Breaking News

ಹಜರತ್ ಸೈಯದ್ ಷಾ ಖಲೀಲುಲ್ಲಾ ಖಾದ್ರಿ ಆಸ್ತಾನ-ಎ-ಹೈದರಿ ಇವರ ೫೯ನೇ ಉರುಸು-ಎ-ಷರೀಫ್

59th Urs-e-Sharif of Hazrat Syed Shah Khalilullah Qadri Astana-e-Hydari

ಜಾಹೀರಾತು


ಗಂಗಾವತಿ: ನಗರದ ಪೀರಜಾದಾ ಮೊಹಲ್ಲಾದಲ್ಲಿರುವ ದರ್ಗಾದ ಪರಮ ಪೂಜ್ಯ ಸೂಫಿ ಸಂತ ಶರಣರಾದ ಹಜರತ್ ಸೈಯದ್ ಷಾ ಖಲೀಲುಲ್ಲಾ ಖಾದ್ರಿ ಇವರ ೫೯ನೇ ಉರುಸು ಮತ್ತು ಸುಪುತ್ರರಾದ ಪರಮ ಪೂಜ್ಯ ಸೂಫಿ ಸಂತ ಹಜರತ್ ಸೈಯದ್ ಷಾ ಮುಸ್ತಫಾ ಖಾದ್ರಿ ಆಸ್ತಾನ ಹೈದರಿ ಇವರ ೪೨ನೇ ಉರುಸು ಹಾಗೂ ಮೊಮ್ಮಗನಾದ ಸೂಫಿ ಸಂತ ಹಜರತ್ ಸೈಯದ್ ಷಾ ಖಲೀಲುಲ್ಲಾ ಖಾದ್ರಿ ಇವರ ೪ನೇ ಉರುಸು ಷರೀಫ್ ಮೇ-೨೩ ರಿಂದ ೨೫ ವರೆಗೆ ನಡೆಯಲಿವೆ.
ಮೇ-೨೩ ರಂದು ಗಂಧ: ರಾತ್ರಿ ೮ ಗಂಟೆಗೆ ಉಪ್ಪಾರ ಓಣಿಯ ಹತ್ತಿರ ಜುಲಾಯಿ ವಾಡಾ ೨೧ನೇ ವಾರ್ಡ್ನಲ್ಲಿರುವ ಸದರಿ ಧರ್ಮಗುರುಗಳ ಮನೆಯಿಂದ ಗಂಧವು ಭಗೀರಥ ಸರ್ಕಲ್, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್ ಮುಖಾಂತರ ಪೀರಜಾದಾ ರಸ್ತೆಯಲ್ಲಿರುವ ದರ್ಗಾಗೆ ತಲುಪಿ, ಗಂಧ ಲೇಪನ, ಫಾತೇಹಾ ಖ್ವಾನಿ, ಖತ್ಮೆ ಖುರಾನ್ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಸದರಿ ದರ್ಗಾಗೆ ವಂಶಪರAಪರೆಯಾಗಿ ಅಪಾರ ಶಿಷ್ಯ ಬಳಗದವರು ಇದ್ದು, ಕರ್ನಾಟಕ, ಮಹಾರಾಷ್ಟç, ಗೋವಾ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿರೆತರಿಖತ್ ಹಜರತ್ ಸೈಯದ್ ಷಾ ಜಮಾಲುಲ್ಲಾ ಖಾದ್ರಿ ಸಜ್ಜಾದಾ ನಶೀನ್ ರೋಜಾ ದರ್ಗಾ ಷರೀಫ್ ಕರ್ನೂಲ್ ಆಂಧ್ರ ಪ್ರದೇಶ ಇವರು ಭಾಗವಹಿಸುವರು. ಅಲ್ಲದೇ ರಾಜ್ಯದ ನಾನಾ ಭಾಗಳಿಂದ ವಿವಿಧ ದರ್ಗಾಗಳ ಪೀಠಾಧಿಪತಿಗಳು ಧರ್ಮಗುರುಗಳು ಭಾಗವಹಿಸುವರು.
ಮೇ-೨೪ ಉರುಸು: ರಾತ್ರಿ ೯ ಗಂಟೆಗೆ ಪಿರೆತರಿಖತ್ ಹಜರತ್ ಸೈಯದ್ ಷಾ ಅಜೀಜುಲ್ಲಾ ಖಾದ್ರಿ ನಿವೃತ್ತ ಪ್ರಾಧ್ಯಾಪಕರು ಜಾಮಿಯಾ ನಿಜಾಮಿಯಾ ಅರೆಬಿಕ್ ಯುನಿವರ್ಸಿಟಿ ಹೈದರಾಬಾದ ಇವರ ಬಯಾನ್ (ಧರ್ಮಪ್ರವಚನ) ಇರುತ್ತದೆ ನಂತರ ಹೈದ್ರಾಬಾದ್‌ನ ಪ್ರಖ್ಯಾತ ಉಸ್ಮಾನ್ ಬಂದಾನವಾಜ್ ತಂಡದವರಿAದ ಖವ್ವಾಲಿ ಕಾರ್ಯಕ್ರಮ ಇರುತ್ತದೆ.
ಮೇ-೨೫ ಜಿಯಾರತ್: ಬೆಳಿಗ್ಗೆ ೧೧:೦೦ ಗಂಟೆಗೆ ದರ್ಗಾದಲ್ಲಿ ಫಾತೇಹಾ ಖ್ವಾನಿ, ಖತ್ಮೆ ಖುರಾನ್ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ ೯:೦೦ ಗಂಟೆಗೆ ಉಲೆಮಾ (ಧಾರ್ಮಿಕ ಗುರುಗಳು) ಗಳಿಂದ ಬಯಾನ್ ಹಾಗೂ ಶಿಷ್ಯ ಬಳಗವದವರಿಂದ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಪೀರೆತರಿಖತ್ ಹಜರತ್ ಸೈಯದ್ ಷಾ ಸನಾಉಲ್ಲಾ ಖಾದ್ರಿ ಸಜ್ಜಾದಾ ನಶೀನ್ (ಪೀಠಾಧಿಪತಿ), ಆಸ್ತಾನ-ಎ-ಹೈದರಿ ವ ರೋಜಾ-ಎ-ಹೈದರಿ ಪೀರಜಾದಾ ಮೊಹಲ್ಲಾ ಗಂಗಾವತಿ ಇವರ ನೇತೃತ್ವದಲ್ಲಿ ನಡೆಯುತ್ತ

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.