Sanskar becomes meaningful only when human values are developed, Somnath Sri




ನವಲಿ: ಸಿಂಹವಾಹಿನಿ ಸಂಸ್ಕೃತ ಸಂಸ್ಕಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಜಡಿಸಿದ್ದೇಶ್ವರ ಮಠದಲ್ಲಿ ಜರುಗಿದ 30 ದಿನಗಳ ಪರ್ಯಂತ ಸಾಗಿಬಂದ ನಾಲ್ಕನೇ ವರ್ಷದ ವೈದ್ಧಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಹಾಗೂ ಜಂಗಮ ವಟುಗಳ ಅಯ್ಯಾಚಾರ ದೀಕ್ಷೆ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಸಿಂಧನೂರಿನ ರಂಭಾಪೂರಿ ಶಾಖಾ ಮಠ ಪೂಜ್ಯ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕೇವಲ ವಿದ್ಯೆಯಷ್ಟೆಯಲ್ಲಾ ನಾವು ನಮ್ಮನ್ನು ಬೆಳೆಸಿಕೊಳ್ಳುವ ರೀತಿ-ನೀತಿಗಳಲ್ಲಿ ಬದಲಾವಣೆ ಬೇಕಾಗಿದೆ. ವ್ಯಕ್ತಿಗೆ ಉತ್ತಮ ಸಂಸ್ಕಾರ ಸಿಕ್ಕಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಬದುಕುವುದು ಭಗವಂತನಿಗೆ ಪ್ರಿಯವಾಗುವುದು. ಮಾನವೀಯ ಮೌಲ್ಯದ ಅರಿವಿರಬೇಕು. ಮಾನವೀಯತೆ ಬೆಳೆದಾಗ ಮಾತ್ರ ಮನುಷ್ಯ ಮನುಷ್ಯನಾಗುತ್ತಾನೆ” ಈ ಶಿಬಿರ ಚತುರ್ವೇದಂತೆ ನಾಲ್ಕು ವರ್ಷವುಕೂಡಾ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರವೇ ತಳಪಾಯ. ಈ ನಿಟ್ಟಿನಲ್ಲಿ ಈ ಶಿಬಿರ ಪೂರಕವಾಗಿದೆ” ಎಂದರು. ಪೂಜ್ಯ ಅಮರಗುಂಡ ಶಿವಾಚಾರ್ಯರು ಹಾಗೂ ಶ್ರೀ ಸಿದ್ದರಾಮ ಶರಣರು ರೌಡಕುಂದ ಮಠ ಮಾತನಾಡಿ ಜೀವನದ ಸಾಕ್ಷಾತ್ಕಾರ್ಯಕ್ಕೆ ಇಂತ ಶಿಬಿರಗಳು ಅವಶ್ಯಕವಾಗಿವೆ ನಮ್ಮ ಧರ್ಮ ಸಂಸ್ಕೃತಿ ಆಚರಣೆ್ಗಳು ಮತ್ತು ಜೀವನದ ಮೌಲ್ಯಗಳ ಕುರಿತು ಶಿಬಿರಾರ್ಥಿಗಳ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಗೀತ ಸೇವೆಯನ್ನ ಧರ್ಮರಾಜ ಪಾಟೀಲ್ ಗವಾಯಿಗಳು, ಆದರ್ಶ ಜಾದಲ್ ತಬಾಲವಾದಕರು ನೆಡೆಸಿಕೊಟ್ಟರು, ಶಿಬಿರ ಯಸಶ್ವಿಗೊಳ್ಳಲು ಕಾರಣಿಕರ್ತರಾದ ದಾನಿಗಳಿಗೆ ಹಾಗೂ ಸೇವೆ ಸಲ್ಲಿಸಿದ ಮಹನಿಯರಿಗೆ ಗೌರವ ಸನ್ಮಾನ ಜರಗಿತು, ಶಿಬಿರದ ಮುಖ್ಯಸ್ಥರಾದ ಮಾರ್ಕಂಡಯ್ಯ ಸ್ವಾಮಿ ನವಲಿಯವರು ಪ್ರಮಾಣ ಪತ್ರ ವಿತರಿಸಿದರು ಕಾರ್ಯಕ್ರಮದಲ್ಲಿ ಪರಮ ಪೂಜ್ಯರು, ಗಣ್ಯಮಾನ್ಯರು, ಗ್ರಾಮದ ಹಿರಿಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು, ಪ್ರವಚನಕಾರ ಸಿದ್ದರಾಮೇಶ ಸ್ವಾಮಿ ನಿರುಪಿಸಿದರು,