Breaking News

ದೇವಿನಗರದಲ್ಲಿ ಕಟ್ಟೆ, ತಳಬಾಳ ಬಂಧುಗಳಿಂದ ಉಚಿತ ಸಾಮೂಹಿಕ ವಿವಾಹ

Free mass marriage by relatives of Katte and Talabala in Devinagar

ಜಾಹೀರಾತು
Screenshot 2025 05 25 17 50 30 02 6012fa4d4ddec268fc5c7112cbb265e7

ಮಹಿಳೆ ಕುಟುಂಬದ ಆಧಾರಸ್ತಂಭಅವರಿಂದಲೇ ಯಶಸ್ವಿಬದುಕು:ಸಿದ್ದರಾಮಾನಂದಪುರಿಸ್ವಾಮೀಜಿ

ಗಂಗಾವತಿ: ಮಹಿಳೆ ಕುಟುಂಬದ ಆಧಾರ ಸ್ತಂಭವಾಗಿದ್ದು ಅವರು ಬಿಗಿಯಿಂದ ಇದ್ದರೆ ಬದುಕು ಯಶಸ್ವಿಯಾಗುತ್ತದೆ. ದೇವರು, ಗುರುಗಳಿಗೆ ಆದ್ಯತೆ, ಗೌರವ ಹಾಗೂ ಪೂಜನೀಯ ಭಾವನೆ ಮಹಿಳೆಯರಲ್ಲಿ ಹೆಚ್ಚು ಎಂದು ರೇವಣಸಿದ್ದೇಶ್ವರ ಮಹಾಸಂಸ್ಥಾನ ಕನಕಗುರುಪೀಠದ ಕಲಬುರ್ಗಿ ವಿಭಾಗದ ಪೀಠಾಧಿಪತಿ ಪೂಜ್ಯ ಸಿದ್ದರಾಮಾನಂದ ಪುರಿ ಸ್ವಾಮೀಜಿ ಹೇಳಿದರು.
ಅವರು ಸಮೀಪದ ದೇವಿನಗರದಲ್ಲಿ ಕಟ್ಟೆ ಹಾಗೂ ತಳಬಾಳ ಕುಟುಂಬದವರು ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗಳಿಗೆ ಆಶೀರ್ವಾದಿಸಿ ಮಾತನಾಡಿದರು.
ಭಾರತೀಯರು ತಾವು ದುಡಿದು ದೇವರು ಹಾಗೂ ಗುರುಗಳು ಕೊಟ್ಟಿದ್ದಾರೆಂದು ತಮ್ಮ ಕೈಲಾದ ಮಟ್ಟಿಗ ಕಾಣಿಕೆ ಸಮರ್ಪಿಸಿ ಧನ್ಯತಾ ಭಾವ ಮೆರೆಯುವ ಮೂಲಕ ಅತ್ಯುತ್ತಮ ಗುರು ಕಾಣಿಕೆ ನೀಡುವ ಪರಂಪರೆ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಸಂಪ್ರದಾಯದ ಮೂಲಕ ದೇವರು ಮತ್ತು ಗುರುಗಳನ್ನು ಸದಾ ಸ್ಮರಣೆ ಮಾಡಲಾಗುತ್ತದೆ. ಮನೆಯಲ್ಲಿ ಮಹಿಳೆ ಆಧಾರ ಸ್ತಂಭವಾಗಿದ್ದು ಮಹಿಳೆಯ ಬಾಯಿ ಬಿಗಿ ಇದ್ದರೆ ಆ ಸಂಸಾರ ಸುಖ ನೆಮ್ಮದಿಯಿಂದ ಇರುತ್ತದೆ. ಇತ್ತೀಚೆಗೆ ಯುವಕರು, ಪುರುಷರು ಕುಡಿತ ಸೇರಿ ವಿವಿಧ ದುಶ್ಚಟಗಳಿಗೆ ಬಲಿಯಾಗಿ ಇಡೀ ಸಂಸಾರವನ್ನು ಹಾಳುವ ಮಾಡುತ್ತಿರುವ ಉದಾಹರಣೆಗಳು ಹೆಚ್ಚಾಗಿದ್ದು ಸಾಮೂಹಿಕ ವಿವಾಹಗಳಲ್ಲಿ ಸತಿಪತಿಗಳಾಗುವವರು ಪೂಜ್ಯರ, ಹಿರಿಯರ ಆಶೀರ್ವಾದಿಂದ ಉತ್ತಮ ಬದುಕು ನಡೆಸಿ ಮಕ್ಕಳನ್ನು ಓದಿಸುವ ಮೂಲಕ ಅತ್ಯುತ್ತಮ ನಾಗರೀಕರನ್ನಾಗಿ ಮಾಡಲಿ ಎಂದರು.
ಸಂಸದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ಒಂದು ಮಾಡಲು ಸಾವಿರಾರು ರೂ.ಗಳು ಖರ್ಚಾಗುತ್ತವೆ, ಇಂತಹ ಸಂಸದರ್ಭದಲ್ಲಿ ಕಟ್ಟೆ ಮತ್ತು ತಳಬಾಳ ಬಂಧುಗಳು ತಮ್ಮ ಕುಟುಂಬಸ್ಥರ ಮದುವೆ ಸಂದರ್ಭದಲ್ಲಿ ಉಚಿತ ಸಾಮೂಹಿಕ ಮದುವೆಗಳನ್ನು ಮಾಡಿದ್ದು ಶ್ಲಾಘನೀಯವಾಗಿದೆ. ಮದುವೆಗಾಗಿ ಸಾಲ ಮಾಡಿ ಶ್ರೀಮಂತರ ಮನೆಯಲ್ಲಿ ಕೂಲಿ ದುಡಿಯುವ ಕಾಲ ಒಂದಿತ್ತು. ಆದ್ದರಿಂದ ಬಡವರು, ಆರ್ಥಿಕವಾಗಿ ಶಕ್ತಿ ಇಲ್ಲದವರು ಸಾಲ ಮಾಡಿ ಆಡಂಬರದ ಮದುವೆ ಮಾಡಿಕೊಳ್ಳದೇ ಸಾಮೂಹಿಕ ಮದುವೆಗಳಲ್ಲಿ ಲಗ್ನವಾಗಿ ಹಣ ಉಳಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಸಿದ್ದರಾಮಾನಂದ ಪುರಿ ಸ್ವಾಮೀಜಿಯವರಿಗೆ ತುಲಾಭಾರವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಬ್ಬಾಳ ನಾಗಭೂಷಣ ಸ್ವಾಮೀಜಿ, ಬಸಾಪಟ್ಟಣದ ನಂಜುಂಡೇಶ್ವರ ಹಾಲುಮತ ಮಠದ ಸಿದ್ದಯ್ಯ, ಸಿದ್ದರಾಮಯ್ಯ ಸ್ವಾಮಿಗಳು,ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ,ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಪತ್ರಕರ್ತ ಕೆ.ನಿಂಗಜ್ಜ, ಬಿಜೆಪಿ ಮುಖಂಡ ಸಿಂಗನಾಳ ವಿರೂಪಾಕ್ಷಪ್ಪ, ಕಾಂಗ್ರೆಸ್ ಧುರೀಣೆ ಲಲಿತಾರಾಣಿ ಶ್ರೀರಂಗದೇವರಾಯಲು, ಉದ್ಯಮಿ ನೆಕ್ಕಂಟಿ ಸೂರಿಬಾಬು, ಹಾಲುಮತ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ರಾಯಚೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗವೇಣಿ ಪಾಟೀಲ್,ಗ್ರಾ.ಪಂ.ಅಧ್ಯಕ್ಷೆ ಸುನೀತಾ,ಹಾಲುಮತ ಕುರುಬ ಸಮಾಜದ ಕೆ.ನಾಗೇಶಪ್ಪ, ಶರಣೇಗೌಡ, ಮೋರಿ ದುರುಗಪ್ಪ, ನೀಲಕಂಠಪ್ಪ, ಶಿವರಾಜ್ ಕಟ್ಟೆ, ಮಂಜುನಾಥ ದೇವರಮನೆ,ಅಶೋಕಗೌಡ, ವಿರೂಪಾಕ್ಷಪ್ಪ ರೇಷ್ಮೆ, ರುದ್ರೇಶ ಡ್ಯಾಗಿ,ಜನಗಂಡೆಪ್ಪ,ಕೆ.ವೆಂಕಟೇಶ, ಅಡ್ಡಿಶಾಮಣ್ಣ,ಬಿ,ಫಕೀರಯ್ಯ,ಟಿ.ನಾಗಪ್ಪ,ಬೆಣಕಲ್ ಬೆಟ್ಟಪ್ಪ, ಹತ್ತಿಮರದ ಶಿವಪ್ಪ ನಾಯಕ, ಮುದುಕಪ್ಪ ಮುಸ್ಟೂರು,ಕೆ.ತಿರುಕಪ್ಪ,ಬಿ.ಶರಣಪ್ಪ ಹಾಗೂ ಅಮರಭಗತ್ ಸಿಂಗ ನಗರ, ಹೊಸಳ್ಳಿ ಹಾಗೂ ದೇವಿನಗರದ ಗ್ರಾಮಸ್ಥರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.