯತರ ಮನೆಯಲ್ಲಿ ಹುಟ್ಟುವ ಮಕ್ಕಳಿಗೆ ಲಿಂಗದಿಕ್ಷೆ ಕೊಡುವದು,ನಾಮಕರಣ ಮಾಡುವದು, ಮದುವೆ ಮಾಡುವುದು ಮತ್ತು ಇನ್ನುಳಿದ ಎಲ್ಲ ಸಂಭ್ರಮದ ಕ್ರಿಯಕ್ರಮಗಳಿಗೆ ಜಂಗಮರೆ ಸೇವೆ ಅತಿ ಅಮೂಲ್ಯ. ಮತ್ತೆ ಮನುಷನ ಕೊನೆಯ ಗಳಿಗೆಯಲ್ಲಿ ಮರಣವಸ್ಥೆಯಲ್ಲಿ ವಿಭೂತಿ ಧಾರಣ ಮಾಡುವದು,ಮರಣ ಹೊಂದಿದ ಮೇಲೆ ಅವರ ಶೇವ ಸಂಸ್ಕಾರ ಮಾಡುವದು ಕೂಡ ಜಂಗಮರೆ ಮಾಡುತ್ತಾರೆ. ಇದಕ್ಕೆ ಜಂಗಮರು ದಕ್ಷಣಕ್ಕಾಗಿ ಯಾವುದೇ ಬೇಡಿಕೆ ಇಡುವುದಿಲ್ಲ,ಒಂದು ರೂಪಾಯಿ ಇಂದ ನೂರು ರುಪಯಿವರೆಗೆ ಎಷ್ಟ ಕೊಟ್ಟೂರು ಸ್ವೀಕರಿಸುತ್ತಾರೆ, ಯಾವುದೇ ಒತ್ತಾಯ ಮಾಡುವುದಿಲ್ಲ,ಇದು ಅವರ ಉಧಾರ ಸೇವೆಯ ಪ್ರತೀಕ.
ಕೆಲವು ಲಿಂಗಾಯತ ವೀರಕ್ತ ಮಠಾಧಿಪತಿಗಳು, ಲಿಂಗಾಯತ ಸಮಾಜದ ಪೂಜ್ಯರು, ಅಧಿಪತಿಗಳು ಜಂಗಮರಿಗೆ ಜಾತಿ ಜಂಗಮರಿಗೆ ಖಾರವಾಗಿ ನಿಂದಿಸುತ್ತಾರೆ, ಕೆಲವರು ಕೀಳು ಮಟ್ಟದ ಶಬ್ದ ಉಪಯೋಗಿಸಿ ಮನ ನೋಯಿಸುತ್ತಾರೆ, ಕೆಲವರು ಜಂಗಮರು ಲಿಂಗಾಯತ ಶತ್ರು ಎನ್ನುತ್ತಾರೆ. ಸಮಾಜದ ಸಂಸ್ಕೃತಿ ಉಳಿಸಲು ಶ್ರಮ ಪಡುವ ಸಮಾಜಕ್ಕೆ ಈ ರೀತಿ ನಿಂದಿಸುವುದು ಎಷ್ಟು ಉಚಿತ? ಇವರು ಲಿಂಗಾಯತರಲ್ಲಿ ನಾವೇ ಬಸವ ಭಕ್ತರು ಎಂದು ಸಿದ್ಧಿಸಲು ಸಮಾಜದಲ್ಲಿ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಜಂಗಮರು ಬಸವಣ್ಣನ ಅಚ್ಚು ಮೆಚ್ಚಿನ ಬಾಂಧವರು,ಜಂಗಮರು ಬಸವ ತತ್ವ ಪ್ರಚಾರಕರು,ಅಂದಿನ ಪ್ರಚಾರಕರು ಮುಂದೆ ಬಂದು ಕಾಯಕದಂತೆ ಜಂಗಮ ಜಾತಿ ನಿರ್ಮಾಣ ಆಯಿತು, ಇದ್ದಕೆ ಜಂಗಮರು ಕಾರಣೀಭೂತರಲ್ಲ ಅದಕ್ಕೆ ಸಮಾಜ ಜವಾಬ್ದಾರ. ಇಂದಿಗೂ ಕೂಡ ಜಂಗಮರು ಕಾಂತಿ ಭಿಕ್ಷೆ ಬೇಡುವಾಗ ಬಸವಾದಿ ಶರಣರ ವಚನ ಹೇಳುವ ಮೂಲಕ ಭಕ್ತರಿಗೆ ಬಸವ ತತ್ವ ಹೇಳುತ್ತಿದ್ದರೆ. ಇದು ಕೇವಲ ಭಿಕ್ಷೆ ಅಲ್ಲದೆ ಬಸವ ತತ್ವ ಪ್ರಚಾರ ಆಗಿತ್ತು, ಅದಕ್ಕೆ ಬಸವಣ್ಣನವರು “ಜಂಗಮ ಮನೆಯ ಬಾಗಿಲಿಗೆ ಬಂದರೆ ಉದಾಸೀನ ಮಾಡಬಾರದು” ಎಂದು ಸಮಾಜಕ್ಕೆ ಭಕ್ತರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನು ಸನ್ಮಾನ್ಯ ಶ್ರೀ ಜಾಮದರ ಅವರು ತಮ್ಮ ಪುಸ್ತಕ ” ಲಿಂಗಾಯತ ಸ್ವತಂತ್ರ ಧರ್ಮ” ದಲ್ಲಿ ಉಲ್ಲೇಖಿಸಿದ್ದಾರೆ.ಒಂದು ವೇಳೆ ಜಂಗಮರು ತಮ್ಮ ಸೇವೆ ನಿಲ್ಲಿಸಿದ್ದರೆ ಭಕ್ತರಿಗೆ ಎಲ್ಲ ಸಂಸ್ಕೃತಿ,ಕ್ರಿಯಕ್ರಮ ಮಾಡಿಸುವವರು ಯಾರು?ದೊಡ್ಡ ದೊಡ್ಡ ವೇದಿಕೆಯಲ್ಲಿ ಭಾಷಣ ಮಾಡುವವವರು ಅಥವಾ ದೊಡ್ಡ ದೊಡ್ಡ ಪತ್ರಿಕೆಯಲ್ಲಿ ಜಂಗಮ ವಿರುದ್ಧ ಪ್ರಚಾರ ಮಾಡುವವರು ಚಿಂತಿಸಬೇಕು. ಒಂದು ವೇಳೆ ಜಂಗಮರು ಬಸವ ತತ್ವ ವಿಧಿವಿಧಾನ ಗೊತ್ತಿರದೆ ವೈದಿಕ ಸಂಸ್ಕೃತಿ ಕ್ರಿಯಕ್ರಮ ಮಾಡುತ್ತಿದ್ದರೆ ಅವರಿಗೆ ತಿಳಿಸಿ ಹೇಳಿ, ಅವರಿಗೆ ಬಸವ ತತ್ವ ಪದ್ಧತಿ ಕಲಿಸಬೇಕೆ ವಿನಹಃ ನಿಂದಿಸುವದರಿಂದ ಸಮಾಜಕ್ಕೆ ಒಳ್ಳೆಯದು ಆಗಲು ಸಾಧ್ಯವಿಲ್ಲ.
ನಿಜವಾಗಿಯೂ ಜಂಗಮ ಸಮಾಜ ನಿರ್ಲಿಕ್ಷಿತವಾದ ಸಮಾಜ, ಇಲ್ಲಿಯವರೆಗೆ ಸರ್ಕಾರ ಜಂಗಮ ಜಾತಿಯನ್ನು ಯಾವುದೇ ಜಾತಿ ಪಂಗಡದಲ್ಲಿ ಗುರುತಿಸಿಲ್ಲ, ಜಂಗಮರು ಅಲ್ಪಸಂಖ್ಯಾತರು, ಆರ್ಥಿಕವಾಗಿ ಅತಿ ಹಿಂದುಳಿದವರು ಹಾಗೂ ಕಡುಬಡವರು, ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುವ ಅನಿಷ್ಟ ಪದ್ಧತಿ ಅಳವಡಿಸಿ ಕೊಂಡು ಬಂದಿದ್ದಾರೆ, ಒಂದು ಹೊತ್ತಿನ ಊಟಕ್ಕಾಗಿ ಬೇರೆಯವರ ಬಾಗಿಲು ಕಾಯುತ್ತಾರೆ. ಆದರೆ ಸಮಾಜ ಹಾಗೂ ಸರ್ಕಾರ ಆ ಜಂಗಮ ಸಮಾಜದ ಸ್ಥಿತಿ ಗತಿ ಬಗ್ಗೆ ಬೆಳಕು ಹರಿಸಿಲ್ಲ, ಇದು ನಮ್ಮ ಸರ್ಕಾರಗಳ ಬಗೇ ಇರುವ ಕಾಳಜಿ ಬಗೇ ಬೆಳಕು ಚೆಲ್ಲುತ್ತದೆ.

