Breaking News

ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಜೂಜಾಟವನ್ನು ತಡೆಯಲು ಒತ್ತಾಯಿಸಿ ಡಿ.ವೈ.ಎಸ್.ಪಿ ಗೆ ಮನವಿ ಯಲ್ಲಪ್ಪ ಕಟ್ಟಿಮನಿ

Yallappa Kattimani appeals to DySP to stop sand mining, illegal liquor sales, and gambling

ಜಾಹೀರಾತು
Screenshot 2025 05 21 17 09 01 41 6012fa4d4ddec268fc5c7112cbb265e7

ಗಂಗಾವತಿ: ಕನಕಗಿರಿ, ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಾದ್ಯಂತ ಅನಧಿಕೃತ ಮರಳು ಪಾಯಿಂಟ್‌ಗಳು, ಮದ್ಯ ಮಾರಾಟ, ಅಕ್ರಮ ಮರಳು ಪಡಿತರ ಧಾನ್ಯಗಳ ಸಾಗಾಣಿಕೆ, ಜೂಜಾಟಗಳಾದ ಮಟ್ಕಾ, ಇಸ್ಪೀಟ್ ದಂಧೆ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳು ಹೆಗ್ಗಿಲ್ಲದೇ ನಡೆಯುತ್ತಿದ್ದು, ಅವುಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿಯವರ ನೇತೃತ್ವದಲ್ಲಿ ಮೇ-೨೧ ಬುಧವಾರ ಗಂಗಾವತಿ ಪೊಲೀಸ್ ಉಪವಿಭಾಗ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು ಎಂದು ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ನೀಲಪ್ಪ ಡಣಾಪುರ ತಿಳಿಸಿದರು.
ಅವರು ನಗರದ ಶ್ರೀಕೃಷ್ಣದೇವರಾಯ ವೃತ್ತದಿಂದ ಪೊಲಿಸ್ ಠಾಣೆವರೆಗೆ ರ‍್ಯಾಲಿ ನಡೆಸಿ, ಗಂಗಾವತಿ ಪೊಲೀಸ್ ಉಪವಿಭಾಗ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಮಾತನಾಡಿದರು. ಅಕ್ರಮ ಮರಳು ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದ್ದು, ಜೂಜಾಟ, ಚಟುವಟಿಕೆಗಳಿಗೆ ಬಡಕುಟುಂಬಗಳು ಬಲಿಯಾಗಿ ಬೀದಿಪಾಲಾಗುತ್ತಿವೆ. ಪ್ರಮುಖವಾಗಿ ಮೇಲಿನ ಮೂರು ತಾಲ್ಲೂಕುಗಳಲ್ಲಿ ಅನಧಿಕೃತವಾಗಿ ಮರಳು ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ಅದೇರೀತಿ ಜೂಜಾಟಗಳಾದ ಮಟ್ಕಾ, ಇಸ್ಪೀಟ್ ಕ್ಲಬ್‌ಗಳು ಹೆಗ್ಗಿಲ್ಲದೇ ನಡೆಯುತ್ತಿದ್ದು, ಈ ದಂಧೆಯಲ್ಲಿ ಪ್ರಮುಖರು, ಪ್ರಭಾವಿಗಳು ಭಾಗಿಯಾಗಿದ್ದು, ಈ ಎಲ್ಲಾ ಅಕ್ರಮ ದಂಧೆಗಳನ್ನು ತಡೆಯಲು ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಬೇಕಾಗಿದೆ. ಕಾರಣ ಪೊಲೀಸ್ ಇಲಾಖೆ ಒಂದು ವಿಶೇಷವಾದ ಪೊಲೀಸ್ ತಂಡವನ್ನು ರಚಿಸಿ, ತನಿಖೆ ನಡೆಸಿ, ಅಕ್ರಮ ಚಟುವಟಿಕೆಗಳ ತಾಣಗಳ ಮೇಲೆ ದಾಳಿ ಮಾಡಿ, ಅಕ್ರಮ ದಂಧೆಕೋರರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ಈ ಅಕ್ರಮ ದಂಧೆ, ಜೂಜಾಟ ಹಾಗೂ ಚಟುವಟಿಕೆಗಳ ಜೊತೆಗೆ ಸರ್ಕಾರದ ಮಹತ್ವದ ಯೋಜನೆಯಾದ ಅನ್ನಭಾಗ್ಯ ಬಡವರಿಗೆ ನೀಡಲಾಗುವುದು ಪಡಿತರ ಅಕ್ಕಿಯನ್ನು ಹಣದಾಸೆಗೆ ಕೆಲವರು ಶ್ರೀಮಂತರಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿ, ದೊಡ್ಡ ದೊಡ್ಡ ಗೋದಾಮುಗಳಲ್ಲಿ ಸಂಗ್ರಹಿಸಿ, ಬೇರೆ ಬೇರೆ ಜಿಲ್ಲೆ, ರಾಜ್ಯ ಹಾಗೂ ತಾಲ್ಲೂಕುಗಳಿಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡಲಾಗುತ್ತಿದ್ದು, ಪಡಿತರ ಅಕ್ಕಿಗಳಿಂದ ಶ್ರೀಮಂತರು ಹಣ ಗಳಿಸುತ್ತಿದ್ದಾರೆ ಹೊರತು, ಈ ಯೋಜನೆಯಿಂದ ಬಡಕುಟುಂಬಗಳು ವಂಚನೆಗೊಳಗಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೂಡಲೇ ಅಕ್ರಮ ಪಡಿತರ ದಾಸ್ತಾನು ಮಾಡಿ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಗೌರವಾಧ್ಯಕ್ಷ ನರಸಿಂಹಲು ಚಿಂತಲಕುಟ, ಗಂಗಾವತಿ ತಾಲೂಕ ಅಧ್ಯಕ್ಷರಾದ ಸುಮಿತ್ರ, ಪ್ರಧಾನ ಕಾರ್ಯದರ್ಶಿಯಾದ ದೇವದಾಸ್, ಮರಳಿ ಹೋಬಳಿ ಘಟಕದ ಅಧ್ಯಕ್ಷರಾದ ಮರಿಸ್ವಾಮಿ ಹೊಸಕೇರಿ ಸೇರಿದಂತೆ ಇತರ ಪದಾಧಿಕಾರಿಗಳಾದ ಮಂಜುನಾಥ ಬಡಿಗೇರ, ನಾಗಪ್ಪ ಗೋಡಿನಾಳ, ಹುಲಿಗೇಶ ಬುಕನಟ್ಟಿ, ದೇವರಾಜ ಬೂದಗುಂಪ, ಕೃಷ್ಣಪ್ಪ ಸಂಗಾಪುರ, ಕೃಷ್ಣಪ್ಪ ನಾಯಕ, ರಾಘವೇಂದ್ರ ಸಂಗಾಪುರ, ಕರಿಬಸವ ಕುಡಗುಂಟಿ, ಹನುಮಂತ ಮುಳ್ಳೂರು, ರಾಜಾನಂದ, ಸುನೀಲಕುಮಾರ್, ಇಮಾನೇಲು, ರವಿಕುಮಾರ, ಮಾರೆಪ್ಪ, ಹನುಮಂತ, ಪಂಪಾಪತಿ ಮಣ್ಣೂರ್, ಚಿದಾನಂದ ಬರಗೂರು, ಪಾಮಣ್ಣ ಹೊಸಕೇರಿಡಗ್ಗಿ, ಸೋಮನಾಥ ಮುಸ್ಟೂರು, ಹುಸೇನಪ್ಪ ಮುಸ್ಟೂರು, ಲೋಕೇಶ ಕೋಟಯ್ಯಕ್ಯಾಂಪ್, ಹುಲುಗಪ್ಪ ಹೊಸಕೇರಾ ಡಗ್ಗಿ, ಮರಿಸ್ವಾಮಿ ಹೊಸಕೇರಾ ಡಗ್ಗಿ, ಮಾರೆಪ್ಪ ಕೋಟಯ್ಯಕ್ಯಾಂಪ್, ಕುಮಾರ್ ಹೊಸಕೇರಾ ಡಗ್ಗಿ ಮತ್ತಿತರರು ಉಪಸ್ಥಿತರಿದ್ದರು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.