Breaking News

ಕೊಳ್ಲೆಗಾಲದಲ್ಲಿ ಸಾರ್ವಜನಿಕರಿಗೆ ಈಸ್ವತ್ತು ನೀಡುವ ನಗರಸಭೆ ಸೇರಿದಂತೆ ಪಟ್ಟಣದ ಯಾವುದೇ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೂ ಈ ಸ್ವತ್ತುಗಳಿಲ್ಲ ಮುಖಂಡ ದಸರತ್ ಆರೋಪ

Leader Dasarath alleged that none of the government office buildings in the town, including the municipal corporation, which provides these assets to the public during the drought, have these assets.

ಜಾಹೀರಾತು


ವರದಿ : ಬಂಗಾರಪ್ಪ .ಸಿ.
ಚಾಮರಾಜನಗರ : ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಡಿ ವೈ ಎಸ್ ಪಿ ಗಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ದೂರು ಸ್ವೀಕಾರ ಸಭೆ ಬುಧವಾರ ಜರುಗಿತು.
ಈ ವೇಳೆ ಗುಂಡಾಲ್ ಜಲಾಶಯ ಅಚ್ಚುಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ದಸರತ್ ಮಾತನಾಡಿ ಟಗರು ಪುರ ಗ್ರಾಮ ಪಂಚಾಯಿತಿಯಿಂದ ಹಿಡಿದು ಮಲೆ ಮಾದೇಶ್ವರ ಬೆಟ್ಟದ ಪೊನ್ನಾಚಿ ವರೆಗಿನ ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ಇಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಈ ಸ್ವತ್ತು ನೀಡಿರುವುದಿಲ್ಲ ಇದರ ಬಗ್ಗೆ ಚಾಮರಾಜನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಿದ್ದೇನೆ. ಈಗಲಾದರೂ ಇದರ ಬಗ್ಗೆ ಗಮನ ಹರಿಸಿ ಗ್ರಾಮ ಠಾಣಾ ಆಧಾರದಲ್ಲಿ ಎಲ್ಲರಿಗೂ ಈ ಸ್ವತ್ತು ನೀಡಬೇಕೆಂದು ತಿಳಿಸಿದ್ದೇನೆ. ಪಟ್ಟಣದ ಡಾ. ಅಂಬೇಡ್ಕರ್ ರಸ್ತೆ ಡಾ. ರಾಜಕುಮಾರ್ ರಸ್ತೆ ಆಗಲಿ ಕರಣ ಮೊದಲು ಎಫ್ ಎಂ ಬಿ ಪ್ರಕಾರ ಸರ್ವೆ ಮಾಡಿ ಬೌಂಡರಿ ಫಿಕ್ಸ್ ಮಾಡಿ ನಂತರ ರಸ್ತೆ ಅಗಲೀಕರಣ ಮಾಡಿದರೆ ಒತ್ತುವರಿ ಮಾಡಿಕೊಂಡು ಡೂಪ್ಲಿಕೇಟ್ ದಾಖಲೆ ಹೊಂದಿರುವ ಕಟ್ಟಡಗಳ ಮಾಲೀಕರಿಗೆ ಕೊಡುವ ಪರಿಹಾರ ಹಣ ಸರ್ಕಾರಕ್ಕೆ ಉಳಿಯುತ್ತದೆ ಸರ್ಕಾರಿ ಜಾಗವು ಸಹ ಉಳಿಯುತ್ತದೆ ಎಂದರು. ಪಟ್ಟಣದ ಪೊಲೀಸ್ ಠಾಣೆ ನ್ಯಾಯಾಧೀಸರ ವಸತಿಗೃಹ ಅರಣ್ಯ ಇಲಾಖೆಯ ಜಾಗವನ್ನು ನಗರ ಸಭೆಯ ಅಧಿಕಾರಿಗಳು ಬೇರೆಯವರಿಗೆ ಖಾತೆ ಮಾಡಿಕೊಟ್ಟಿದ್ದಾರು. ಇದನ್ನು ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡಿ ವಾಪಸ್ ಇಲಾಖೆಗಳ ಹೆಸರಿಗೆ ಆರ್ ಟಿ ಸಿ ಕೂರಿಸಿದ್ದೇನೆ. ಆದರೆ ಅಧಿಕಾರಿಗಳು ತಮ್ಮ ಇಲಾಖೆಯ ಆಸ್ತಿ ವಸಕ್ಕೆ ಪಡೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಸ್ವತ್ತು ಕೊಡುವಲ್ಲಿ ನಗರ ಸಭೆಯ ಅಧಿಕಾರಿ ಗಳು ಬಾರಿ ವಿಳಂಬ ಮತ್ತು ಗೋಲ್ಮಾಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇದೇ ವೇಳೆಯಲ್ಲಿ ಹೊಸ ಹಣಗಳ್ಳಿಯ ಸರ್ಕಾರಿ ನೌಕರ ಮಹೇಶ್ ದೂರ ನೀಡಿ ನಗರಸಭೆಯ ನೌಕರರಾದ ಪ್ರಭಾಕರ್ ಮತ್ತು ರವಿಶಂಕರ್ ನನ್ನಿಂದ 12,000 ಲಂಚ ಪಡೆದಿದ್ದಾರೆ ಆದರೂ ನನ್ನ ಕೆಲಸ ಮಾಡಿ ಕೊಟ್ಟಿಲ್ಲ ಎಂದು ನೇರ ಆರೋಪ ಮಾಡಿದರು. ಆದರೆ ಲೋಕಾಯುಕ್ತರು ಯಾವುದೇ ವಿಚಾರಣೆ ಮಾಡದೇ ಮೌನವಾಗಿ ಕುಳಿತಿದ್ದರು ಅಧಿಕಾರಿಗಳು ಸಹ ಮೌನ ವಹಿಸಿದ್ದರು.
ಎಲ್ಲವನ್ನು ಆಲಿಸಿದ ಡಿವೈಎಸ್ಪಿ ರವರು ಅಧಿಕಾರಿಗಳಿಗೆ ನೋಟಿಸ್ ನೀಡಿ ಮುಂದಿನ ದಿನಗಳು ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಹಾರ ಒದಗಿಸಿ ಕೊಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್ ಸಿಬ್ಬಂದಿ ಕುಮಾರ್ ಶಶಿಕುಮಾರ್ ಆರಾಧ್ಯ ಬಿ ಓ ಮಂಜುಳಾಇಒ ಗುರು ಶಾಂತಪ್ಪ ಸಮಾಜ ಕಲ್ಯಾಣ ಅಧಿಕಾರಿ ಕೇಶವಮೂರ್ತಿ ಪೌರಾಯುಕ್ತ ಪರಶಿವ ತಾಲೂಕು ಅಧಿಕಾರಿಗಳು ಇತರರು ಹಾಜರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.