Unions should be the link between the government and the workers.

ವರದಿ : ಬಂಗಾರಪ್ಪ .ಸಿ.
ಹನೂರು : ಒಡೆಯರ್ ಪಾಳ್ಯವೆ ಒಂದು ಸುಂದರ ರಮಣಿಯವಾದ ಪ್ರೇಕ್ಷಣಿಯ ಸ್ಥಳ ಹಾಗೂ ಮಲೆನಾಡಿನಂತಿದೆ ಇಲ್ಲಿ ಇಂತಹ ಸಂಘಟನೆಯನ್ನು ಮಾಡಿರುವುದು ಬಹಳ ಸಂತೋಷವಾಗಿದೆ ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು.
ಹನೂರು ತಾಲ್ಲೋಕಿನ ಒಡೆಯರಪಾಳ್ಯದ ಶ್ರೀ ಗುರುಮಲ್ಲೇಶ್ವರ ಸಭಾ ಭವನದಲ್ಲಿ ಉದ್ಘಾಟನೆ ಗೋಂಡ
ಕರ್ನಾಟಕ ರಾಜ್ಯ ಭಾರತಮಾತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ರಿ )
ಉದ್ಘಾಟನೆ ಮತ್ತು ನಾಮಫಲಕ ಆನಾವರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಮಿಕ ವರ್ಗಕ್ಕೆ ಸಿದ್ದರಾಜು ಪ್ರಾರಂಬಿಸಿದ ಸಂಘವು ಇಂದು ಬೃಹತಕಾರದಲ್ಲಿ ಬೆಳೆಸಿದ್ದಾರೆ ,ಸರ್ಕಾರವು ನಿಮಗೆ ಸಹಾಯ ಮಾಡಲು ಅನೇಕ ಯೋಜನೆಯನ್ನು ನೀಡುತ್ತದೆ ಹನೂರು ತಾಲ್ಲೂಕಿನಲ್ಲಿ ಸುಮಾರ್ ನಾಲ್ಕು ಸಾವಿರದ ಐದು ನೂರು ಸದಸ್ಯರು ನೊಂದಾಯಿತ ರಾಗಿದ್ದಾರೆ ಇಂತಹ ಸಂದರ್ಭಗಳಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಅಧಿಕಾರಿಗಳು ಪ್ರಚಾರ ಕಾರ್ಯವನ್ನು ಮಾಡಬೇಕು , ಇದು ಶ್ರಮಿಕವರ್ಗವಾಗಿದೆ ಎಲ್ಲಾರಿಗೂ ಮಾಹಿತಿ ತಲುಪಿ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳಲು ಸಹಕಾರಿಯಾಗಬೇಕು , ಪಿಂಚಣಿ ನೀಡುವಂತಹ ಕಾರ್ಯವನ್ನು ಸಹ ವಯಸ್ಸಾದಂತಹವರಿಗೆ ಮಾಡಿಸಬೇಕು , ಈ ಸ್ಥಳವು ನಿಮಗೆ ಆರ್ಥಿಕವಾಗಿ ಸದೃಡವಾಗಲು ಉತ್ತಮ ಸ್ಥಳವಾಗಿದೆ ,ಕೃಷಿಗೆ ಇಲ್ಲಿ ಉತ್ತಮ ವಾತಾವರಣ ನಿರ್ಮಿಸ ಬೇಕಾಗುತ್ತದೆ , ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ರಸ್ತೆಗಳ ಕಾಮಗಾರಿಗಳನ್ನು ಮಾಡಲು ಮುಂದಾಗತ್ತೇನೆ , ನೀರಿನ ಅಭಾವವಾಗದಂತೆ ಮಾಡಲಾಗುತ್ತದೆ , ಪ್ರತಿಯೊಂದು