ಜಗದ್ಗುರುಗಳು,ಮಠಾಧಿಪತಿಗಳು ಮತ್ತು ರಾಜಕೀಯ ನಾಯಕರು ಜಂಗಮರ ಕ್ಷೆಮಾಭಿವ್ರುದ್ಧಿಗಾಗಿ ನಿರ್ಣಯ ತೆಗೆದು ಕೊಳ್ಳಬೇಕೆ ವಿನಹಃ, ಪರಿಶಿಷ್ಠ ಜಾತಿಯವರ ದಲಿತರ ಸೌಲಭ್ಯ ಕಸಿದುಕೊಳಲು ಪ್ರಚೋದಿಸಿ,ಸಮಾಜದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಬಾರದು.
ಜಂಗಮ ಸಮಾಜದವರು ಹಲವಾರು ದಶಕದಿಂದ ಬೇಡ ಜಂಗಮ ಪರಿಶಿಷ್ಠ ಜಾತಿಗಾಗಿ ಹೋರಾಟ ಮಾಡುತ್ತಿದ್ದಾರೆ,ಅದು ಯಶಸ್ಸು ಕಂಡಿಲ್ಲ, ಆದರಿಂದ ಪರಿಶಿಷ್ಠ ಜಾತಿ ಬಿಟ್ಟು ಅಲ್ಪ ಸಂಖ್ಯಾತ ೧ ಎ ಕ್ಕಾಗಿ ಹೊರಾಟ ಮಾಡಬೇಕು, ಅದರಿಂದ ಸಮಾಜಕ್ಕೂ ಒಳ್ಳೆಯದು ,ಜಂಗಮರಿಗೆ ಒಳ್ಳೆಯದು. ಇದು ನನ್ನ ಕಳಕಳಿಯ ಮನವಿ.

Screenshot 2025 05 25 11 15 58 08 40deb401b9ffe8e1df2f1cc5ba480b12

ಶ್ರೀಕಾಂತ ಸ್ವಾಮಿ ಬೀದರ, ಸಂಚಾಲಕರು, ಕರ್ನಾಟಕ ರಾಜ್ಯ ಲಿಂಗಾಯತ ಸಮನ್ವಯ ಸಮಿತಿ. ಮೊಬೈಲ್ ಸಂಖ್ಯೆ 9740880666. Email ID shrikant_swamy@yahoo.com
ದಿನಾಂಕ 14/08/2017

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.