No ambassador needed to promote Mysore Sandal Soap: Channabasava Jakeen

ಗಂಗಾವತಿ: ರಾಜ್ಯದ ಮೈಸೂರ ಸ್ಯಾಂಡಲ್ ಸೋಪು ನಾಡಿನ ಶ್ರೀಗಂಧದ ಸೋಪು ಎಂಬ ಬ್ರಾö್ಯಂಡ್‌ನೊAದಿಗೆ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದು, ಈ ಸೋಪು ಕಂಪನಿಗೆ ಯಾವುದೆ ರಾಯಭಾರಿಯ ಅವಶ್ಯಕತೆಯಿಲ್ಲ ಎಂದು ಕನ್ನಡಸೇನೆ ಸಂಘಟನೆಯ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್ ತಿಳಿಸಿದರು.
ಇತ್ತೀಚೆಗೆ ಕರ್ನಾಟಕ ಸರ್ಕಾರ ನಾಡಿನ ಹೆಸರಾಂತ ಮೈಸೂರು ಸ್ಯಾಂಡಲ್ ಸೋಪು ಕಂಪನಿಗೆ ರಾಯಭಾರಿಯನ್ನಾಗಿ ನೆರೆರಾಜ್ಯ ಆಂದ್ರಪ್ರದೇಶದ ತಮನ್ನಾ ಅವರನ್ನು ನೇಮಕ ಮಾಡುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿರುತ್ತಾರೆ. ನಮ್ಮ ನಾಡಿನಲ್ಲಿಯೇ ಹೆಸರಾಂತ ಕಲಾವಿದರು ಇರುವಾಗ ಅವರನ್ನು ಬಿಟ್ಟು ನೆರೆರಾಜ್ಯದ ನಟಿಯನ್ನು ೨ ವರ್ಷಕ್ಕೆ ೬ ಕೋಟಿ ರೂಪಾಯಿಗೆ ರಾಯಭಾರಿಯನ್ನಾಗಿ ಮಾಡಿರುವುದು ತೀವ್ರ ಖಂಡನೀಯ. ನಮ್ಮ ಮೈಸೂರು ಸ್ಯಾಂಡಲ್ ಸೋಪು ಇವತ್ತು ನಿನ್ನೆಯದಲ್ಲ. ಹತ್ತಾರು ವರ್ಷಗಳ ಹಿಂದಿನ ಕಂಪನಿಯಾಗಿ ದೇಶದಾದದ್ಯಂತ್ರ ಮಾತ್ರವಲ್ಲದೇ ಹೊರದೇಶಗಳಿಗೂ ರಫ್ತಾಗುವ ಸೋಪು ಕಂಪನಿಯಾಗಿದ್ದು, ಹಾಗೆ ನೊಡಿದರೆ, ಈ ಸೋಪು ಕಂಪನಿಗೆ ರಾಯಭಾರಿಯ ಅವಶ್ಯತೆಯೇ ಇರುವುದಿಲ್ಲ. ಆದರೂ ಸರ್ಕಾರ ಪರಭಾಷಾ ನಟಿಯನ್ನು ರಾಯಭಾರಿಯನ್ನಾಡಿ ಮಾಡಿರುವುದು ಕನ್ನಡಿಗರನ್ನು ಅಪಮಾನಿಸಿದೆ. ಕಾರಣ ಕೂಡಲೇ ರಾಜ್ಯ ಸರ್ಕಾರ ತಮನ್ನಾ ಅವರಿಗೆ ನೀಡಿದ ರಾಯಭಾರಿಯನ್ನು ರದ್ದುಪಡಿಸಿ ಆದೇಶ ಹೊರಡಿಸಬೇಕೆಂದು ಸರ್ಕಾರಕ್ಕೆ ಕಟ್ಟೆಚ್ಚರ ನೀಡಿದ್ದಾರೆ.