Shekharappa Muttena to be conferred with the Achievement Award




ಕುಷ್ಟಗಿ : ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ರುದ್ರಯ್ಯ ತಾತನವರ ಶ್ರೀ ಮಠದ 25 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಧರ್ಮ ಸಭೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶೇಖರಪ್ಪ ಅವರಗೆ ಸಾಧನೆಯ ಶಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶೇಖರಪ್ಪ ಅವರ ಸಮಾಜ ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತಾನಾಡಿದ ಅವರು. ತಾವರಗೇರಾ ಪಟ್ಣದಲ್ಲಿ ಸುಮಾರು 25 ವರ್ಷಗಳಿಂದ ಶ್ರೀ ರುದ್ರಯ್ಯ ಹಿರೇಮಠ್ ಸ್ವಾಮೀಜಿಗಳ ಮಠದ ವತಿಯಿಂದ ಪ್ರತಿ ವರ್ಷವೂ ಕೂಡ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲೆಮರೆ ಕಾಯಿಯಂತೆ ಇರುವ ಸಾಧಕರನ್ನು ಹುಡುಕಿ ಕರೆತಂದು ಪ್ರಶಸ್ತಿ ನೀಡಿ ಗೌರಿಸುವುದು ಅತ್ಯಂತ ಸಂತಸದ ಸಂಗತಿ. ಶ್ರೀ ಮಠದಿಂದ ಧರ್ಮ ಕಾರ್ಯಗಳು, ಸಮಾಜ ಸೇವೆಗಳು, ಹಲವಾರು ಮಹತ್ಕಾರ್ಯಗಳು ನಡೆಯುತ್ತಲೇ ಬಂದಿದೆ ಎಂದರು.
ನಮ್ಮ ಗ್ರಾಮದ ಜನರ ಅಭಿವೃದ್ಧಿ ಹೊಂದಬೇಕಾದರೆ ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದ್ದು ಇದೇ ವರ್ಷನೇ ಸಿದ್ಧಾರೂಢ ಮಠಕ್ಕೆ ಪೀಠಾವಧಿಪತಿಗಳಾಗಿ ಈ ವೇದಿಕೆಯಲ್ಲಿ ದಿವ್ಯ ಸಾನಿಧ್ಯವನ್ನು ಸ್ವಾಮೀಜಿಗಳಿಂದ ಮತ್ತು ರುದ್ರಯ್ಯ ಹಿರೇಮಠ್ ಮಠದ ಮುಖಾಂತರ ತಾವರಗೇರಾ ಜನರಿಗೆ ಆಧ್ಯಾತ್ಮಿಕವಾದಂತ ಬದುಕು ಕಟ್ಟಿಕೊಳ್ಳಲು ಮಠದಿಂದ ಸಾಧ್ಯವಾಗುತ್ತದೆ ಅಂತ ತಿಳಿಸುತ್ತಾ , ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವವನ್ನು ನೀಡುವ ಶ್ರೀ ಮಠವು ನೀಡುತ್ತಿದೆ ಇಂತಹ ಮಠಕ್ಕೆ ಶ್ರೀಮಠದ ಭಕ್ತನಾಗಿ ಸೇವೆಯಲ್ಲಿ ಬೆಂಬಲವಾಗಿರುತ್ತೇನೆ ಬೆಂಬಲ ಎಂದು ಹೇಳಿದರು.
ಸಮಾಜದ ಉಳುವಿಗಾಗಿ ಎಲೆಮರೆ ಕಾಯಿಯಂತೆ ಸಮಾಜ ಸೇವೆ ಮತ್ತು ಧಾರ್ಮಿಕ ಸೇವೆ ಮಾಡುತ್ತಾ ಯಶಸ್ಸು ಕಂಡು ಅನೇಕ ಸಂಘ ಸಂಸ್ಥೆಗಳಿ ಪ್ರಶಸ್ತಿಗಳಿಗೆ ಬಾಜನನಾಗಿದ್ದೇನೆ. ನನ್ನ ಸಾಧನೆ ಭಾರತ ದೇಶದಲ್ಲಷ್ಟೆ ಅಲ್ಲದೇ ಓಮನ್ ದೇಶದಲ್ಲಿ ನಡೆದ ಅಂತರಾಷ್ಟೀಯ ಮಟ್ಟದ ಗ್ಲೋಬಲ್ ಅಚಿವರ್ಸ್ ಅವಾರ್ಡ್ ನೀಡಿ ಗೌರವಿಸಿದಾಗಲೂ ನನಗೆ ಅಷ್ಟೊಂದು ಸಂತೋಷ ಆಗಿರಲಿಲ್ಲ. ಆದರೆ ನನ್ನ ಹುಟ್ಟೂರಾದ ತಾವರಗೇರಾದಲ್ಲಿ ನನಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ಪಟ್ಟರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರುದ್ರಯ್ಯ ಹಿರೇಮಠ್ ಮತ್ತು ಶ್ರೀ ಅಭಿನವ ಚಂದ್ರಶೇಖರ್ ಮಹಾಸ್ವಾಮಿಗಳು ಮಾದಾಪುರ, ತಾವರಗೇರಾದ ಸಿದ್ದಾರೂಢ ಮಹಾಸ್ವಾಮಿಗಳು, ಜಿಗಿರಿಯ ಶ್ರೀಗಳು ಅಂಕಲಿಮಠದ ಮಹಾಸ್ವಾಮಿಗಳು ಹಾಗೂ ಹಿರಿಯರಾದ ನಾರಾಯಣ ಸಿಂಗ್ ಆನೇರಿ, ಸಾಗರ್ ಬೇರಿಗಿ, ಅರುಣ್ ನಾಲತವಾಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಶಿಕ್ಷಕರಾದ ಬಸವರಾಜ್ ಅಂಗಡಿ ಅವರು ನಿರೂಪಿಸಿದರು.
ಇದೇವೇಳೆ ಸಂತೋಷ ಸರನಾಡಗೌಡ್ರು, ಗೀತಾಶ್ರೀ ಬೆಂಗಳೂರು ಮತ್ತು ನಿವೃತ್ತ ಸೈನಿಕರಾದ ಹಂಪಯ್ಯ ಉಡುಮಕಲ್ ಅವರಿಗೆ ಸಾಧನೆಯ ಶಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು