A pack of stray dogs attacked and killed a 6-year-old child.

ವರದಿ ಮಂಜು ಗುರುಗದಹಳ್ಳಿ
ತಿಪಟೂರು: ಬೀದಿಅಂಗಳದಲ್ಲಿ
ಆಟವಾಡುತ್ತಿದ್ದ 6ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಮಗುವಿನ ತಲೆ ಹಾಗೂ ಹೊಟ್ಟೆಯನ್ನ ತಿಂದು ಹಾಕಿರುವ ಕರುಣಾಜನಕಾ ಘಟನೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿದೆ.
ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯನವರ ಮಗಳು 6ವರ್ಷದ ನವ್ಯ ಬೀದಿನಾಯಿಗಳ ದಾಳಿಗೊಳಗಾದ ನತದೃಷ್ಟೆ ಹೆಣ್ಣು ಮಗಳು
ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಅಯ್ಯನ ಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದ ನವ್ಯಾಳ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿನಡೆಸಿವೆ.
ದಾಳಿನಡೆಸಿದ ನಾಯಿಗಳು ಮಗುವಿನ ತಲೆಯ ಚರ್ಮವನ್ನ ಸಂಪೂರ್ಣವಾಗಿ ಕಿತ್ತುಹಾಕಿದ್ದು .ಹೊಟ್ಟೆ ಭಾಗವನ್ನೆಲ್ಲ ಕಿತ್ತು ಮಗುವಿನ ಮುಖ ಕೈ.ಕಾಲು ಹಾಗೂ ತೊಡೆಭಾಗವನ್ನ ಕಿತ್ತು ಹಾಕಿವೆ.
ರಕ್ತದ ಮಡುವಿನಲ್ಲಿ ಕೀರಾಡುತ್ತಿದ್ದ ಮಗುವನ್ನ ಕಂಡ ಸಾರ್ವಜನಿಕರು. ಬೀದಿ ನಾಯಿಗಳ ಗುಂಪನ್ನು ಓಡಿಸಿ
ಮಗುವನ್ನ ತಕ್ಷಣ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಹೆಣ್ಣು ಮಗು ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಚಿಕಿತ್ಸೆ ಫಲಕಾರಿಯಾಗಿದೆ ಮಗು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನಪ್ಪಿದೆ
ಸಾರ್ವಜನಿಕರು ಮಾತನಾಡಿ.ದಿನೇ ದಿನೇ ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ ಬೀದಿನಾಯಿಗಳ ಹಾವಳಿಯ ಕಡಿವಾಣಕ್ಕೆ ತಾಲ್ಲೂಕು ಆಡಳಿತ ನಗರ ಸಭೆ
ನಿರ್ಲಕ್ಷ ವಹಿಸದೆ ಬೀದಿ ನಾಯಿಗಳಿಗೆ ಕಡಿವಾಣ ಹಾಕಿ ಈ ರೀತಿಯ ದುರ್ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ವರದಿ ಮಂಜು ಗುರುಗದಹಳ್ಳಿ