Breaking News

ದೊಡ್ಡ ಸಂಪಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆಸೂಚಿಸಿದ ಶಾಸಕ ಎಮ್ಆರ್ ಮಂಜುನಾಥ್

MLA MR Manjunath instructed the authorities to allow the large group to enter the temple.

ಜಾಹೀರಾತು


ವರದಿ:ಬಂಗಾರಪ್ಪ .ಸಿ.‌
ಹನೂರು : ರಾಜ್ಯ ಸರ್ಕಾರವು ಕಾಡಂಚಿನ ಪ್ರದೇಶಗಳಲ್ಲಿ
ಆನೆ ಕಂದಕಗಳನ್ನು ನಿರ್ಮಿಸಲು ನೂರ ಎಂಬತ್ತು ಕೋಟಿ ಹಣ ಬಿಡುಗಡೆಯಾಗಿದೆ, ಅದರಲ್ಲಿ ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣವನ್ನು ಸದ್ಬಳಕೆ ಮಾಡಲು ಅಧಿಕಾರಿಗಳಿಗೆ ಶಾಸಕ ಎಮ್ ಆರ್ ಮಂಜುನಾಥ್ ಸೂಚಿಸಿದರು.
ಹನೂರು ತಾಲ್ಲೂಕಿನ ಮಾವತ್ತುರು ಗ್ರಾಮದಲ್ಲಿ ನಡೆದ ರಸ್ತೆಗಳು ಹಾಗೊ ಇನ್ನಿತರ ಸ್ಥಳಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಬೆಳಕು ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಬಳಸಲು ಗುತ್ತಿಗೆದಾರರಿಗೆ ಸೂಚಿಸಿದರು .
ಕುಡಿಯುವ ನೀರಿನ ಸರಬರಾಜು ಮಾಡಲು ಪಂಚಾಯಿತಿಯಿಂದ ಅವಕಾಶ ಮಾಡಿಕೊಡಬೇಕು , ಉತ್ತಮವಾಗಿ ಚರಂಡಿ ಹೂಳೆತ್ತಲು ವ್ಯವಸ್ಥೆಯನ್ನು ಮಾಡಬೇಕು
ಈ ರಸ್ತೆಯಲ್ಲಿ ಮೆಟ್ಲಿಂಗ್ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ
ಗೊಂಬೆಗಲ್ಲು .ನೆಲ್ಲಿಕತ್ರಿ. ಕೆರೆದಿಂಬಗಳಲ್ಲಿ ಇಪ್ಪತ್ತೊಂದು ಕಿಲೋಮೀಟರ್ ದೂರ ಬೆಳಕು ಯೋಜನೆಯನ್ನು ಮಾಡಲು ಅಂದಾಜು ವೆಚ್ಚ ಐದುಕೋಟಿ ರೂಗಳಷ್ಟು ವಿನಿಯೋಗಿಸಲಾಗಿದೆ , ಈ ಯೋಜನೆಯನ್ನು ಸಮರ್ಪಕವಾಗಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು. ಇದೇ ಸಮಯದಲ್ಲಿ ಪಿಜಿ ಪಾಳ್ಯದಲ್ಲಿನ ದೊಡ್ಡಕೆರೆ ಒತ್ತುವರಿ ಸ್ಥಳದಲ್ಲೆ ಹುಕುಂ ನೀಡಿದವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು. ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಹದಿನೈದನೆಯ ಹಣಕಾಸು ಯೋಜನೆಯ ಖರ್ಚುವೆಚ್ಚದ ಬಗ್ಗೆ ಮಾಹಿತಿ ಪಡೆದು ಅಭಿವೃದ್ಧಿ ಮಾಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಹಾಯಕ ಅಭಿಯಂತರರಾದ ರಂಗಸ್ವಾಮಿ ,ಕೆ ಆರ್ ಐಡಿಎಲ್ ಅಭಿಯಂತರರು ಕಾರ್ತಿಕ್ , ಪರಿಶಿಷ್ಟ ವರ್ಗಗಳ ತಾಲ್ಲೂಕು ಅಧಿಕಾರಿಗಳಾದ ರಾಜೇಶ್ ,ಮುಖಂಡರುಗಳಾದ ಮಂಜೇಶ್ ಗೌಡ , ಜಿಯಂ ,ಮಹದೇವಸ್ವಾಮಿ , ಗೋವಿಂದು. ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

About Mallikarjun

Check Also

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಟೈ, ಬೆಲ್ಟ್, ಐಡಿ ಕಾರ್ಡ್, ಪೋಟೊ ಉಚಿತ ವಿತರಣೆ

Free distribution of ties, belts, ID cards, and photographs to government school students with the …

Leave a Reply

Your email address will not be published. Required fields are marked *