Breaking News

ಹದಗೆಟ್ಟು ಹಳ್ಳ ಹಿಡಿದು ಹಾಳಗಿರುವ ಭಾಗ್ಯನಗರದ ರಸ್ತೆಗಳು : ಶರಣಬಸಪ್ಪ ದಾನಕೈ

The roads of Bhagyanagar are in a state of disrepair, filled with ravines and in ruins: Sharanabasappa Danakai

ಜಾಹೀರಾತು

ಕೊಪ್ಪಳ: ತಾಲೂಕಿನ ಭಾಗ್ಯನಗರದ ರಸ್ತೆಗಳು ಹದೆಗೆಟ್ಟು ಹಳ್ಳ ಹಿಡಿದಿವೆ, ಮಳೆಯಿಂದ ರಸ್ತೆಗಳು ತಗ್ಗು ಗುಂಡಿಗಳಿಂದ ಕೆರೆಗಳಂತೆ ನಿರ್ಮಾಣವಾಗಿವೆ ಮತ್ತು ಕೃಷಿ ಹೊಂಡಗಳಾಗಿ ರಾರಾಜಿಸುತ್ತಿವೆ ಇದರಿಂದ ದ್ವಿ ಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ,ಆಟೋ ಚಾಲಕರಿಗೆ, ಇತರ ವಾಹನ ಸವಾರರು ಇವರಿಗೆ , ರೈತ ವರ್ಗದವರಿಗೆ, ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಸಂಬಂದಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸುಗಮ ರಸ್ತೆಗಳಿಗೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವಾಸುದೇವ ಮೇಟಿ ಬಣದ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಭಾಗ್ಯನಗರದ ತಾಯಮ್ಮ ದೇವಸ್ಥಾನ ಹಾಗು ಸಾಯಿಬಾಬ ಮಂದಿರ ಮುಂದೆ ಇರುವ ರೈಲು ಬ್ರೀಜ್ ಮುಂಭಾಗದಲ್ಕಿ ದೊಡ್ಡದಾದ ಕಂದಕಗಳು ನಿರ್ಮಾಣವಾಗಿವೆ ,ಈ ಮಾರ್ಗವಾಗಿ ವಿವಿಧ ಕಲ್ಯಾಣ ಮಂಟಪಗಳು, ದೇವಸ್ಥಾನಗಳು ಇರುವದರಿಂದ ಜನದಟ್ಟನೆ ಪ್ರಯಾಣ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ, ಹಗಲಿನಲ್ಲಿ ರಸ್ತೆಗಳ ಮೇಲೆ ನೀರು ನಿಂತರೆ ಕಾಣುವುದಿಲ್ಲ ಆದರೆ ರಾತ್ರಿಯಾದರೆ ಮರಣ ಮೃದಂಗ ಸಂಭವಿಸಬಹುದು ಆದಷ್ಟೂ ಬೇಗ ಕಾರ್ಯಪ್ರವೃತರಾಗಬೇಕು ಎಂದು ರೈತ ಮುಖಂಡ ಶರಣಬಸಪ್ಪ ದಾನಕೈ ಒತ್ತಾಯಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.