ಪ್ರಭಾವಿಗಳ ಕುಮ್ಮಕ್ಕಿನಿಂದ ನಿವೇಶನ ಹಂಚಿಕೆಯಲ್ಲಿ ತಾರತಮ್ಯ,,! ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವಂತೆ ಆಗ್ರಹ,
Oppression with the help of Congress leader Hanumantha Gowda Chendur.

ಪ್ರಭಾವಿಗಳ ಕುಮ್ಮಕ್ಕಿನಿಂದ ನಿವೇಶನ ಹಂಚಿಕೆಯಲ್ಲಿ ತಾರತಮ್ಯ,,! ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವಂತೆ ಆಗ್ರಹ,
ಕುಕನೂರು : ಶಿರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಂಡೂರ ಗ್ರಾಮದ ನಿವೇಶನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಿ ಪ್ರಭಾವಿ ವ್ಯಕ್ತಿಗಳ ಮಾತಿನಂತೆ ಹಣ ನೀಡಿದವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಚಂಡೂರ ಗ್ರಾಮದ ರವೀಂದ್ರ ಗೌಡ ಪಾಟೀಲ್ ಆರೋಪಿಸಿದರು.
ಶನಿವಾರದಂದು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಂಡೂರ ಗ್ರಾಮಸ್ಥರಿಗೆ ಆಶ್ರಯ ನಿವೇಶನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಪಿಡಿಒ ಹಾಗೂ ಅಧ್ಯಕ್ಷರು ತಮ್ಮ ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಚಂಡೂರ ಗ್ರಾಮಸ್ಥ ನಿಂಗಪ್ಪ ಕುರಿ ಮಾತನಾಡಿ ಶಿರೂರು ಗ್ರಾಮ ಪಂಚಾಯತಿ ಪಿಡಿಒ ಅವರು ಚೆಂಡೂರ ಗ್ರಾಮದಲ್ಲಿ ಮಾಡಬೇಕಾದ ಗ್ರಾಮಸಭೆಯನ್ನು ಶಿರೂರು ಪಂಚಾಯತಿಯಲ್ಲಿ ನಡೆಸಿ,ನಿಯಮ ಬಾಹಿರವಾಗಿ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ ಎಂದರು.
ಈ ರೀತಿಯಾಗಿ ನಿಯಮಬಾಹಿರು ನಿವೇಶನ ಹಂಚಿಕೆ ಮಾಡಿದ್ದನ್ನು ಪಿಡಿಒ ಅವರಿಗೆ ಪ್ರಶ್ನಿಸಿದರೇ ದಬ್ಬಾಳಿಕೆ ನಡೆಸುತ್ತಾರೆ ಎಂದು ಆರೋಪಿಸಿದರು.
ಈ ಕುರಿತು ಮೇಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲಾ ಎಂದರು. ಕೂಡಲೇ ಮರುಳಿ ಗ್ರಾಮ ಸಭೆ ನಡೆಸಿ ಅರ್ಹ ಆಶ್ರಯ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಚೆಂಡೂರ ಗ್ರಾಮದ ನಿವಾಸಿ ದ್ಯಾಮವ್ವ ಹಂದ್ರಾಳ ಎನ್ನುವರು ಶಿರೂರು ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಜ್ಯೋತಿಯವರಿಗೆ ನಿವೇಶನ ನೀಡಲು 20ಸಾವಿರ ಬೇಡಿಕೆ ಇಟ್ಟಿದ್ದರು, 20 ಸಾವಿರ ಹಣವನ್ನು ನೀಡಿರುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕೂಡಲೇ ಶಿರೂರು ಗ್ರಾಮ ಪಂಚಾಯತಿ ಪಿಡಿಒ ಹಾಗೂ ಅಧ್ಯಕ್ಷರ ಮೇಲೆ ಶಾಸಕ ಬಸವರಾಜ ರಾಯರಡ್ಡಿವರು ಸೂಕ್ತ ಕ್ರಮ ಕೈಗೊಂಡು ನಿವೇಶನ ರಹಿತ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಹನುಮಂತಗೌಡ ಚೆಂಡೂರ ಇವರ ಕುಮ್ಮಕ್ಕಿನಿಂದ ಶಿರೂರು ಪಿಡಿಒ ಹಾಗೂ ಅಧ್ಯಕ್ಷೆ ತಮಗೆ ಹಣ ನೀಡಿದವರಿಗೆ ಮಾತ್ರ ನಿವೇಶನ ಹಂಚಿಕೆ ಮಾಡುತ್ತಿದ್ದು, ಉಳಿದ
ಫಲಾನುಭವಿಗಳು ಕೇಳಲು ಹೋದರೆ ದಬ್ಬಾಳಿಕೆ ಮಾಡುತ್ತಿದ್ದಾರೆ.
ಮತ್ತೊಮ್ಮೆ ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಚಂಡೂರು ಗ್ರಾಮಸ್ಥರ ಆಗ್ರಹಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಲಕ್ಷ್ಮವ್ವ ಕುರಿ, ಶರಣಪ್ಪ ಅರಕೇರಿ, ಬಸಯ್ಯ ಸಂಕಿನ, ಹನುಮಪ್ಪ ಜ್ಯೋತಿ, ದ್ಯಾಮವ್ವ ಹಂದ್ರಾಳ, ಮುತ್ತವ್ವ ತಳಬಾಳ, ಮುದಿಯಪ್ಪ ತಳವಾರ, ಮಾರುತಿ ತಳಬಾಳ, ಪ್ರಕಾಶ ಸಂಕಿನ, ಮಂಜಯ್ಯ ಸಂಕಿನ, ಶಿವಲಿಂಗಯ್ಯ ಸಂಕಿನ, ಸುಭಾಸ ಜ್ಯೋತಿ ಇನ್ನಿತರರು ಇದ್ದರು.
ವರದಿ : ಪಂಚಯ್ಯ ಹಿರೇಮಠ ಕೊಪ್ಪಳ.