ಎಲ್ಲಾರಿಗೂ ಸಮಾನ ರೀತಿಯಲ್ಲಿ ತಲುಪಲು ಸಂಘವು ಸಹಕಾರಿಯಾಗಬೇಕು ಮುಂದಿನ ದಿನಗಳಲ್ಲಿ ನನ್ನಿಂದ ನಿಮಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಮಾನಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ರಾಜ್ಯದಲ್ಲೆ ಕಟ್ಟಡ ಕಾರ್ಮಿಕರು ಮೊದಲಿಗೆ ಅತಿ ನಿರ್ಲಕ್ಷ್ಯ ಒಳಗಾದ ಸಂಘಟನೆಯಾಗಿತ್ತು ಆದರೆ ಇಂದು ಬಹಳ ಎತ್ತರಕ್ಕೆ ಬೆಳೆದಿದ್ದಾರೆ , ಮೂಲ ಕಟ್ಟಡ ನಿರ್ಮಾಣ ಮಾಡಬೇಕಾದರೆ ಸರ್ಕಾರವು ಒಂದು ಪರ್ಶೆಂಟ್ ಹಣವನ್ನು ಸೆಸ್ ಕಟ್ಟಿಸಿಕೊಳ್ಳಲಾಗುತ್ತದೆ ಅದರಿಂದ ನಿಮಗೆ ಉಪಯೋಗ ವಾಗುತ್ತದೆ . ಸರ್ಕಾರದಿಂದ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸಂಗ್ರಹ ಮಾಡಲಾಗುತ್ತಿದೆ . ಪ್ರತಿಯೊಬ್ಬರೂ ಸರ್ಕಾರದಿಂದ ನೀಡುವ ಗುರುತಿನ ಚೀಟಿಯನ್ನು ಪಡೆದುಕೊಂಡು ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಪಡೆದು ಕೊಳ್ಳಬೇಕು ಸಂಘ ನಿಮಗೆ ನೀಡುತ್ತದೆ ಎಂದು ತಿಳಿಸಿದರು.
ರಾಜ್ಯದ್ಯಕ್ಷರಾದಸಿದ್ದರಾಜು ಮಾತನಾಡಿ1996 ರಲ್ಲಿ ಪ್ರಾರಂಬಿಸಿದ ಈ ಕಟ್ಟಡ ಕಾರ್ಮಿಕರ ಸಂಘ ಪ್ರಾರಂಭಿಸಲಾಯಿತು ಕಾರಣ ನಾನು ಕಂಡ ಒಂದು ಸಾವಿನ ಘಟನೆಯಿಂದ ನೊಂದು ಈ ಸಂಘಟನೆ ಪ್ರಾರಂಭಿಸಿದ್ದೆನೆ ರಾಜ್ಯವ್ಯಾಪಿ ಸಂಘವನ್ನು ಉದ್ಘಾಟನೆ ಮಾಡಿದ್ದೆವೆ , ನಾವು ಸರ್ಕಾರ ಮತ್ತು ಕಾರ್ಮಿಕರ ನಡುವಿನ ಕೊಂಡಿಯಾಗಿ ಮಾಡಲು ಕೆಲಸ ಮಾಡಲು ಸದಾ ಸಿದ್ದರಾಗಿದ್ದೆವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಇಲಾಖೆಯಿಂದ ವಿವಿಧ ಸವಲತ್ತುಗಳನ್ನು ಪಲಾನುಭವಿಗಳಿಗೆ ನೀಡಲಾಯಿತು.
ಇದೇ ಸಮಯದಲ್ಲಿ ಸಹಾಯಕ ಕಾರ್ಯ ಅಭಿಯಂತರರು ರಂಗಸ್ವಾಮಿ , ನೂರ್ ಅಹ್ಮದ್ ಮೈಸೂರು , ತಾಲ್ಲೂಕು ಅದ್ಯಕ್ಷರುಗಳಾದ ರಾಜೇಶ್ , ಕಾರ್ಮಿಕ ನಿರೀಕ್ಷಕರಾದ ವಿ ಎಲ್ ಪ್ರಸಾದ್ ಸೇರಿದಂತೆ ಇನ್ನಿತರರು ಹಾಜರಿದ್ದರು.