Breaking News

ಕೊಪ್ಪಳದಲ್ಲಿ   ಮೇ 25 ರಂದು ರಾಜ್ಯಮಟ್ಟದ “ಆರತಕ್ಷತೆ ಕವಿಗೋಷ್ಠಿ”

State-level “Arathakshathe Poet’s Conference” to be held in Koppal on May 25

ಜಾಹೀರಾತು
Screenshot 2025 05 21 19 10 11 23 680d03679600f7af0b4c700c6b270fe7 1

ಕರ್ನಾಟಕ ಕವಿಭೂಷಣ ರಾಜ್ಯ ಪ್ರಶಸ್ತಿ ಪ್ರದಾನ

 ಕೊಪ್ಪಳ : ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ಆರತಕ್ಷತೆ ಕವಿಗೋಷ್ಠಿ ಸಮಾರಂಭವು 2025ರ ಮೇ 25 ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ, ಶ್ರೀ ಮಹಾಂತಯ್ಯನ ಮಠ ಕಲ್ಯಾಣ ಮಂಟಪ, ಲಕ್ಷ್ಮಿ ಶಿವೆ ಟಾಕೀಸ್ ಹಿಂಭಾಗ, ಕೊಪ್ಪಳದಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ ರಮೇಶ ಸುರ್ವೆಯವರ ಜೇಷ್ಠ ಪುತ್ರ, ಸುರ್ವೆ ಪತ್ರಿಕೆ ಸಂಪಾದಕ ಚಿ|| ರಾ|| ಕಿಶನ್ ಸುರ್ವೆ ಮತ್ತು ಚಿ||ಸೌ|| ತೇಜಸ್ವಿ ಅವರ ವಿವಾಹ ಆರತಕ್ಷತೆ ನಿಮಿತ್ಯ, ರಾಜ್ಯಮಟ್ಟದಲ್ಲಿ ಈ ಆರತಕ್ಷತೆ ಕವಿಗೋಷ್ಠಿ ಹಮ್ಮಿಕೊಂಡಿದ್ದು, ವಿವಾಹಕ್ಕೆ ಸಂಭAಧಿಸಿದ ಕವಿತೆ ಅಥವಾ ನಿಮ್ಮಇಷ್ಟದ ಸ್ವರಚಿತ ಕವನಗಳನ್ನು ಓದಬಹುದಾಗಿದೆ.

 ಶ್ರೀಮತಿ ಗಂಗಮ್ಮ ಹಿರೇಮಠ ಸಾಹಿತಿಗಳು, ಉಪನ್ಯಾಸಕರು,  ಇವರು ಕವಿಗೋಷ್ಠಿಯನ್ನು ಉದ್ಘಾಟಿಲಿದ್ದು, ಡಾ. ಭಾಗ್ಯಜ್ಯೋತಿ ಸಹ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು ಕೊಪ್ಪಳ ಇವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಮುಖ್ಯಅತಿಥಿಗಳಾಗಿ ಡಾ. ರಾಜೇಂದ್ರ ಗಡಾದ ಹಿರಿಯ ಸಾಹಿತಿಗಳು ಗದಗ, ಡಾ. ಸಿದ್ಧಲಿಂಗಪ್ಪ ಕೊಟ್ನೇಕಲ್ ಸಾಹಿತಿಗಳು, ಸಂಶೋಧಕರು, ಕೊಪ್ಪಳ, ಶೇಖರಗೌಡ ಮಾಲಿಪಾಟೀಲ್ ಮಾಜಿ ಅಧ್ಯಕ್ಷರು, ಕಸಾಪ, ಕೊಪ್ಪಳ, ರವಿತೇಜ ಅಬ್ಬಿಗೇರಿ ಮಾಜಿ ಅಧ್ಯಕ್ಷರು, ಕಸಾಪ, ಕೊಪ್ಪಳ, ಜಿ.ಎಸ್. ಗೋನಾಳ ರಾಜ್ಯಾಧ್ಯಕ್ಷರು ಸಿರಿ ಗನ್ನಡ ವೇದಿಕೆ ಬೆಂಗಳೂರು, ರಮೇಶ ಸುರ್ವೆ ಹಿರಿಯ ಪತ್ರಕರ್ತರು ಬೆಂಗಳೂರು

 ಕವಿಗೋಷ್ಠಿಯಲ್ಲಿ ಹಿರಿಯ ಕವಿಗಳಾದ ಡಾ. ಮಹಾಂತೇಶ್ ಮಲ್ಲನಗೌಡರ, ರವಿತೇಜ ಅಬ್ಬಿಗೇರಿ , ಡಾ. ರಾಜೇಂದ್ರ ಎಸ್. ಗಡಾದ, ಡಾ. ಸಿದ್ಧಲಿಂಗಪ್ಪ ಕೊಟ್ಬೇಕಲ್, ಜಿ.ಎಸ್. ಗೋನಾಳ, ಟಿ.ಕೆ ಗಂಗಾಧರ ಪತ್ತಾರ, ಬೀರಪ್ಪ ಶಂಭೋಜಿ,  ಸೇರಿ ಮುಂತಾದವರು ಉಪಸ್ಥಿತರಿರುತ್ತಾರೆ. 

 ಕಡ್ಡಾಯವಾಗಿ ಬೆಳಿಗ್ಗೆ 10 ರಿಂದ ಮದ್ಯಾಹ್ನ 2 ಗಂಟೆ ತನಕ ಕವಿಗಳು ಸಭಾಂಗಣದಲ್ಲಿ ಇರಬೇಕು. ಕಾರ್ಯಕ್ರಮದ ಕೊನೆಯಲ್ಲಿ ಕವಿತೆ ವಾಚಿಸಿದ ಪ್ರತಿ ಕವಿಗಳಿಗೆ “ಕರ್ನಾಟಕ ಕವಿಭೂಷಣ ರಾಜ್ಯ ಪ್ರಶಸ್ತಿ” ಹಾಗೂ “ಬಹುಜನರ ಕವಿತೆಗಳು” ಕವನ ಸಂಕಲನವನ್ನು ಕಾಣಿಕೆಯಾಗಿ ನೀಡಲಾಗುವುದು. ಮದ್ಯಹ್ನ 1.30 ರಿಂದ 2.30 ರವರಿಗೆ ಭೋಜನ ವ್ಯವಸ್ಥೆ ಇರುತ್ತದೆ. 

 ಆಸಕ್ತ ಕವಿಗಳು ಭಾಗವಹಿಸುವವರು ತಮ್ಮ ಹೆಸರನ್ನು ಕೆಳಕಂಡ ಪದಾಧಿಕಾರಿಗಳ ವಾಟ್ಸಾಪ್‌ನಲ್ಲಿ ನೋಂದಾಯಿಸಿಕೊಳ್ಳಿ.

 ರುದ್ರಪ್ಪ ಭಂಡಾರಿ ಮೊ: 78159 85585, ಮಹಾಂತೇಶ್ ಮಲ್ಲನಗೌಡರ ಮೊ: 94486 34014, ಶಿವಪ್ರಸಾದ್ ಹಾದಿಮನಿ ಮೊ: 79967 90189, ಡಾ. ಮಹಾಂತೇಶ್ ನೆಲಾಗಣಿ ಮೊ: 99648 11198, ಜಿ.ಎಸ್ ಗೋನಾಳ ಮೊ: 94480 25067 , ಡಾ. ರಾಜೇಂದ್ರ ಗಡಾದ ಮೊ: 99457 01680, ಉಮೇಶ್ ಸುರ್ವೆ ಮೊ: 78920 94599.

 ನಿಮ್ಮ ಹೆಸರನ್ನು ಮೇಲ್ಕಂಡ ವಾಟ್ಸಾಪ್ ನಂಬರ್‌ನಲ್ಲಿ  ಮೇ ೨೪ ರ ಒಳಗೆ ನೊಂದಾಯಿಸಬಹುದು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.